ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನ(೩)

ಜನನಿ ಬಾಂಧವ್ಯ ಫೌಂಡೇಶನ್ ನ ಮೂರನೆ ಅಭಿಯಾನ ಸೆಪ್ಟೆಂಬರ್ ೨೪,೨೫ ರಂದು ಉತ್ತರಕರ್ನಾಟಕದ ಗುಂಡ್ಲವದ್ದಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಅಭಿಯಾನ ಆರಂಭವಾಗುತ್ತದೆ. ಆಸಕ್ತರು ಕೈ ಜೋಡಿಸಿದರೆ ಸಂತೋಷ ….ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ, ಮುಂದೆ ಓದಿ…

ಜನನಿ ಬಾಂಧವ್ಯ ಫೌಂಡೇಶನ್ ನ ಮೂರನೆ ಅಭಿಯಾನ ಇದಾಗಿದೆ. ಈ ಅಭಿಯಾನ ಉತ್ತರ ಕರ್ನಾಟಕ ಭಾಗದಲ್ಲಿ ಶುರುವಾಗಲಿದ್ದು . ಜನನಿ ಫೌಂಡೇಶನ್ ನಲ್ಲಿ ಒಬ್ಬರಾದ ಪಾಂಡು ಅವರು ಓದಿದ ಶಾಲೆಯಿಂದ ಈ ಅಭಿಯಾನ ಶುರುವಾಗುತ್ತಿರುವುದು ಸಂತೋಷದ ಸಂಗತಿ.

ಈ ಅಭಿಯಾನದಲ್ಲಿ ಶಾಲೆಗೆ ಬಳಸುವ ಬಣ್ಣಗಳಿಗೆ ತಮ್ಮ ಜೇಬಿನಿಂದ ಹಣ ಖರ್ಚು ಮಾಡಲಾಗುತ್ತಿದೆ. ಇದಕ್ಕೆ ಸರಕಾರದಿಂದ ಸದಸ್ಯರು ಯಾವುದೇ ನಿರೀಕ್ಷೆಯನ್ನು ಅಭಿಯಾನಕ್ಕೆ ಸುತ್ತಲಿನ ಜನರನ್ನು ಕೈ ಜೋಡಿಸುವಂತೆ ಈ ಫೌಂಡೇಶನ್ ಸದಸ್ಯರು ಕೇಳಿಕೊಂಡಾಗ ಯಾರು ಬರೋದಿಲ್ಲ ಎನ್ನುವ ಅಳಲು ಇದ್ದರೂ ತಮ್ಮ ಕೆಲಸವನ್ನು ಬಿಟ್ಟಿಲ್ಲ . ತಮ್ಮದೇ ಹಣದಲ್ಲಿ ಒಳ್ಳೆ ಕೆಲಸ ಮಾಡುವಾಗ ತೆಗಳಿಕೆ ಮಾತ್ರ ನಿಂತಿಲ್ಲವೆಂದು ಪಾಂಡುವರು ಹೇಳುತ್ತಾರೆ. ಒಂದು ಗುಂಪು ತಮ್ಮನ್ನು ಹುಚ್ಚರಂತೆ ನೋಡಿದರೆ, ಇನ್ನೊಂದು ಗುಂಪು ಸಮಾಜಮುಖಿ ಹೆಸರಿನಲ್ಲಿ ಮಾಡುತ್ತಿರುವ ಹಗಲು ದರೋಡೆ ಎಂದು ಆಡಿಕೊಳ್ಳುತ್ತಾರೆ. ಇದಕ್ಕೆಲ್ಲ ಕಿವಿಗೊಡದೆ ಸಮಾಜ ಸೇವೆ ನಮ್ಮ ಉಸಿರನ್ನಾಗಿಸಿಕೊಂಡು ಉತ್ತಮ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಈ ತಂಡ ಹೇಳುತ್ತಾರೆ


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading