ಯಾರನ್ನೂ ನೋಯಿಸದೇ ಬದುಕಲು ಸಾಧ್ಯವಿಲ್ಲವೇ?… ನನ್ನನ್ನೇ ನಾನು ಕೇಳಿ ಕೊಳ್ಳುತ್ತೇನೆ…ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ…
ದೀಪ ಆರಿಸುವಾಗೆಲ್ಲ
ಕನಿಕರಿಸುತ್ತೇನೆ
ಪತ೦ಗಗಳ ಬಗ್ಗೆ, ದೀಪದ ಹುಳುಗಳ ಬಗ್ಗೆ.
ಹಾಗೆಯೇ
ದೀಪ ಬೆಳಗುವಾಗೆಲ್ಲ
ಕನಿಕರಿಸುತ್ತೇನೆ
ಜಿರಳೆಗಳ ಬಗ್ಗೆ, ಬಾವಲಿಗಳ ಬಗ್ಗೆ.
ಹೊಡೆದು ಹಾಕುವಾಗೆಲ್ಲ
ಕನಿಕರಿಸುತ್ತೇನೆ
ಸೊಳ್ಳೆಗಳ ಬಗ್ಗೆ, ಇಲಿಗಳ ಬಗ್ಗೆ
ಹೊಸಕಿ ಹಾಕುವಾಗೆಲ್ಲ
ಕನಿಕರಿಸುತ್ತೇನೆ
ಇರುವೆಗಳ ಬಗ್ಗೆ
ಯಾರನ್ನೂ ನೋಯಿಸದೇ
ಬದುಕಲು ಸಾಧ್ಯವಿಲ್ಲವೇ?
ನನ್ನನ್ನೇ ನಾನು ಕೇಳಿ ಕೊಳ್ಳುತ್ತೇನೆ
ಕೇಳಿ ಕೊಳ್ಳುತ್ತಲೇ
ಈ ಅನಿವಾರ್ಯಗಳಲ್ಲಿ
ಬದುಕುತ್ತೇನೆ!.
- ಮೇಗರವಳ್ಳಿ ರಮೇಶ್
