ಇಶಾ ನಮಾಜ್ ನಂತರ ಸೂಫಿ ಕತೆ

ತಮ್ಮ ಕಾಲದ ಪ್ರಸಿದ್ಧ ಸೂಫಿ ಸಂತರೂ, ವಿದ್ವಾಂಸರೂ, ಪ್ರಕಾಂಡ ಪಂಡಿತರೂ, ಖ್ಯಾತ ನ್ಯಾಯಶಾಸ್ತ್ರಜ್ಞರೂ ಆದ ಇಮಾಮ್ ಅಹ್ಮದ್ ಇಬ್ನ್ ಹಂಬಲ್ ರವರು ಒಮ್ಮೆ ಪ್ರಯಾಣಿದಲ್ಲಿದ್ದಾಗ ಒಂದು ಪಟ್ಟಣವನ್ನು ಪ್ರವೇಶಿಸಿದರು. ಸಂತಶಿಶು ಇಮ್ತಿಯಾಜ್ ಖಾನ್ ಅವರು ಸೂಫಿ ಕತೆಗಳನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ತಾನು ಇಮಾಮ್ ಹಂಬಲ್ ಎಂದು ಅವರು ತನ್ನನ್ನು ಯಾರಿಗೂ ಪರಿಚಯಿಸಲಿಲ್ಲ. ತನ್ನ ಪರಿಚಯ ಹೇಳಿದರೆ ಜನರೆಲ್ಲ ತನ್ನನ್ನು ಗೌರವಾದರಾಗಳಿಂದ ಸ್ವಾಗತಿಸುವರು, ಅದು ಸಾತ್ವಿಕತೆಯೂ ಅಲ್ಲ, ಸಂತತನವೂ ಅಲ್ಲ ಎಂದು ಅವರು ಭಾವಿಸಿದ್ದರು. ಅದು ಅವರ ವಿನಯವಂತಿಕೆ ಮತ್ತು ಮೌಲ್ಯಗಳ ಶ್ರೀಮಂತಿಕೆಗೆ ಸಾಕ್ಷಿಯಾಗಿತ್ತು.

ಹಗಲು ಕಳೆದು ಆಗಲೇ ರಾತ್ರಿಯಾಗಿತ್ತು. ಇಶಾ ನಮಾಜ್ ನಂತರ, ಅವರು ಆ ರಾತ್ರಿ ಮಸೀದಿಯಲ್ಲೇ ಉಳಿದುಕೊಂಡು ಮರುದಿನ ನಸುಕಿನಲ್ಲಿ ಪ್ರಯಾಣ ಬೆಳೆಸಬೇಕೆಂದು ನಿಶ್ಚಯಿಸಿದರು.

ಇಮಾಮ್ ಹಂಬಲ್ ಮಸೀದಿಯ ಉಸ್ತುವಾರಿ ವಹಿಸಿದ ವ್ಯಕ್ತಿಯನ್ನು ಕಂಡು, ಆ ರಾತ್ರಿ ಮಸೀದಿಯಲ್ಲೇ ಕಳೆಯಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಅವನು ಇಮಾಮರನ್ನು ಗುರುತಿಸಲಿಲ್ಲ. ಹಾಗಾಗಿ ಅವರನ್ನು ಮಸೀದಿಯಲ್ಲಿ ಉಳಿಸಿಕೊಳ್ಳಲು ನಿರಾಕರಿಸಿದನು.

ಹತ್ತಿರದಲ್ಲಿಯೇ ಇದ್ದ ಒಬ್ಬ ಬೇಕರ್, ಈ ದೃಶ್ಯವನ್ನು ನೋಡುತ್ತಿದ್ದ. ಅವನಿಗೆ ಪ್ರಸನ್ನ ನಡತೆಯ ಇಮಾಮರ ಮೇಲೆ ಕರುಣೆ ಬಂದಿತು. “ಮಹಾನುಭಾವರೇ, ತಾವು ನನ್ನ ಮನೆಯಲ್ಲಿದ್ದು ರಾತ್ರಿ ಕಳೆಯಿರಿ” ಎಂದು ಇಮಾಮರನ್ನು ಆದರದಿಂದ ಆತ ಆಹ್ವಾನಿಸಿದ.

ಇಮಾಮ್ ಅಹ್ಮದ್ ಅವನನ್ನು ಹಿಂಬಾಲಿಸಿದರು. ಅವನು ಅತ್ಯಂತ ಪ್ರೀತಿಯಿಂದ ಇಮಾಮರನ್ನು ತನ್ನ ಮನೆಯೊಳಗೆ ಸ್ವಾಗತಿಸಿದ. ಸಣ್ಣ ಮುರುಕು ಗುಡಿಸಲಿನಲ್ಲಿ ವಾಸವಿದ್ದ ದೊಡ್ಡ ಮನುಷ್ಯನಾತ. ಹಿಟ್ಟನ್ನು ಕಲಸಿ, ಬೆಂಕಿಯನ್ನು ಉರಿಸಿ, ಒಲೆಯಿಂದ ಬಿಸಿ ಬಿಸಿ ರೊಟ್ಟಿಗಳನ್ನು ಬೇಯಿಸಿ ಕೊಟ್ಟು ಸತ್ಕರಿಸಿದ. ಅವನು ತನ್ನ ಕೆಲಸದುದ್ದಕ್ಕೂ ತನ್ನ ಪ್ರಭುವಿನ ಶ್ರೀನಾಮವನ್ನು ಜಪಿಸುತ್ತಿದ್ದ.

ರಾತ್ರಿ ಕಳೆದು ಬೆಳಕು ಹರಿಯಿತು. ಬೆಳಿಗ್ಗೆ ಇಮಾಮ್ ಅಹ್ಮದ್ ರವರು ನೀವು ಯಾವಾಗಲೂ ಏನನ್ನೋ ಉಚ್ಚರಿಸುತ್ತೀರಲ್ಲ, ಏನದು? ಎಂದು ಬೇಕಂತಲೇ ಕುತೂಹಲದಿಂದ ಕೇಳಿದರು.
ಬೇಕರ್ , “ನಾನು ನನ್ನ ಪ್ರಭುವನ್ನು ಸ್ಮರಿಸುತ್ತೇನೆ. ಇದು ನನ್ನ ಸಹಜ ಅಭ್ಯಾಸ, ಎಲ್ಲ ಆತನ ದಯೆ” ಎಂದನು.

ಇಮಾಮ್ ಅಹ್ಮದ್ ರವರು “ನೀವು ಆ ಅಭ್ಯಾಸದಿಂದ ಏನು ಪ್ರತಿಫಲ ಬಯಸುತ್ತೀರಿ?” ಬೆರಗಿನಿಂದ ಕೇಳಿದರು.

ಬೇಕರ್ ಉತ್ತರಿಸಿದನು, ನಾನು ಯಾವುದೇ ಪ್ರತಿಫಲ ಬಯಸಿ ದೇವರನ್ನು ಸ್ಮರಿಸಿವುದಿಲ್ಲ. “ದೇವನಲ್ಲಿ ನಾನು ಯಾವುದನ್ನೂ ಕೇಳುವುದಿಲ್ಲ, ಆದರೆ ಆತ ನನಗೆ ಬೇಕಾದ ಎಲ್ಲವನ್ನೂ ಕೊಡುತ್ತಾನೆ”. ಆದರೆ ಒಂದು…

“ಆ ಒಂದು ಏನು? ಕೇಳಿದರು ಇಬ್ನ್ ಹಂಬಲ್.

ಬೇಕರ್ ಪ್ರತಿಕ್ರಿಯಿಸಿದನು “ನನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಆ ಪ್ರಸಿದ್ಧ ಇಮಾಮ್ ಅಹ್ಮದ್ ಇಬ್ನ್ ಹಂಬಲ್ ರವರನ್ನು ನೋಡಲು ನಾನು ಕಾತರನಾಗಿದ್ದೇನೆ. ಆ ಸುಯೋಗ ಎಂದು ಬರತ್ತೋ ಎನ್ನುತ್ತ ನೋಂದುಕೊಂಡನು.

ಇದನ್ನು ಕೇಳಿ ಇಮಾಮರ ಕಣ್ಣುಗಳು ತೇವಗೊಂಡವು. ಅವರು ಬೇಕರ್‌ನಿಗೆ “ಅಯ್ಯಾ ಮಹಾನುಭಾವನೇ, ನಾನೇ ಅಹ್ಮದ್ ಇಬ್ನ್ ಹಂಬಲ್! ಆ ದೇವನು ನೀನಿದ್ದಲ್ಲಿ ನನ್ನನ್ನು ಕರೆತಂದಿದ್ದಾನೆ, ನಿನ್ನ ದೈವ ಸ್ಮರಣೆಯ ಪ್ರತಿಫಲವಿದು. ನಿನ್ನ ಅಭ್ಯಾಸವನ್ನು ಮುಂದುವರೆಸು, ನಿನಗೆ ಪರಲೋಕದಲ್ಲಿ ಉತ್ತಮ ಪ್ರತಿಫಲವಿದೆ ” ಎಂದು ಅವನನ್ನು ಹರಸಿ ತಮ್ಮ ಮುಂದಿನ ಪ್ರಯಾಣಕ್ಕೆ ಅನುವಾದರು.

ಬೇಕರ್ ನಿಗೆ ನಂಬಲಾಗಲಿಲ್ಲ ಅವನು ಒಮ್ಮೆ ತನ್ನನ್ನು ಒಮ್ಮೆ ಇಮಾಮರನ್ನು ದುರುದುರು ನೋಡುತ್ತ ನಿಂತುಕೊಂಡಿದ್ದ.


  • ಸಂತಶಿಶು ಇಮ್ತಿಯಾಜ್ ಖಾನ್ – ಸಂತಶಿಶು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading