ಹಾಡೋಣ ಹಾಡಿಸೋಣ ನಾಡಗೀತೆಯ ಹಚ್ಚೋಣ ಹಚ್ಚಿಸೋಣ ಜ್ಞಾನದ ಹಣತೆಯ…ಕವಿ ಪ್ರೊ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕಲಿಯೋಣ ಕಲಿಸೋಣ ಅಕ್ಷರವ
ಬೆಳೆಯೋಣ ಬೆಳೆಸೋಣ ಭಾತೃತ್ವವ
ಸೇರೋಣ ಸಾರೋಣ ಸಮಾನತೆಯ ಸಂದೇಶವ.
ಹೇಳೋಣ ಹೇಳಿಸೋಣ ಸತ್ಯವ
ಬಿಡೋಣ ಬಿಡಿಸೋಣ ದುರ್ಗುಣವ
ಮಾಡೋಣ ಮಾಡಿಸೋಣ ಸತ್ಕರ್ಮವ.
ಹಿಡಿಯೋಣ ಹಿಡಿಸೋಣ ಸತ್ಪಥವ
ಸಾಗೋಣ ಸಾಗಿಸೋಣ ಸುಖ ಜೀವನವ
ಮರೆಯೋಣ ಮರೆಸೋಣ ಮನಸಿನ ದುಃಖವ.
ತಿಳಿಯೋಣ ತಿಳಿಸೋಣ ಸೌಹಾರ್ದತೆಯ
ನಡೆಯೋಣ ನಡೆಸೋಣ ಸತ್ಪಥದ ದಾರಿಯ
ಕಳೆಯೋಣ ಕಳೆಸೋಣ ಅಸೂಯೆ ಭಾವನೆಯ.
ಹಾಡೋಣ ಹಾಡಿಸೋಣ ನಾಡಗೀತೆಯ
ಹಚ್ಚೋಣ ಹಚ್ಚಿಸೋಣ ಜ್ಞಾನದ ಹಣತೆಯ
ಮಾಡೋಣ ಮಾಡಿಸೋಣ ಜನ ಜಾಗೃತಿಯ.
ಕೂಡೋಣ ಕೂಡಿಸೋಣ ಸಮಾನತೆಯ
ಮೆರೆಯೋಣ ಮೆರಸೋಣ ಭಾವೈಕ್ಯತೆಯ
ಮರೆಯೋಣ ಮರೆಸೋಣ ದ್ವೇಷ ಭಾವನೆಯ.
- ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ.
