ಕಿತ್ತೂರ ರಾಣಿ ಚೆನ್ನಮ್ಮನ ೧೯೮ ನೇಯ ವಿಜಯೋತ್ಸವ ರೋಣ ತಾಲೂಕಿನ ಗುಜಮಾಗಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಮುಂದೆ ಓದಿ…
ಕಿತ್ತೂರ ಚೆನ್ನಮ್ಮನ ವೀರ ಸಾಹಸದ ಕಥೆಗಳು ಲಾವಣಿ ಪದಗಳಲ್ಲಿ ಜನಜನಿತವಾಗಿವೆ – ಡಾ. ಸಂಗಮೇಶ ತಮ್ಮನಗೌಡ್ರ
ಆಂಗ್ಲ ಅಧಿಕಾರಿ ಥ್ಯಾಕರೆನ ವಿರುದ್ಧ ಸೆಣಸಾಡಿದ ಚೆನ್ನಮ್ಮನ ವೀರ ಸಾಹಸದ ಕಥೆಗಳು ಬೆಳಗಾವಿ ಜಿಲ್ಲೆಯ ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿಯೂ ಲಾವಣಿ ಪದ, ಕೋಲಾಟದ ಪದ, ಡೊಳ್ಳಿನ ಪದ ಮತ್ತು ಸೋಬಾನೆ ಪದ ಮುಂತಾದ ಜನಪದ ಸಾಹಿತ್ಯದಲ್ಲಿ ಮನೆ ಮಾತಾಗಿವೆ.
ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿಯವರು ಕಿತ್ತೂರ ರಾಣಿಯ ವೀರಸಾಹಸದ ಬದುಕಿನ ಕಥೆ ಸಾರುವ ಹಲವಾರು ಜನಪದ ಕವಿತೆಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇಂತಹ ಚೆನ್ನಮ್ಮನ ಹಾಡುಗಳನ್ನು ಇಂದು ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಕೇಳಿ ಅನುಸರಿಸುವ ಅಗತ್ಯವಿದೆ. ನಾವು ಈ ರೀತಿ ಮಾಡುವುದರಿಂದ ಚೆನ್ನಮ್ಮನಿಗೆ ನಿಜಗೌರವ ಕೊಟ್ಟಂತಾಗುತ್ತದೆ ಎಂದು ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರು ಹೇಳಿದರು. ರೋಣ ತಾಲೂಕಿನ ಗುಜಮಾಗಡಿಯ ಕಿತ್ತೂರ ಚೆನ್ನಮ್ಮನ 198ನೇಯ ವಿಜಯೋತ್ಸವ ಉಪನ್ಯಾಸದಲ್ಲಿ ಡಾ. ಸಂಗಮೇಶ ತಮ್ಮನಗೌಡ್ರರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮೀಜಿಯವರು ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಅಖಿಲಭಾರತ ಲಿಂಗಾಯತ ಪಂಚಮಸಾಲಿ ಅಧ್ಯಕ್ಷರಾದ ಪ್ರಭಣ್ಣ ವಾಯ್. ಹುಣಸಿಕಟ್ಟಿ ವಹಿಸಿಕೊಂಡಿದ್ದರು. ನರಗುಂದದ ಯುವ ಧುರೀಣ ಉಮೇಶಗೌಡ ಸಿ ಪಾಟೀಲ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಅಧ್ಯಕ್ಷರಾದ ಅಯ್ಯಪ್ಪ ಅಂಗಡಿ, ಯುವ ಧುರೀಣ ಸಂಗಮೇಶ ಕೊಳ್ಳಿ, ವಿಕ್ರಮ ಬಿದರೂರ, ಮಲ್ಲಿಕಾರ್ಜುನ ಹಿರೇಹಾಳ, ಅಶೋಕ ಪವಾಡಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಗ್ರಾಮದಲ್ಲಿ ಸುಮಂಗಲಿಯರಿಂದ ಕುಂಭ ಮೇಳದೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ಕೊಣ್ಣೂರಿನ ಮಹಿಳಾ ಡೊಳ್ಳಿನ ಮೇಳವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
45ಕ್ಕೂ ಹೆಚ್ಚು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಮಹಾಂತಗೌಡ ಅಯ್ಯನಗೌಡ್ರ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಗುಗ್ಗರಿ ನಿರೂಪಿಸಿದರು.