ಎಲ್ಲಿ ಸಿಗುವುದು ನ್ಯಾಯ? ಎಂದು ಸಿಗುವುದು ನ್ಯಾಯ?

ಡೊಂಬರು ಬದುಕೆ ಹಾಗೆ, ಹುಟ್ಟಿದ ನಾಡಲ್ಲಿ ತಮಗೊಂದು ನೆಲೆ ಇಲ್ಲದೆ ಸರಿಯಾದ ವಿಳಾಸವಿಲ್ಲದೆ, ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಲೆ ಬಂದಿದ್ದಾರೆ. 25 ವರ್ಷದ ಈ ಹೋರಾಟದಲ್ಲಿ ಅದೆಷ್ಟೊ ಜೀವಗಳು ನೊಂದು ಬೆಂದವು. ಆದರೆ ನಮ್ಮ ಸರಕಾರ ಮಾತ್ರ ಕಣ್ಣು ಮುಚ್ಚಿ ಕೂತಿದೆ.ಯುವ ಲೇಖಕ ವಿಕಾಸ್. ಫ್. ಮಡಿವಾಳರ ಅವರ ಲೇಖನದಿಂದ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ, ತಪ್ಪದೆ ಮುಂದೆ ಓದಿ …

25 ವರ್ಷದ ಹಿಂದೆ ಮೈಸೂರಿನ ಹುಣಸೂರಿನಿಂದ ವಲಸೆ ಬಂದ ಡೊಂಬರ ಜನಾಂಗವದು. ಅವರ ಹಿರಿಯರು ನಾಟಕ, ಸರ್ಕಸ್, ದೊಂಬರಾಟ ಹಾಗೂ ಇನ್ನಿತರ ಕಲೆಗಳಲ್ಲಿ ಪರಂಗತರಾಗಿ ಊರೂರು ತಿರುಗುತ್ತಿದ್ದರು. ವಲಸೆ ಹೋಗಿ ಊರಾಚೆ ನೆಲೆ ಹೂಡುವ ಕಾರಣಕ್ಕೆ ಊರಲ್ಲಿರುವ ಆಸ್ತಿಯನ್ನು ಮಾರಿ ತಮ್ಮ ಕಲೆಗೆ ಬಳಸಿಕೊಂಡಿದ್ದರು. ದಿನಗಳು ಕಳೆದವು ವರ್ಷಗಳು ಉರುಳಿದವು. ಮನೆಗೊಂದು ಟಿ.ವಿ ಕೈಗೊಂದು ಫೋನು ಬಂದು, ನಾಟಕ ಸರ್ಕಸ್ ನೋಡುವವರು ಕಡಿಮೆಯಾಗಿ ಕಲೆಗೆ ಬೆಲೆ ಇಲ್ಲದಂತಾಯಿತು. ಆ ಕಲೆಯನ್ನು ನಂಬಿ ಜೀವನ ನಡೆಸುತ್ತಿದ್ದ ಅದೆಷ್ಟೊ ಕುಟುಂಬಗಳು ಬೀದಿಗೆ ಬಿದ್ದವು.

ಹೀಗೆ ಡೊಂಬರು ಕಲೆಗೆ ಬೆಲೆ ಸಿಗದೆ ತಮ್ಮ ಜೀವನೊಪಾಯಕ್ಕೆ ಹಾನಗಲ್ ಹಾವೇರಿಯ ಸುತ್ತಮುತ್ತಲ ಪ್ರೆದೇಶದಲ್ಲಿ ಗುಡಿಸಲು ಹಾಕಿ ಜೀವಿಸ ತೊಡಗಿದರು. ಹೊಟ್ಟೆಪಾಡಿಗಾಗಿ ಮನೆಕಟ್ಟುವ ಕೆಲಸ, ಭಜನೆ, ಮಣ್ಣು ಹೊರವುದು, ಗಾರೆ ಕೆಲಸಕ್ಕೆ ಹೋದರು. ತಾವಿರುವ ಗುಡಿಸಿಲಿನಲ್ಲಿ ನೀರು ಮತ್ತು ಕರೆಂಟಿನ ಸೌಲಭ್ಯವಿಲ್ಲ. ಒಂದು ಕಿ.ಮೀ ದೂರ ಹೋಗಿ ನೀರು ತರಬೇಕು. ಕರೆಂಟು ಇಲ್ಲದ ಕಾರಣ ಮಕ್ಕಳು ಲಾಠಿನು ಇಲ್ಲ, ದೀಪದ ಬೆಳಕಿನಲ್ಲಿ ಓದಬೇಕು. ಗುಡಿಸಿಲಾದ ಕಾರಣ ಹಾವು ಹುಪ್ಪಡೆಗಳು ಗುಡಿಸಲೊಳಗೆ ಬರುತ್ತವೆ. ಸ್ನಾನಗೃಹವಿಲ್ಲದೆ ಹೆಣ್ಣುಮಕ್ಕಳು ಪರದಾಡುತ್ತಾರೆ. ಮಳೆಗಾಲದಲ್ಲಿ ಗುಡಿಸಲೊಳಗೆ ನೀರು ಹರಿದು ಇಡಿ ಗುಡಿಸಲೆ ಹಾಳಾಗುತ್ತದೆ. 2018 ರಲ್ಲಿ ಭೀಕರ ಮಳೆಯಿಂದಾಗಿ ಅವರ ಗುಡಿಸಲುಗಳು ನಾಶವಾಗಿದ್ದವು. ಆಗ ಅವರಿವರ ಸಹಾಯದಿಂದ ಗಂಜಿ ಕೇಂದ್ರದಲ್ಲಿ ವಾಸಿಸಲಾರಂಭಿಸಿದರು. ರಾಜಕಾರಣಿಗಳು ಅಧಿಕಾರಿಗಳು ಅಲ್ಲೆ ಉಳಿಯಿರಿ, ನಿಮಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತೇವೆದು ಸುಳ್ಳು ಮಾತುಗಳನ್ನಾಡಿ ಕೆಲ ದಿನಗಳ ನಂತರ ಗಂಜಿ ಕೇಂದ್ರದಿಂದ ಆಚೆ ದಬ್ಬಿದರು. ತಿನ್ನಲು ಆಹಾರವಿಲ್ಲದೆ, ಉಳಿಯಲು ನೆಲೆಯಿಲ್ಲದೆ ಅದೆಷ್ಟೊ ಕಷ್ಟಗಳನ್ನು ಅವರು ಅನುಭವಿಸಿದರು. ಕರೋನ ಕಾಲದಲ್ಲಿ ಮಾಡಲು ಕೆಲಸವಿಲ್ಲದೆ, ಉಪವಾಸ ಬದುಕಿದ್ದರೆ. ಕಣ್ಣಿರಿನಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಂಡಿದ್ದಾರೆ.

ತಮಗೆ ಉಳಿಯಲು ಒಂದು ನೆಲೆ ಕೊಡುವಂತೆ ಸರ್ಕಾರಕ್ಕೆ ಅರ್ಜಿ ಕೊಡುತ್ತಲೆ ಬಂದ ಡೊಂಬರು, ಬೆಂಗಳೂರಿನ ವಿಧಾನಸೌಧದಿಂದ ನಗರಸಭೆಯವರೆಗೂ ಹೆಜ್ಜೆ ಬೆಳೆಸಿದ್ದರು.ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೈ ಚಾಚಿ ಬೇಡಿಕೊಂಡರು. ತಮ್ಮ ನೋವನ್ನು ಹೇಳಿಕೊಂಡು ಅತ್ತರು. ಆದರೆ ಅವರಿಗೆ ಸಿಕ್ಕಿದ್ದು ಮಾತ್ರ ಸುಳ್ಳು ಆಶ್ವಾಸನೆಯಷ್ಟೆ. ಹಿಂದೊಬ್ಬ ಪ್ರತಿಷ್ಟಿತ ರಾಜಕಾರಣಿ ಚುನಾವಣೆ ಸಮಯದಲ್ಲಿ ಅವರ ಹೆಸರಿನಲ್ಲಿ ಜಾಗ ಮಂಜೂರುಮಾಡಿ ದಾಖಲೆಗಳನ್ನು ಕೊಟ್ಟರು. ಆದರೆ ದಾಖಲೆಗಳಲ್ಲಿದ್ದ ವಿಳಾಸದಲ್ಲಿ ಜಾಗಗಳೆ ಇರಲಿಲ್ಲ. ಆ ರಾಜಕಾರಣಿ ನಕಲಿ ದಾಖಲೆ ನೀಡಿ ವೋಟು ಹೊಡೆಯುವ ಪ್ರಯತ್ನ ಮಾಡಿದ್ದ. ಇದರ ಬಗ್ಗೆ ಹೋರಾಟ ನಡೆಸಿದಾಗ ಯಾವ ಅಧಿಕಾರಿಯು ತಲೆ ಕೆಡಿಸಿಕೊಳ್ಳಲಿಲ್ಲ.

