ಆಲನಹಳ್ಳಿ ಶ್ರೀಕೃಷ್ಣರ ನೆನಪು

ಖ್ಯಾತ ಲೇಖಕರಾದ ಶ್ರೀಕೃಷ್ಣ ಆಲನಹಳ್ಳಿ ಅವರ ಮಗಳು ಕೃತಿಕಾ ಆಲನಹಳ್ಳಿಯವರನ್ನು ಕಾದಂಬರಿಕಾರ ಪ್ರಸನ್ನ ಸಂತೇಕಡೂರು ಅವರು ಭೇಟಿ ಮಾಡಿ ಅವರ ತಂದೆಯ ಕುರಿತು ನೆನಪುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಶ್ರೀಕೃಷ್ಣ ಆಲನಹಳ್ಳಿಯವರು ಕನ್ನಡ ನಾಡು ಕಂಡ ಅದ್ಭುತ ಲೇಖಕರು, ದೈತ್ಯ ಪ್ರತಿಭಾವಂತರು. ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದವರು. ಇಂದು ಅವರು ಬದುಕಿದ್ದರೆ ಕನ್ನಡದ ಮಹೋನ್ನತ ಲೇಖಕರ ಸಾಲಿಗೆ ಸೇರುವಷ್ಟು ಸಾಹಿತ್ಯ ಕೃಷಿ ಮಾಡುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಸಿಕ್ಕಿರುತಿತ್ತು ಎಂದು ಅನಿಸುತ್ತೆ. ಕಾಡು, ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರಗಳು ಕನ್ನಡ ಸಾಹಿತ್ಯದ ಅತ್ಯುತ್ತಮ ಕಾದಂಬರಿಗಳು. ಈ ಕಾದಂಬರಿಗಳು ಸಿನಿಮಾ ಆಗಿ ಕೂಡ ಹೆಸರು ಮಾಡಿವೆ. ಜೊತೆಗೆ ಫಿನಿಕ್ಸ್, ಗೀಜಗನ ಗೂಡು, ಕುರುಬರ ಲಕ್ಕ ಕತೆಗಳು ಕೂಡ ಸಿನಿಮಾ ಆಗಿವೆ. ಶ್ರೀಕೃಷ್ಣ ಅವರು ಕವಿಯಾಗಿಯೂ, ಕತೆಗಾರರಾಗಿಯೂ ಗುರುತಿಸಿಕೊಂಡಿದ್ದರು. ಮಲಯಾಳಂ ಭಾಷೆಯಲ್ಲೂ ಶ್ರೀಕೃಷ್ಣ ಅವರು ದೊಡ್ಡ ಹೆಸರು ಮಾಡಿದ್ದರು. ಇಂದಿಗೂ ಅವರ ಪುಸ್ತಕಗಳು ಅಲ್ಲಿ ಮುದ್ರಣವಾಗುತ್ತಿವೆ.

ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಶ್ರೀಕೃಷ್ಣರ ಭುಜಂಗಯ್ಯನ ದಶಾವತಾರಗಳು ಕಾದಂಬರಿಯನ್ನು ಶಿವಮೊಗ್ಗದ ಕರ್ನಾಟಕ ಸಂಘದ ಗೇಟಿನ ಪಕ್ಕದಲ್ಲಿದ್ದ ಒಂದು ಪುಸ್ತಕದ ಅಂಗಡಿಯಲ್ಲಿ ನೋಡಿದ್ದೆ. ಆಗ ಅಲ್ಲಿಯೇ ಪುಸ್ತಕ ಕೊಳ್ಳಲು ಬಂದವರು ಯಾರೋ ಶ್ರೀಕೃಷ್ಣ ಹೋಗಿಬಿಟ್ಟರಂತೆ ಕಣ್ರೀ ಎಂದು ಆ ಅಂಗಡಿಯವರಿಗೆ ಹೇಳಿದ್ದು ಇಂದಿಗೂ ಜ್ಞಾಪಕ ಇದೆ. ಆ ಕಾದಂಬರಿಯನ್ನ ಓದಲೇ ಬೇಕು ಎಂಬ ಹಂಬಲ ಆಗಲೇ ಬಂತು. ಮುಂದೆ ಓದಲು ಸಾಧ್ಯವಾಯಿತು. ಒಮ್ಮೆ ಇವರ ಕಾದಂಬರಿ ಓದಿ ಗೆಂಡೆತಿಮ್ಮನ ಸಾಲುಂಡಿಯನ್ನು ಹುಡುಕಿಕೊಂಡು ಹೋಗಿದ್ದೆ. ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ಇನ್ನೇನೂ ಕಪಿಲಾ ನದಿಯ ಸೇತುವೆ ದಾಟುವಾಗ ಎಡಕ್ಕೆ ಸಾಗುವ ರಸ್ತೆ ನೋಡಿದಾಗಲೆಲ್ಲ ದುರಂತ ನಾಯಕಿ ಗೆಂಡೆತಿಮ್ಮನ ಹೆಂಡತಿ ಮರಂಕಿ ಅವಳ ಹುಳಿಮಾವು ಎಂಬ ಹಳ್ಳಿ ಜ್ಞಾಪಕಕ್ಕೆ ಬರುತ್ತದೆ. ಭುಜಂಗಯ್ಯನ ಕಾದಂಬರಿಯಲ್ಲಿ ಬರುವ ಹಂಪಾಪುರ, ಮಾದಾಪುರ, ಇಂಧ್ರಭವನ, ಬೋಗಾದಿ, ಪಡುವಾರಹಳ್ಳಿಯಲ್ಲಿಯಲೆಲ್ಲಾ ಓಡಾಡಿದ್ದೇನೆ. ಮೊನ್ನೆ ಲೇಖಕರಾದ ಶ್ರೀಧರ್ ಬನವಾಸಿಯವರು ಆಲನಹಳ್ಳಿಯವರ ಕತೆಯೊಂದು ತೆಲುಗಿಗೆ ಅನುವಾದವಾಗುತ್ತಿದೆ. ಅದರ ಕಾಪಿ ರೈಟ್ ಪಡೆಯಲು ತುಂಬಾ ನಿಧಾನ ಆಯ್ತು ಅಂದರು. ನೆನ್ನೆ ಖ್ಯಾತ ಅನುವಾದಕರಾದ ಶ್ರೀ ರಂಗನಾಥ ರಾಮಚಂದ್ರ ರಾವ್ ಅವರು ಅದನ್ನೇ ಹೇಳಿ ಶ್ರೀಕೃಷ್ಣ ಅವರ ಜೊತೆ ತಮ್ಮ ಹಳೆಯ ಒಡನಾಟವನ್ನು ನೆನೆಸಿಕೊಂಡರು.

This slideshow requires JavaScript.

ಆಲನಹಳ್ಳಿಯವರ ಮಗಳು ಕೃತಿಕಾ ಆಲನಹಳ್ಳಿಯವರು ನನಗೆ ಸುಮಾರು ವರ್ಷದಿಂದ ಪರಿಚಯ. ಇಂದು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯಕ್ಕೆ ಅಧ್ಯಯನ ಮಂಡಳಿ ಸಭೆಗೆ ಹೋಗಿದ್ದಾಗ ಕೃತಿಕಾ ಸಿಕ್ಕರು. ಅಲ್ಲಿನ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಕೃತಿಕಾ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ವನ್ಯಜೀವಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಅದರಲ್ಲಿ ಸಂಶೋಧನೆ ಕೂಡ ಮಾಡುತ್ತಿದ್ದಾರೆ. ಅಂತ ಅಪರೂಪದ ಅನನ್ಯ ಲೇಖಕರ ಮಗಳಿಗೆ ನನ್ನ ಪುಸ್ತಕಗಳನ್ನು ಓದಲು ನೀಡಿದೆ. ನನಗೆ ಇದೊಂದು ಸಂತೋಷದ ವಿಷಯ.


  • ಪ್ರಸನ್ನ ಸಂತೇಕಡೂರು – ವಿಜ್ಞಾನಿಗಳು, ಉಪನ್ಯಾಸಕರು, ಕಾದಂಬರಿಕಾರರು, ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW