ವಜ್ರ ವೈಢೂರ್ಯಗಳಿಂದ ಕಂಗೊಳಿಸುತ್ತಿದ್ದ ನಾಡಿದು ಗತವೈಭವದಿ ಮೆರೆದಿದೆ ನಮ್ಮ ಹೆಮ್ಮೆಯ ಕರುನಾಡು.. ಕವಿಯತ್ರಿ ಬಿ.ಆರ್.ಯಶಸ್ವಿನಿ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕನ್ನಡಾಂಬೆಯ ಪ್ರೀತಿಯ ಮಕ್ಕಳು ನಾವೆಲ್ಲರೂ
ಹೊನ್ನಿನ ಗಣಿಯಲಿ ಆಡಿ ಬೆಳೆದ ಕುಡಿಗಳು
ಉಸಿರು ಉಸಿರಲಿ ಬೆರೆತಿದೆ ಕನ್ನಡತನವು
ಚಂದನದಂತೆ ಕಂಪು ಸೂಸಿದೆ ಕನ್ನಡ ಕಸ್ತೂರಿಯು.
ಆಂಗ್ಲರ ಬಡಿದೋಡಿಸಿದ ವೀರಪರಾಕ್ರಮಿಗಳ ನಾಡಿದು
ಸಿಂಹಿಣಿಯಂತೆ ಹೋರಾಡಿದ ವೀರವನಿತೆಯರ
ಬೀಡಿದು
ವಜ್ರ ವೈಢೂರ್ಯಗಳಿಂದ ಕಂಗೊಳಿಸುತ್ತಿದ್ದ ನಾಡಿದು
ಗತವೈಭವದಿ ಮೆರೆದಿದೆ ನಮ್ಮ ಹೆಮ್ಮೆಯ ಕರುನಾಡು..
ಕನ್ನಡದ ಸೊಗಡನ್ನು ಹೆಚ್ಚಿಸಿದ ಶಾಸನಗಳಿರಲು
ಸಾಹಿತ್ಯಕ್ಕೆ ಮೆರಗು ತಂದ ಕವಿಪುಂಗವರಿರಲು
ಶಿಲ್ಪಕಲೆಗಳಿಂದ ಸೆಳೆಯುವ ದೇವಾಲಯಗಳಿರಲು
ಸಂಪದ್ಭರಿತವಾಗಿದೆ ನಮ್ಮ ಹೆಮ್ಮೆಯ ನೆಲೆವೀಡು
ಎತ್ತಣಿಂದೆತ್ತ ನೋಡಿದರು ಸೌಂದರ್ಯವೇ ತುಂಬಿರಲು
ವಿಶ್ವವಿಖ್ಯಾತ ಜೋಗ ಜಲಪಾತದಂತ ಸುಂದರ ಜಲಧಾರೆಗಳಿರಲು
ಜಗದ್ವಿಖ್ಯಾತ ಮೈಸೂರು ದಸರಾ ವೈಭವದ ನಾಡಲ್ಲಿ
ನಾನಿರುವುದೆ ಪುಣ್ಯ ನನ್ನಿ ಜನ್ಮ ಪಾವನವಾಯಿತ್ತಿಲ್ಲಿ
ಕನ್ನಡದ ಪ್ರೇಮ ಹೊಚ್ಚ ಹೊಸದರಂತಿರಲು
ಕನ್ನಡವೇ ನಿತ್ಯ ನೂತನ ಹೊಸ ಚೇತನವು
ಅಚ್ಚಳಿಯದೆ ಮನಸಿನಲಿ ಉಳಿದಿರಲು
ಹೆಮ್ಮೆಯಿಂದ ಹೇಳುವೆ ನಾನು ಕನ್ನಡತಿಯೆಂದು
- ಬಿ.ಆರ್.ಯಶಸ್ವಿನಿ
