ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವರು ತನ್ನ 90 ನೇ ವಾರ್ಷಿಕೋತ್ಸವದ ಅಂಗವಾಗಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಸೋಮನಾಥ ದೇವಸ್ಥಾನ 12 ಜ್ಯೋತಿರ್ಲಿಂಗಗಳ ಪ್ರತಿ ಕೃತಿಗಳನ್ನು ಸ್ಥಾಪಿಸಿದ್ದ ಸ್ಥಳಕ್ಕೆ ಭೇಟಿಕೊಟ್ಟು ಅಲ್ಲಿನ ವೈಭವದ ಕುರಿತು ದೇವರಾಜ ಚಾರ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಆ ಸ್ಥಳಕ್ಕೆ ಹೋಗುತ್ತಿದ್ದಂತೆ ಪ್ರವೇಶ ದ್ವಾರದಲ್ಲೇ ನಮಗೆ ಅಲ್ಲಿನ ಬ್ರಹ್ಮಕುಮಾರಿಯರು ಸ್ವಾಗತ ನೀಡಿದರು. ಸಂಸ್ಥೆಯ ಧ್ಯೇಯ ಉದ್ದೇಶಗಳನ್ನು ವಿವರಿಸಿದರು. ಎಲ್ಲರೂ ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಇದ್ದಾರೆ. ಯಾರಿಗೂ ಸಮಾಧಾನವಿಲ್ಲ. ಮನಸ್ಸಿಗೆ ಶಾಂತಿ ಇಲ್ಲ, ಎಲ್ಲ ಓಡ್ತಾ ಇದ್ದಾರೆ ಹೇಗಾದರೂ ಸರಿ ಶ್ರೀಮಂತಗಾಗಬೇಕು ಅಷ್ಟೇ. ಹೃದಯವಂತಿಕೆಗೆ ಜಾಗವಿಲ್ಲ. ದೇಶದಲ್ಲಿ ಎಲ್ಲಾ ಕಡೆ ಅನ್ಯಾಯ, ಮೋಸ, ಅವ್ಯವಸ್ಥೆ ಕಂಡು ಬರುತಿದೆ. ಯಾವ ವ್ಯವಸ್ಥೆಯು ಸುಸ್ಥಿತಿಗೆ ಬರುವ ಲಕ್ಷಣವಿಲ್ಲ. ಆದ್ದರಿಂದ ಬ್ರಹ್ಮಮಾರಿ ವಿಶ್ವವಿದ್ಯಾಲಯದವರು ಸಾರ್ವಜನಿಕರಿಗೆ ಒಳ್ಳೆಯ ಸಮಾಲೋಚನೆಯನ್ನು ಕೊಡುತ್ತಾ ಬಂದಿದೆ.
ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಬೇಕಾದ ಧ್ಯಾನ, ವ್ಯಾಯಾಮ ಮತ್ತು ಸಮಾಲೋಚನೆಗಳನ್ನು ನಡೆಯುತ್ತದೆ. ಯಾವುದಕ್ಕೂ ಸಮಯವಿಲ್ಲದೆ ಜಂಜಾಟದಲ್ಲಿ ಬಿದ್ದಿರುವುದು ಸತ್ಯ. ಸತ್ಯ ಮಾರ್ಗದಲ್ಲಿ ನಡೆಯುವುದನ್ನು ನಿಲ್ಲಿಸಿದ್ದಾರೆ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಬೇಕಾದ ಮಾಹಿತಿಯನ್ನು ಇಂತಹ ಶಿಬಿರಗಳಲ್ಲಿ ಕೊಡುತ್ತಾರೆ. ಇಂತಹ ಪ್ರದರ್ಶನ ಸ್ಥಳಕ್ಕೆ ಭಾಗವಹಿಸುವುದು ಹಿತಕರ. ಇಂತಹ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದರೆ ಶಾಂತಿ, ನೆಮ್ಮದಿ ಇತ್ಯಾದಿ ಸಿಗುತ್ತದೆ. ಬ್ರಹ್ಮಕುಮಾರಿ ಶಾಖೆಗಳಿಗೆ ಭೇಟಿ ಕೊಟ್ಟರೆ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಸ್ಥಿರ ಮನಸ್ಸು ಮತ್ತು ಗುರಿ ಸಾಧನೆ ಇತ್ಯಾದಿ ಸಿಗುತ್ತದೆ ಎಂದು ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಯವರು ತಿಳಿಸಿಕೊಟ್ಟರು.ವಿಶ್ವವಿದ್ಯಾಲಯ ದೇಶದ ತುಂಬಾ ವ್ಯಾಪಿಸಿಕೊಂಡಿದೆ.ಎಲ್ಲಾ ರೀತಿಯ ವಿದ್ಯೆಗಳನ್ನು ಕೊಡುತ್ತಾ ಬಂದಿರುವುದು ಸಂತೋಷದ ವಿಚಾರ. ಅವರ ಶಾಖೆಗಳು ದೇಶದ ತುಂಬಾ ಕಡೆ ಇದ್ದು, ಎಲ್ಲವೂ ಉಚಿತವಾಗಿದೆ.
