ನಾಗರಾಜ ಬಿ.ನಾಯ್ಕ ಅವರ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮಳೆಗಾಲದ ಸಂಜೆಗೆ
ಮೋಡ ತುಂಬಿದ ಬಾನು
ಮಳೆ ಹನಿಯ ಜಿಟಿಜಿಟಿ
ಜೀ ಎನ್ನುವ ಜೀರುಂಡೆಗೆ
ಹಾಡುವ ಹಾಡುವಕ್ಕಿಗೆ
ಎಲ್ಲವಕ್ಕೂ ಒಂದು
ಕತ್ತಲೆಯ ಹಾಡು
ಮೌನಕ್ಕೆ ಮನಸಾಗಿ
ಮಾತಿಗೆ ಹಾಡಿಗೆ
ಉಳಿದೀತು ಚಿತ್ರ ಹಸಿರಾಗಿ
ಆ ಕತ್ತಲೆಗೆ ಒಂದು
ಬೆಳಕು ದಾರಿ ತೋರುವಂತೆ
ಮೇಲಿಂದ ಕೆಳಗೆ ಹೊರಟು
ಹೋಯಿತು ಮಿಣುಕು
ಯಾರೋ ಕರೆದಂತೆ
ದೇವ ಕೊಟ್ಟ ಬೆಳಕದು
ಕತ್ತಲೆಗೆ ಉಳಿವಿಗೆ
ಮನುಜಗದು ಸಾಕು
ಒಲವೆಂಬ ಸಣ್ಣ ಮಿಣುಕು
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ
