ಕರ್ತವ್ಯನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿ, ತೋರಬಾರದು ಎಂದಿಗೂ ಬೇಜವಾಬ್ದಾರಿ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನಮ್ಮ ಈ ಜೀವನ ಒಂದು ಸುಂದರ ಪಯಣ
ಜವಾಬ್ದಾರಿ ಅರಿತು ಮಾಡಬಾರದು ಕಾಲಹರಣ
ಅರಿತು ನಡೆದಾಗಷ್ಟೇ ಬದುಕಿಗೊಂದು ಬೆಲೆ
ದುಡಿಮೆಯಿಂದ ಸಿಗುವುದು ನಮಗೊಂದು ನೆಲೆ
ಕರ್ತವ್ಯನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿ
ತೋರಬಾರದು ಎಂದಿಗೂ ಬೇಜವಾಬ್ದಾರಿ
ಸಮಾಜಕ್ಕೆ ನೀಡಬೇಕು ಏನಾದರೂ ಕೊಡುಗೆ
ಭಂಗತರಬಾರದು ನಾವು ಸುತ್ತಲಿನ ನೆಮ್ಮದಿಗೆ
ಸಾಮಾಜಿಕ ಕಾಳಜಿಯನ್ನು ಹೊಂದಿರಬೇಕು
ಅದರಿಂದ ದೊರೆಯುವುದು ಮನಸ್ಸಿಗೆ ತೃಪ್ತಿ
ನನಗಾಗಿ ನಮ್ಮ ಸಮಾಜಕ್ಕಾಗಿ ದುಡಿಯಬೇಕು
ಆಗ ಸುಳಿಯದು ಎಂದೆಂದೂ ಜೀವನದಿ ಅತೃಪ್ತಿ
ಆಗಬೇಕು ಕುಟುಂಬದ ಲಾಲನೆ ಪಾಲನೆ
ಕೊಡಬಾರದು ನಾವು ಯಾರಿಗೂ ವೇದನೆ
ಯಾರನ್ನೋ ಮೆಚ್ಚಿಸುವ ಹುಚ್ಚು ಬೇಕಿಲ್ಲ
ದುಡಿದು ಪ್ರಾಮಾಣಿಕವಾಗಿ ಬಾಳಬೇಕೆಲ್ಲ
ಕರ್ತವ್ಯದಲ್ಲಿ ಯಾವುದೂ ಮೇಲು ಕೀಳಿಲ್ಲ
ನಾಡು ನುಡಿ ರಕ್ಷಣೆಗೆ ಜಾಗೃತವಾಗಿರಬೇಕೆಲ್ಲ
ಮನದ ಮಾತಿಗೆ ಸದಾ ಕಿವಿಯಾಗಿರಬೇಕು
ದ್ವೇಷ ಅಸೂಯೆಯನ್ನು ದೂರವಿಡಬೇಕು
ಜೀವನದ ಹಾದಿಯಲ್ಲಿ ಕಷ್ಟನಷ್ಟ ಏನೇ ಬರಲಿ
ನಮ್ಮೊಳಗೆ ಸದಾ ಮಾನವೀಯತೆಯಿರಲಿ
ಕರ್ತವ್ಯದಲ್ಲಿ ಎಂದೆಂದೂ ಜಾಗೃತೆಯಿರಲಿ
ಕೌಟುಂಬಿಕ ನಿರ್ವಹಣೆಗೂ ಕಾಳಜಿಯಿರಲಿ
- ನಾಗರಾಜ ಜಿ. ಎನ್. ಬಾಡ, ಕುಮಟ