ಮುಂದೆ ಸಾಗುತ್ತಿದ್ದಂತೆ ನವ ಚೈತನ್ಯ ತುಂಬುವ ದೇವಿಯರ ದರ್ಶನ ನೋಡಿ ಮನ ತುಂಬಿ ಬಂತು. ಮಹಿಳೆಯರು ದೇವಿಯ ಅವಾತಾರವನ್ನು ತಮ್ಮಲ್ಲೇ ಆಹ್ವಾನಿಸಿಕೊಂಡು ನಿಜವಾದ ದೇವತೆಯರಂತೆ ಕಂಗೊಳಿಸುತ್ತಿದ್ದರು. ನೋಡಿ ಮನಸ್ಸು ತುಂಬಿ ಬಂತು. ಪಕ್ಕದಲ್ಲಿ ಕುಂಭಕರ್ಣನ ಪ್ರತಿ ಕೃತಿ ಇತ್ತು. ಅದು ಸಹ ಚೆನ್ನಾಗಿತ್ತು.ಮುಂದೆ 12 ಜ್ಯೋತಿರ್ಲಿಂಗಗಳ ದರ್ಶನ ಆಯಿತು. ಜ್ಯೋತಿರ್ಲಿಂಗಗಳು ದೇಶದ ಯಾವ ಕಡೆಯಲ್ಲಿ ಸ್ಥಾಪಿತವಾಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ:
- ಗ್ರೀ ಶನೀಶ್ವರ: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿದೆ.
- ಕೇದಾರನಾಥ: ಉತ್ತರಾಂಚಲರಾಜ್ಯದಲ್ಲಿದೆ.
- ತ್ರಯಂಬಕೇಶ್ವರ: ನಾಸಿಕ್ ನಲ್ಲಿದೆ.
- ವಿಶ್ವನಾಥ: ಉತ್ತರ ಪ್ರದೇಶ ವಾರಣಾಸಿಯಲ್ಲಿದೆ.
- ನಾಗೇಶ್ವರ : ಗುಜರಾತ್ ರಾಜ್ಯದ ಸೌರಾಷ್ಟ್ರದಲ್ಲಿದೆ.
- ರಾಮೇಶ್ವರ : ತಮಿಳುನಾಡಿನ ರಾಮೇಶ್ವರ ದೀಪದಲ್ಲಿದೆ.
- ಭೀಮಾಶಂಕರ : ಮಹಾರಾಷ್ಟ್ರದ ಭೀಮಾನದಿ ತೀರದಲ್ಲಿದೆ.
- ವೈದ್ಯನಾಥೇಶ್ವರ : ಬಿಹಾರ ರಾಜ್ಯದಲ್ಲಿದೆ.
- ಓಂಕಾರೇಶ್ವರ: ಮಧ್ಯಪ್ರದೇಶದ ನರ್ಮದಾ ನದಿ ತೀರದಲ್ಲಿದೆ.
- ಮಹಾಕಾಳೇಶ್ವರ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದೆ.
- ಶ್ರೀಶೈಲ :ಆಂಧ್ರಪ್ರದೇಶದ ಶ್ರೀಶೈಲ ಪರ್ವತದಲ್ಲಿ ಇದೆ.
- ಸೋಮನಾಥ: ಗುಜರಾತ್ ನಲ್ಲಿದೆ.
ಎಲ್ಲಾ 12 ಲಿಂಗಗಳನ್ನು ಒಂದೇ ಕಡೆ ನೋಡುವ ಸೌಭಾಗ್ಯ ನಮ್ಮದಾಗಿತ್ತು.
ಗುಜರಾತ್ ನಲ್ಲಿರುವ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪ್ರತಿ ಕೃತಿ ಚೆನ್ನಾಗಿ ಮೂಡಿ ಬಂದಿದೆ. ಪ್ರತಿಮೆ ಲಿಂಗದ ಆಕಾರದಲ್ಲಿ ಇದೆ. ದೇವಸ್ಥಾನದ ಮುಂಭಾಗದಲ್ಲಿ ಬಸವನ ಮೂರ್ತಿ ಇದೆ. ಈ ದೇವಸ್ಥಾನವನ್ನು ವಿಶೇಷವಾಗಿ, ವಿಶಾಲವಾಗಿ ನಿರ್ಮಿಸಿದ್ದಾರೆ. ನೋಡಲು ತುಂಬಾ ಸುಂದರವಾಗಿದೆ.
ದೇವಸ್ಥಾನದ ಪಕ್ಕದಲ್ಲಿ ಉದ್ಭವ ಶಿವಲಿಂಗ ಸ್ಥಾಪಿಸಿದ್ದಾರೆ.ಈ ಲಿಂಗವು ಸದಾ ತಿರುಗುತ್ತಿರುತ್ತದೆ. ಶಿವಲಿಂಗ ಉದ್ಭವವಾಗುವ ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ವಿಶಾಲವಾದ ಜಾಗದಲ್ಲಿ ಒಂದು ಕಡೆ ದೊಡ್ಡ ವೇದಿಕೆ ಇದೆ.ಈ ವೇದಿಕೆಯಲ್ಲಿ ಸಂಜೆಯ ವೇಳೆ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಮೈಸೂರಿನ ಐಶ್ವರ್ಯ ಪೆಟ್ರೋಲ್ ಬಂಕ್ನ ಎದುರುಗಡೆ ಇರುವ ಖಾಲಿ ನಿವೇಶನದಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಿರುತ್ತಾರೆ.
ಫೆಬ್ರುವರಿ 8, 2026 ರಿಂದ ಫೆಬ್ರುವರಿ 22,2026 ರವರೆಗೆ ಈ ವ್ಯವಸ್ಥೆ ಉಚಿತವಾಗಿ ಇರುತ್ತದೆಯಂತೆ. ಸಮಯ ಬೆಳಗ್ಗೆ ಎಂಟರಿಂದ ರಾತ್ರಿ 9 ರವರೆಗೆ.
- ದೇವರಾಜ ಚಾರ್ – ಮೈಸೂರು.
