ಸಂಧಿವಾತಗಳಿಗೆ ಪುಟ್ಟ ಪರಿಹಾರವನ್ನು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಬೇಕಾಗುವ ಸಾಮಾನುಗಳು :
ಹೊಂಗೆ ಮರದ ಎಲೆಗಳು – ಒಂದು ಮುಷ್ಟಿ
ಕಾಳುಮೆಣಸು – ನಾಲ್ಕು
ಎಳ್ಳೆಣ್ಣೆ – ಒಂದು ಕಪ್

ಮಾಡುವ ವಿಧಾನ :
ಸೊಂಟದ ನೋವು, ಕಾಲು ನೋವು, ಸಂಧಿವಾತ ಬರಲು ಕಾರಣ ಹಲವಾರು. ಸುಮ್ಮನೆ ಬಂದ ನೋವಾದರೆ ಒಂದು ಮುಷ್ಟಿ ಹೊಂಗೆ ಮರದ ಎಲೆಗಳನ್ನು ಜಜ್ಜಿ ನಾಲ್ಕು ಕಾಳು ಮೆಣಸು ಕುಟ್ಟಿ ಅರೆ ಬರೆ ಪುಡಿ ಮಾಡಿ ಒಂದು ಕಪ್ ಎಳ್ಳೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೆರೆಸಿ ಎಲೆ ಗರಿಗರಿ ಆದ ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಎರಡು ಬಾರಿ ಹಚ್ಚಿ ಮಸಾಜ್ ಮಾಡಿ ತಕ್ಕಮಟ್ಟಿಗೆ ಗುಣವಾಗುತ್ತದೆ.
ಕಾಯಿಲೆ ಬೇರೆ ಬೇರೆ ಕಾರಣಕ್ಕೆ ಬಂದಿದ್ದರೆ ಅದು ಏನು ಅಂತ ಪತ್ತೆಹಚ್ಚಿ ಸೂಕ್ತ ಔಷಧಿಗಳನ್ನು ಮಾಡಬೇಕಾಗುತ್ತದೆ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ
