ಹಲಸಿನ ಎಲೆ ಕಡಬು ನೀಡುವ ಶಿವಮೊಗ್ಗ ಜಿಲ್ಲೆಯ ಏಕೈಕ ಹೋಟೆಲ್ ಅರುಣ್ ಪ್ರಸಾದ್ ಅವರ ಮಲ್ಲಿಕಾ ವೆಜ್ ರೆಸ್ಟೋರೆಂಟ್. ಅಲ್ಲಿಗೆ ಭೇಟಿ ನೀಡಿದಾಗ ತಪ್ಪದೆ ರುಚಿ ನೋಡಿ…
ಮಲ್ಲಿಕಾ ವೆಜ್ ಹಲಸಿನ ಎಲೆ ಕೊಟ್ಟೆ ಕಡಬು. ಗಣಪತಿಗೆ ನೈವೇದ್ಯಕ್ಕೆ ಬಳಕೆ. ಇಡ್ಲಿ ಪಾತ್ರೆಯಲ್ಲಿನ ಹಬೆಯು ಹಲಸಿನ ಎಲೆಯ ಹಾಯ್ದು ಕಡುಬಿಗೆ ಹಲಸಿನ ಎಲೆಯ ಅರೋಮ ರುಚಿ ಅವರಿಸುವುದರಿಂದ ಇದು ವಿಶೇಷವಾಗಿದೆ.
ನಮ್ಮ ಮಲ್ಲಿಕಾ ವೆಜ್ ಪ್ರಾರಂಭಿಸಲು ಕಾರಣ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ಅತಿಥಿಗಳಿಗಾಗಿ ಅವರ ಉಪಹಾರ ಊಟದ ವ್ಯವಸ್ಥೆಗಾಗಿ, ಅದೂ ಯಾರೂ ರೆಸ್ಟೋರೆಂಟ್ ಪ್ರಾರಂಭಿಸಲು ಮುಂದೆ ಬರದಿದ್ದಾಗ ನಾವೇ ಅನಿವಾರ್ಯವಾಗಿ ಪ್ರಾರಂಭಿಸಿ ನಂತರ ಎಲ್ಲಾ ಕಲಿತದ್ದು ಅದು 11 ವರ್ಷದ ಹಿಂದೆ.

ಸ್ಥಳಿಯವಾದ ವಿಶೇಷ ಖಾದ್ಯ ಯಾವುದು? ಎಂಬ ಆಹಾರ ಪ್ರಿಯ ಪ್ರವಾಸಿಗಳ ಪ್ರಶ್ನೆಗೆ ಉತ್ತರ ನಮ್ಮಲ್ಲಿರಲಿಲ್ಲ, ನಾವು ತಯಾರಿಸುವ ಇಡ್ಲಿ ವಡೆ, ದೋಸೆ, ಪಲಾವ್, ಬಿಸಿಬೇಳೆ ಬಾತ್ , ಉಪ್ಪಿಟ್ಟು, ಕೇಸರಿ ಬಾತ್, ಬನ್ಸ್, ಅವಲಕ್ಕಿ, ಅವಲಕ್ಕಿ ಮೊಸರು, ಪಿಲ್ಟರ್ ಕಾಫಿ-ಟೀ – ದಕ್ಷಿಣ ಭಾರತೀಯ ಊಟ-ಉತ್ತರ ಭಾರತೀಯ ಊಟ ಎಲ್ಲಾ ರೆಸ್ಟೋರೆಂಟ್ ಗಳಲ್ಲಿ ಇರುತ್ತದೆ.

ಆದ್ದರಿಂದ ಮಲೆನಾಡಿನ ವಿಶಿಷ್ಟ ಉಪಹಾರವಾದ ಹಲಸಿನ ಎಲೆ ಕೊಟ್ಟೆ ಕಡಬು 2021 ರ ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಭಿಸಿದೆವು, ಇದರ ಜೊತೆಗೆ ಹಸಿಗಡಲೆ ಗಸಿ, ಕಾಯಿ ಚಟ್ನಿ ಮತ್ತು ಕೆಂಪು ಮೆಣಸಿನ ಚಟ್ನಿ ಜೊತೆ ನೀಡಲು ಪ್ರಾರಂಭಿಸಿ ಎರಡು ವರ್ಷ ದಾಟಿದೆ.

ನಿರಂತರವಾಗಿ ಹಲಸಿನ ಎಲೆ ಕಡಬು ಗ್ರಾಹಕರಿಗೆ ನೀಡುವ ಶಿವಮೊಗ್ಗ ಜಿಲ್ಲೆಯ ಏಕೈಕ ಹೋಟೆಲ್ ನಮ್ಮದಾಗಿದೆ. ಇವತ್ತು ಪ್ರತಿನಿತ್ಯದ ಬೆಳಿಗ್ಗೆಯ ನಮ್ಮ ಮಲ್ಲಿಕಾ ವೆಜ್ ನ ಉಪಹಾರದ ಸ್ಯಾಂಪಲ್ ತಪಾಸಣೆ ಮಾಡುವಾಗ ನನಗೆ ನೆನಪಾಯಿತು.
- ಅರುಣ್ ಪ್ರಸಾದ್
