‘ಕಣ್ಣ ಮುಂದೆಯೇ’ ಕವನ – ನಾಗರಾಜ ಬಿ.ನಾಯ್ಕ

ಹಕ್ಕಿ ಗಗನದೆಡೆಗೆ ಹಾರುವಾಗಲೆಲ್ಲ ನೆಲದ ಮೇಲೆ ಹಸಿರ ಬೀಜ ಚೆಲ್ಲಿತು, ನೆಲದಿ ಸೃಷ್ಟಿ ಸೊಬಗು ಹರಡಿತು… ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಹೊನ್ನ ಬಣ್ಣ ಭೂಮಿಗಿಳಿದು
ಹಸಿರನೆಲ್ಲ ತುಂಬಿತು
ಬಾನು ಬಯಲು ಬೆಳಕು ಹರಡಿ
ಸಗ್ಗವಾಗಿ ನಿಂತಿತು

ಹಕ್ಕಿ ಬಳಗ ಗೂಡಿನಿಂದ
ಗಗನದೆಡೆಗೆ ಹೊರಟಿತು
ಹಾರುವಾಗಲೆಲ್ಲ ನೆಲದ ಮೇಲೆ
ಹಸಿರ ಬೀಜ ಚೆಲ್ಲಿತು

ನೀಲಿ ಕಡಲ ರಾಶಿಯಲ್ಲಿ
ಬೆಳ್ಳಿ ಮೀನು ಓಡಿತು
ಅಲೆಯ ಮೇಲೆ ತೇಲಿದಂತೆ
ಪಾತಿ ದೋಣಿ ಸಾಗಿತು

ಬಳ್ಳಿಯೊಲವು ಹೂವಾಗಿ
ಬೆಟ್ಟ ಬಯಲು ತುಂಬಿತು
ಮಣ್ಣ ನೆಲವು ಜೀವವಾಗಿ
ಜೀವಜಾಲ ಸಲಹಿತು,

ಕಣ್ಣ ಮುಂದೆಯೇ ಒಲವ ಧಾರೆ
ಧಾರೆಯಾಗಿ ಹರಿಯಿತು
ಚೆಂದ ಬದುಕು ಕಂಡ ನೆಲದಿ
ಸೃಷ್ಟಿ ಸೊಬಗು ಹರಡಿತು


  • ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading