ಕೆತ್ತಿದವನಾರು, ಮೆತ್ತಿದವನಾರು…ಯಾರು ಹುಡುಕುವರಿಲ್ಲ…ಜಾತಿ ಧರ್ಮ…ಅಪ್ಪಯ್ಯ ಯು ಯಾದವ್ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಲೆಗೊಂದು ಜಾತಿ
ತಲೆಗೊಂದು ಜಾತಿ
ಇಲ್ಲಿಲ್ಲ ಕೇಳಿರಣ್ಣ
ಕಲೆಯಬೆಲೆ ಬಲ್ಲವಗೆ
ಜಾತಿ ಧರ್ಮಗಳಿಲ್ಲ
ಶಿಲೆಯ ಕಲೆಯಾಗಿಪುದೆ
ಪರಮ ಧರ್ಮ
ಕೆತ್ತಿದವನಾರು
ಮೆತ್ತಿದವನಾರು
ಯಾರು ಹುಡುಕುವರಿಲ್ಲ
ಜಾತಿ ಧರ್ಮ
ಕಲ್ಲರಳಿ ಹೂವಾಗಿ
ಜಗಕೆ ಪರಿಮಳಬೀರಿ
ಜಾತಿಪಂಥವ ದಾಟಿ
ಬೆಳಗಬೇಕಿಲ್ಲಿ
ಆ ಜಾತಿ ಈ ಜಾತಿ
ಮೇಲ್ಜಾತಿ ಕೀಳ್ಜಾತಿ
ಎಲ್ಲದರ ಚಿಂತೆಯಾಕೆ?
ಸರ್ವ ಧರ್ಮದ ಭಾವ
ಬಿತ್ತಬೇಕೀಗಿಲ್ಲಿ
ಅನ್ಯ ಧರ್ಮಗಳಲ್ಲಿ
ಬೇಧ ಸಲ್ಲ
- ಅಪ್ಪಯ್ಯ ಯು ಯಾದವ್