ಇವರ ಹೋರಾಟ ತೀವ್ರವಾದಾಗ ಎಚ್ಛೆತ್ತ ಸರಕಾರ ಒಂದೆರಡು ಸೈಟುಗಳನ್ನು ಕೊಡಿಸಿತು. ಅವುಗಳು ಊರಾಚೆ ನಾಲ್ಕೈದು ಕಿ.ಮೀ ದೂರವಿದ್ದವು ಹಾಗೂ ಅಲ್ಲಿ ನೀರು ಕರೆಂಟಿನ ಸೌಲಭ್ಯವಿರಲಿಲ್ಲ ನಡೆದಾಡಲು ದಾರಿಯಿರಲಿಲ್ಲ. ಮನೆ ಕಟ್ಟಲು ದುಡ್ಡು ಕೊಡುತ್ತೆವೆಂದು ಹೇಳಿ ವರ್ಷಗಳೆ ಉರುಳಿದವು. ಆ ದುಡ್ಡು ಭ್ರಷ್ಟರ ಮನೆಗೆ ಸೇರಿದವೆ ಹೊರತು ಇವರಿಗೆ ಬಿಡುಗಾಸು ಸಿಗಲಿಲ್ಲ.

ಚುನಾವಣೆ ಬಂತೆಂದರೆ ಇವರ ಕಡೆ ಗಮನ ಹರಿಸುವ ರಾಜಕಾರಣಿಗಳು, ಒಂದೊಳ್ಳೆ ಮನೆ ಕಟ್ಟಿಸಿಕೊಡುತ್ತೇವೆಂದು ಆಶ್ವಾಸನೆ ಕೊಟ್ಟು ವೋಟು ಹೊಡೆಯಲು ಪ್ರಯತ್ನಿಸುತ್ತಾರೆ. ಆ ಆಕಾಂಕ್ಷೆಗಳು ಬರಿ ಮಾತಿಗಷ್ಟೆ ಸೀಮಿತವಾಗಿತ್ತೆ ಹೊರತು ನಿಜರೂಪದಲ್ಲಿ ಕಾರ್ಯಗತವಾಗಲಿಲ್ಲ.

ಎ. ಸಿ ರೂಮಿನಲ್ಲಿ ಕೂತು ಕೆಲಸಮಾಡಿ, ಆಯಿಷಾರಾಮಿ ಜೀವನ ಮಾಡಿ, ಬಡವರ ರಕ್ತ ಹೀರುತ್ತಿರುವ ಭ್ರಷ್ಟಾಚಾರಿಗಳಿಗೊಂದು ಮಾತು. ಒಮ್ಮೆ ಆ ಡೊಂಬರು ವಾಸಿಸುವ ಗುಡಿಸಿಲಿನಲ್ಲಿ ಮಲಗಿ. ಅವರಂತೆ ಉಪವಾಸವಿದ್ದು ಕೂಲಿ ಮಾಡಿ. ಒಂದೇ ಒಂದು ದಿನ ಅವರಂತೆ ಬದುಕಿ ತೋರಿಸಿ. ಆಗ ಅವರ ಕಷ್ಟಗಳು ನಿಮಗೆ ಅರ್ಥವಾಗುತ್ತದೆ. ನಿಮ್ಮ ಮಕ್ಕಳು ಶಾಲೆಗೆ ಹೋಗುವಾಗ ಅವರ ಮಕ್ಕಳು ಕೂಲಿ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳು ಮಲಗಿದಾಗ ಅವರ ಮಕ್ಕಳು ದೀಪದ ಬೆಳಕಿನಲ್ಲಿ ಓದುತ್ತಿದ್ದಾರೆ. ನೀವು ಎ.ಸಿ ರೂಮಿನಲ್ಲಿ ಕೆಲಸ ಮಾಡುವಾಗ ಅವರು ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನೀವು ಹೊಸ ಮನೆ, ಜಾಗ, ಬಂಗಾರ ಕರುದಿ ಮಾಡುತ್ತಿದ್ದಾಗ, ಅವರು ನೊಂದು ಬೆಂದು ಅದೆ ಗುಡಿಸಲಿನಲ್ಲಿ ಬದುಕುತ್ತಿದ್ದಾರೆ. ನಾನು ಕೇಳಿಕೊಳ್ಳುವುದು ಇಷ್ಟೆ. ಅವರಿಗೆ ಸರಕಾರದಿಂದ ಮನೆ ಕಟ್ಟಿಸಿಕೊಡಿ. ನೀರು ಕರೆಂಟಿನ ಸೌಲಭ್ಯವದಗಿಸಿಕೊಡಿ. ಸುಳ್ಳು ಆಶ್ವಾಸನೆ ಕೊಡದೆ ನಿಯತ್ತಿನಿಂದ ನಿಮ್ಮ ಕೆಲಸವನ್ನು ಮಾಡಿದರೆ ಅವರ ಬದುಕು ಹಸನಾಗುವುದು. ಜನರು ನಿಮ್ಮನ್ನು ನೆನೆಸುವರು.

ಇಂತಿ ನಿಮ್ಮ ಪ್ರೀತಿಯ…


  • ವಿಕಾಸ್. ಫ್. ಮಡಿವಾಳರ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW