ಕನಕ ದೊರೆತ!..ಕವನ – ದೇವರಾಜ್ ಹುಣಸಿಕಟ್ಟಿ

ಕನಕದಾಸ ಜಯಂತಿ ಪ್ರಯುಕ್ತ ದೇವರಾಜ್ ಹುಣಸಿಕಟ್ಟಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ, ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಹರಿಭಕ್ತ ಕನಕದಾಸ ಜಯಂತಿಯ ಶುಭಾಶಯಗಳು…

ಬಾಗಿಲು ಮುಚ್ಚುವಾಗ
ಕಿಟಕಿ ತೆರೆಯುವಾಗ
ಕೃಷ್ಣ ಕನಕ ಚರಿತ….

ಬೆರಳು ಕುಣಿಸುವಾಗ
ಕೊರಳು ಮಣಿಸುವಾಗ
ಕೃಷ್ಣನರಿಯುವಾಗ ಕನಕ ತುಂಬ ಹರಿತ …

ಕೃಷ್ಣನೊಂದು ಗಾಳಿ
ಕನಕನೊಂದು ಗಂಧ
ಗಾಳಿಯಲಿ ಸುಗಂಧವಾಗಿ ಬೆರತ…..

ಎ ತಾರಯ್ಯ ಎಂದ
ಕೃಷ್ಣ ಕಂಬಳಿ ಹೊದ್ದ
ಕನಕ ಬೆಣ್ಣೆ ಮೆದ್ದ
ಲೋಕದ ತುಂಬಾ ಪ್ರೀತಿ ಸದ್ದ
ಈಗ ಬೆರತ ಚರಿತೆಯ ಮೊರೆತ….

‘ನಾನು ‘ತೊರೆಯುವಾಗ
‘ಜಾತಿ ‘ಮುರಿಯುವಾಗ
ಮನುಜ ಕುಲದ
ನೆಲೆಯನರಿಯುವಾಗ
ಕನಕ ದೊರೆತ….


  • ದೇವರಾಜ್ ಹುಣಸಿಕಟ್ಟಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading