‘ಕಾತ್ಯಾಯಿನಿ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

‘ಸತ್ಯ ಸ್ವರೂಪಿಣಿ ನಿತ್ಯವು ಬುವಿಯೊಳು ಶಾರ್ದೂಲದಿ ದಿನ ಸಂಚರಿಸುವಳೆ’… ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ನಾಡಿನ ಸಮಸ್ತ ಜನರಿಗೆ ದಸರಾ ಹಬ್ಬದ ಶುಭಾಶಯಗಳು, ತಪ್ಪದೆ ಮುಂದೆ ಓದಿ…

ಮಹಿಷಾಸುರನನು ಸಂಹರಿಸುತ್ತಲಿ
ಸುರನರರಿಗೆ ನೆರವಾದವಳೆ
ಸಹಿಸದ ಕಷ್ಟವನಸುರರು ನೀಡಲು
ಇರಿಯುತಲವರನು ತರಿದವಳೆ

ಕಾತ್ಯಾಯಿನಿ ಶುಭದಾದ್ಯಾದೇವಿಯೆ
ಅಭಯವ ನೀಡುವ ಚಂಡಿಕೆಯು
ಸತ್ಯ ಸ್ವರೂಪಿಣಿ ನಿತ್ಯವು ಬುವಿಯೊಳು
ಶಾರ್ದೂಲದಿ ದಿನ ಸಂಚರಿಸುವಳೆ

ನವರಾತ್ರಿಯೊಳಾರನೆ ದಿನ ಧರೆಯೊಳು
ಪೂಜಿಸಿ ಬಕುತರು ಮೊರೆಯುವರು
ನವತನ ತುಂಬುತ ಪೂಜಿದ ಬಕುತರ
ಬಯಕೆಗಳೆರೆಯುತ ಪೊರೆಯುವಳು

ಆಜ್ಞಾ ಚಕ್ರದಿ ನೆಲೆಸಿಹ ದೇವಿಯು
ಧ್ಯಾನದೊಳೊಲಿವ ಪರಾಶಕ್ತಿ
ಆಜ್ಞೆಯ ಮಾಡುತ ಬ್ರಹ್ಮಾಂಡ‌ದೊಳಗೆ
ಎಲ್ಲರ ಕಾಯ್ವ ಮಹಾಕಾಳಿ.


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading