ವಿಜಯಪುರದ ಬುರುಜಿನ ಮೇಲಿದೆ ‘ರಣರಂಗದ ರಾಜ’

ಇವನು ‘ರಣರಂಗದ ರಾಜ’ ಹೆಸರು ತುಂಬಾ ಆಕರ್ಷಣೀಯವಾಗಿದೆ ಅಲ್ಲವೇ? ಹೌದು ಇದರ ಹೆಸರು ಮಾತ್ರವಲ್ಲ ಇದರ ಸಾಧನೆಯು ಅಷ್ಟೇ ಕುತೂಹಲಕಾರಿಯಾಗಿದೆ. ಆದರೆ ಈಗ ಯಾವುದೇ ಕೆಲಸವಿಲ್ಲದೇ ಬಿದ್ದಲ್ಲೇ ಬಿದ್ದು ಬಂದ ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತಿದೆ. ಎಲ್ಲಿದೆ ಅಂತೀರಾ ಇದು ವಿಜಯಪುರ ಪಟ್ಟಣದ ಮಧ್ಯ ಭಾಗದಲ್ಲಿದೆ. ತಪ್ಪದೆ ಮುಂದೆ ಓದಿ….

ಇದೊಂದು ಬೃಹತ್ ತೋಪು. ಉರ್ದುವಿನಲ್ಲಿ ಇದಕ್ಕೆ ಮಾಡಲಾಗಿರುವ ನಾಮಕರಣ ‘ಮುಲ್ಕ್-ಇ-ಮೈದಾನ್’ ಯಾನೆ ರಣರಂಗದ ರಾಜ ಫಿರಂಗಿ ಸಿಂಹದ ಬಾಯಿಯಂತೆ ವಿಶಿಷ್ಟವಾಗಿ ರೂಪಿತವಾಗಿದೆ ಹೊರ ಮೈಯನ್ನು ಉಜ್ಜಿ ಮಿರಿ ಮಿರಿ ಹೊಳಪು ನೀಡಲಾಗಿದೆ ಇದರ ಮೇಲಿರುವ ಪಾರ್ಸಿ ಮತ್ತು ಅರಬೀ ಶಾಸನಗಳ ಪ್ರಕಾರ ಈ ಫಿರಂಗಿ ತುರ್ಕಿ ದೇಶದ ಮಹಮದ್ ಹಸನ್ ಎಂಬ ಅಧಿಕಾರಿ ನಿಜಾಮಶಾಹಿಯ ಆಳ್ವಿಕೆಯ ಕಾಲದಲ್ಲಿ ಅನೇಕ ಧಾತುಗಳ ಮಿಶ್ರಣವನ್ನು ಎರಕ ಹೊಯ್ದು ಕ್ರಿ.ಶ 1549 ರಲ್ಲಿ ನಿರ್ಮಿಸಲಾಯಿತಂತೆ. ಈ ತೋಪು ಅನೇಕ ಯುದ್ದಗಳಲ್ಲಿ ತನ್ನ ಪರಾಕ್ರಮ ತೋರಿಸಿದೆ. ಲಕ್ಷಾಂತರ ಜನರ ಬಲಿ ತೆಗೆದುಕೊಂಡಿದೆ ಇದರಲ್ಲಿ ಮದ್ದು ಗುಂಡುಗಳನ್ನು ತುಂಬಿ ಉಡಾಯಿಸಿದರೆ ಅದರ ಸದ್ದು ಸುತ್ತಮುತ್ತಲ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿದ್ದವರನ್ನು ಗಡ ಗಡ ನಡುಗಿಸುತ್ತಿತ್ತು. ಇದರ ಭಯಂಕರ ಸದ್ದಿಗೆ ನೆಲ ದರದರನೆ ಅಲುಗುತ್ತಿತ್ತು. ಈ ಸದ್ದಿಗೆ ಎಷ್ಟೋ ಜನರ ಕಿವಿ ತಮ್ಮಟೆ ಹರಿದು ಶಾಶ್ವತ ಕಿವುಡುತನ ಬಂದಂದೂ ಇತ್ತಂತೆ.

ದೈತ್ಯಾಕಾರದ ಫಿರಂಗಿಯು 60 ಟನ್‍ಗಳು ಎಂದು ಅಂದಾಜಿಸಲಾಗಿದೆ. ಇದರ ಉದ್ದ 14 ಅಡಿ ನಾಲ್ಕು ಅಂಗುಲ. ಮೈ ಸುತ್ತಳತೆ 5ಅಡಿ 11 ಅಂಗುಲ ಇದರ ಒಡಲಲ್ಲಿ ಮದ್ದು ಗುಂಡು ತುಂಬುವ ಭಾಗ ಸುಮಾರು ಎರಡಡಿ ಎರಡಂಗುಲ ಉದ್ದವಿದೆ. ಇದರ ಬಾಯಿಯ ಅಗಲ ಎರಡಡಿ ನಾಲ್ಕಂಗುಲಗಳಷ್ಟು. ಎಷ್ಟೇ ಬಿಸಿಲು ಬಂದರೂ ಹೆಚ್ಚಿಗೆ ಬಿಸಿಯಾಗುವುದಿಲ್ಲ. ಯುದ್ಧದಲ್ಲಿ ಹಾರಿಸಿದರೂ ಕೂಡಾ ಬಿಸಿಯಾಗಬಾರದೆಂದು ಹಾಗೆ ಮಾಡಿಸಿದ್ದಾರೆ. ಇದರ ಪಕ್ಕದಲ್ಲಿ ನೀರಿನ ಹೊಂಡವಿದೆ. ಆಗಿನ ಸೇನಾಧಿಕಾರಿಗಳು ಫಿರಂಗಿಗೆ ಬೆಂಕಿ ಹಚ್ಚಿ ನೀರಿನ ಹೊಂಡದಲ್ಲಿ ಕುಳಿತುಕೊಳ್ಳುತ್ತಿದ್ದರು. ಇಲ್ಲವಾದರೆ ಫಿರಂಗಿಯ ಶಬ್ದಕ್ಕೇ ಅವರು ಸಾಯಬೇಕಾಗಿತ್ತಂತೆ!

ಈ ತೋಪಿನ ಕಲಾತ್ಮಕತೆ ಎಂಥವರ ಕಣ್ಣನ್ನೂ ಅರಳಿಸುತ್ತದೆ. ಹೊಳಪಿನ ನುಣುಪಿನ ಮೈಮಾಟವನ್ನು ಹೊಂದಿರುವ ಇದರ ಬಾಯಿಯ ವಿನ್ಯಾಸ ವಿಶಿಷ್ಠವಾಗಿದೆ. ಸಿಂಹವು ತನ್ನ ಕೋರೆಹಲ್ಲುಗಳಿಂದ ಮರಿಯಾನೆಯನ್ನು ಅವುಕಿ ಹಿಡಿದುಕೊಂಡಿರುವ ವಿನ್ಯಾಸವನ್ನು ಈ ತೋಪಿನ ಬಾಯಿಯ ಸುತ್ತಲೂ ಕೆತ್ತಲಾಗಿದೆ, ತೋಪಿನ ಹೊಟ್ಟೆಯ ಎರಡೂ ಬದಿಗಳಲ್ಲಿ

ದಪ್ಪನೆಯ ಉಕ್ಕಿನ ಬಳೆಗಳಿದ್ದವಂತೆ ಯಾರೋ ಕದೀಮರು ಅವುಗಳನ್ನು ಕಿತ್ತು ಗುಜರಿಗೆ ಹಾಕಿದ್ದಾರಂತೆ.

ಮೊದಲು ಈ ತೋಪು ನಿಜಾಮಷಹಾನ ಅಧೀನದಲ್ಲಿತ್ತು. ಆತ ಇದನ್ನು ಪುರಂದರ ಕೋಟೆಯ ಮೇಲೆ ಇರಿಸಿಕೊಂಡು ಬಳಸುತ್ತಿದ್ದನೆಂದು ಚರಿತ್ರೆಯ ಪುಟಗಳು ಹೇಳುತ್ತವೆ. ಮುಂದೊಂದು ಸಾರಿ ನಡೆದ ಯುದ್ದದಲ್ಲಿ ನಿಜಾಮ ಷಹಾ ಬಿಜಾಪುರ ಆದಿಲ್ ಷಾಹಿಗಳೆದುರು ಪರಾಭವ ಹೊಂದಿದ ಬಳಿಕ ಈ ತೋಪನ್ನು ಅವರಿಗೇ ಬಿಟ್ಟು ಕೊಟ್ಟನಂತೆ. ಈ ತೋಪನ್ನು ಅಹಮದ್ ನಗರದಿಂದ 10 ಆನೆ 400 ಎತ್ತು ಹಾಗೂ ನೂರಾರು ಜನರು ಸೇರಿ ವಿಜಯಪುರಕ್ಕೆ ತಂದರು ಮರಾಠರು ಮತ್ತು ಔರಂಗಜೇಬನ ಸೈನ್ಯಗಳು ವಿಜಯಪುರದ ಮೇಲೆ ಪದೇ ಪದೇ ಯುದ್ಧಕ್ಕೆ ಬರುತ್ತಿದ್ದರಿಂದ ಇದನ್ನು ಕೋಟೆಯ ಪಶ್ಚಿಮ ಭಾಗದಲ್ಲಿ ಇಡಲಾಯಿತು. ಕೋಟೆ ಗೋಡೆಯ ಮೇಲೆ ಅರ್ಧ ವರ್ತುಲಾಕಾರದಲ್ಲಿ ತಿರುಗುವಂತೆ ಒಂದು ಆಧಾರದ ಮೇಲೆ ಇದನ್ನು ಕೂಡ್ರಿಸಲಾಗಿದೆ. 1565 ರ ಐತಿಹಾಸಿಕ ತಾಳಿಕೋಟೆ ಯುದ್ಧಕ್ಕೊ ಈ ಫಿರಂಗಿಯನ್ನು ತೆಗೆದುಕೊಂಡು ಹೋಗಲಾಗಿತ್ತಂತೆ!

ತೋಪಿನ ಮೈಮೇಲೆ ಮೂರು ಶಾಸನಗಳನ್ನು ಕೆತ್ತಲಾಗಿದೆ. ಮೊದಲನೆಯ ಶಾಸನದಲ್ಲಿ ಈ ದೈತ್ಯ ತೋಪನ್ನು ನಿರ್ಮಿಸಿದ ಮಹ್ಮದ್ ನ ವಿವರಣೆ ಇದೆ. ಎಷ್ಟೊಂದು ಮುತುವರ್ಜಿಯಿಂದ ಇದನ್ನು ನಿರ್ಮಿಸಲಾಯಿತು ಎಂಬ ಉಲ್ಲೇಖವೂ ಇದೆ. ಎರಡನೆಯ ಶಾಸನದಲ್ಲಿ ತೋಪಿನ ತಯಾರಿಕೆಯ ವಿಧಿ-ವಿಧಾನಗಳು, ಎರಕ ಹೊಯ್ಯಲಾದ ಧಾತುಗಳ ವಿವರ, ಈ ಧಾತುಗಳ ಮಿಶ್ರಣದ ಪ್ರಮಾಣ ಇತ್ಯಾದಿಗಳ ದಾಖಲೆ ಇದೆ. ಇದರ ನಿರ್ಮಾಣದ ವರ್ಷ(1549) ವನ್ನು ಈ ಶಾಸನದಲ್ಲೇ ಉಲ್ಲೇಖಿಸಲಾಗಿದೆ. ಔರಂಗಜೇಬನು ಕ್ರಿ.ಶ.1686 ರಲ್ಲಿ ವಿಜಾಪುರವನ್ನು ಗೆದ್ದಾಗ ‘ಮುಲ್ಕ್-ಇ-ಮೈದಾನ್’ ಇವನ ಅಧೀನಕ್ಕೆ ಸ್ಭೆರಿತಂತೆ ಹೀಗೆಂದು ಸಾರುತ್ತದೆ ಈ ತೋಪಿನ ಮೈಮೇಲಿರುವ ಮೂರನೆಯ ಶಾಸನ.ಈ ಮೂರು ಶಾಸನಗಳು ಫಾರಸೀ ಭಾಷೆಯಲ್ಲಿವೆ.

1854 ರಲ್ಲಿ ಸಾತಾರ ಜಿಲ್ಲಾಧಿಕಾರಿ (ಬ್ರಿಟಿಷರ ಕಾಲದಲ್ಲಿ ವಿಜಾಪುರ ಕೆಲವು ವರ್ಷ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಆಡಳಿತಕ್ಕೆ ಒಳಪಟ್ಟಿತ್ತು) ಸರ್ಕಾರದ ವಶದಲ್ಲಿರುವ ವಿಜಾಪುರದಲ್ಲಿನ ಎಲ್ಲ ಹಳೆಯ ವಸ್ತುಗಳನ್ನು ಹರಾಜು ಹಾಕಲು ಆದೇಶಿಸಿದೆ. ಅದರಲ್ಲಿ ಮಲಿಕ್-ಎ-ಮೈದಾನ್ ತೋಪು ಕೂಡಾ ಸೇರಿತ್ತು. ಜಿಲ್ಲಾಧಿಕಾರಿ ಆದೇಶದಂತೆ ವಿಜಯಪುರದಲ್ಲಿನ ಮಾಮಲೆದಾರ(ಕಂದಾಯ ಅಧಿಕಾರಿ) ಸವಾಲು ನಡೆಸಿದ. ಆದರೆ ಆ ಹರಾಜಿನಲ್ಲಿ ಮಲಿಕ್-ಎ-ಮೈದಾನ್ ಗೆ ಬಂದ ಗರಿಷ್ಠ ಬೆಲೆ 150 ರೂಪಾಯಿ!

ಮಾಮಲೆದಾರನಿಗೆ ಇಷ್ಟೊಂದು ಕಡಿಮೆ ಮೊತ್ತಕ್ಕೆ ಐತಿಹಾಸಿಕ ಮಹತ್ವವಿರುವ ಈ ತೋಪನ್ನು ಮಾರುವುದು ಪರಂಪರೆಗೆ ಮಾಡುವ ಅಪಮಾನವೆನಿಸಿತು. ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿ ತೋಪು ನೋಡಲು ದೂರದ ಊರುಗಳಿಂದ ಪ್ರತಿ ದಿನ ನೂರಾರು ಪ್ರವಾಸಿಗರು ಬರುತ್ತಾರೆ ಇದರ ಬಗೆಗೆ ಜನರಿಗೆ ಸಾಕಷ್ಟು ಗೌರವವಿದೆ. ಅದಕ್ಕಾಗಿ ಇದನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗೂ ಹೌದೆನ್ನಿಸಿತು ಹರಾಜನ್ನು ರದ್ದುಗೊಳಿದ.

ಆದರೆ ಅದೇ ಬ್ರಿಟಿಷ್ ಅಧಿಕಾರಿ ಇದನ್ನು ಬ್ರಿಟನ್‍ಗೆ ತೆಗೆದುಕೊಂಡು ಹೋಗಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದ. ಅದೃಷ್ಟವಶಾತ್ ಅದು ಕಾರ್ಯರೂಪಕ್ಕೆ ಬರಲಿಲ್ಲ. ಈಗಲೂ ರಣರಂಗದ ರಾಜ ರಾಷ್ಟ್ರೀಯ ರಕ್ಷಿತ ಸ್ಮಾರಕ

ಹಾಗಾದರೆ ವಿಜಯಪುರಕ್ಕೆ ಬಂದರೆ ಈ ರಣರಂಗ ರಾಜನನ್ನು ನೋಡಲು ಮರೆಯದಿರಿ.


  • ಚಿತ್ರ ಲೇಖನ: ಟಿ. ಶಿವಕುಮಾರ್ (ಸಹ-ಶಿಕ್ಷಕ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಳೇಶ್ವರ, (ತಾ) ಹಾನಗಲ್ಲ, (ಜಿ) ಹಾವೇರಿ.

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW