ಚೀನಾದ ಮಹಾಗೋಡೆಯ ಮುಂದೆ, ಜಗತ್ತಿನ ಎರಡನೇ ಅತೀ ದೊಡ್ಡ ಗೋಡೆ ಭಾರತ ದೇಶದ ಕುಂಬಲ್ಘರ್ ಕೋಟೆಯ ಬಗ್ಗೆ ಮರೆತೇ ಬಿಟ್ಟಿದ್ದೇವೆ,ಇದರ ಬಗ್ಗೆ ತಿಳಿದಿರುವವರು ಸ್ವಲ್ಪೇ ಜನ, ತಪ್ಪದೆ ಓದಿ.
ರಾಜಸ್ತಾನದ ಕುಂಬಲ್ಘರ್ ಕೋಟೆ ಪ್ರಸಿದ್ಧಿಯಾಗಿರುವುದೇ ಅಲ್ಲಿ ನಿರ್ಮಾಣವಾದ ಗೋಡೆಯಿಂದ, ವಿಶ್ವದ ಎರಡನೆಯ ಮಹಾನ್ ಗೋಡೆ ಇದಾಗಿದೆ. ಇದನ್ನು ಭಾರತದ ಮಹಾನ್ ಗೋಡೆಯೆಂದೇ ಕರೆಯಲಾಗುತ್ತದೆ. ಚೀನಾದ ಅತಿದೊಡ್ಡ ಗೋಡೆಯ ನಂತರ ಹೆಸರು ಕೇಳಿಬರುವುದು ಕುಂಬಲ್ಘರ್ ಗೋಡೆ. ಅರಮನಿ ನಗರಿ ಉದಯಪುರದಿಂದ ಸುಮಾರು 80 ಕಿಮಿ ದೂರದಲ್ಲಿದೆ ಈ ಕೋಟೆ.

500 ವರ್ಷಗಳ ಹಿಂದೆ ಮೇವಾರದ ಅರಸ ರಾಜಾ ರಾಣಾ ಕುಂಭ ನಿರ್ಮಾಣ ಮಾಡಿದರು. ಕುಂಬಾ ಒಬ್ಬ ಬಲಿಷ್ಠ ದೊರೆಯಾಗಿದ್ದ. ಈ ಕೋಟೆಯ ಗೋಡೆ ಸುಮಾರು 36 ಕಿಮೀ ಉದ್ದ, 15 ಮೀಟರ್ ಅಗಲವನ್ನು ಚಾಚಿಕೊಂಡಿದೆ. ಅರಾವಳಿ ಬೆಟ್ಟಗಳ ಸಾಲಿನಲ್ಲಿ ಈ ಸುಂದರ ಕೋಟೆಯನ್ನು ಕಾಣಬಹುದು. ಇದನ್ನು ನಿರ್ಮಿಸಲು ೧೫ ವರ್ಷಗಳು ತಗೆದುಕೊಂಡಿತ್ತು. ಈ ಕೋಟೆಯೊಳಗೆ ಸುಮಾರು 300 ದೇವಸ್ಥಾನಗಳು, ಸುಮಾರು 80 ಕ್ಕೂ ಹೆಚ್ಚು ಕೋಟೆಗಳಿದ್ದು, ಅದರಲ್ಲಿ 34 ಕೋಟೆಯನ್ನು ರಾಣಾ ಕುಂಭಾ ನಿರ್ಮಿಸಿದ ದಾಖಲೆಗಳಿವೆ. ಇದರಲ್ಲಿ ‘ದುರ್ಗಾ ಸಾಮ್ರಾಟ್’ ಕೋಟೆಯು ಒಂದು ವಿಶೇಷ ಆಕರ್ಷಣೀಯ ಕೋಟೆ. ಇದರ ನಿರ್ಮಾಣದ ಹಿಂದೆ ರೋಚಕ ಕತೆಯಿದೆ. ಇದರ ನಿರ್ಮಾಣದ ಹಂತದಲ್ಲಿದ್ದಾಗ ರಾಣಾ ಕುಂಭರಿಗೆ ಸಾಕಷ್ಟು ಅಡಚಣೆಗಳು ಉಂಟಾದವು, ಆಗ ಕುಂಭ ಚಿಂತಾಗ್ರಹರಾಗಿ ಸಂತರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದ. ಆಗ ಆ ಸಂತ ಯಾರಾದರೂ ಮನುಷ್ಯರು ಸ್ವಇಚ್ಛೆಯಿಂದ ತಮ್ಮ ಬಲಿಕೊಟ್ಟರೆ ಈ ಕೋಟೆ ಪೂರ್ಣವಾಗುವುದು ಎಂದರು, ಆಗ ರಾಣಾ ಕುಂಭಾರಿಗೆ ಇದು ದೊಡ್ಡ ಚಿಂತೆಯಾಯಿತು. ಯಾರು ಮುಂದೆ ಸ್ವಇಚ್ಛೆಯಿಂದ ತಮ್ಮ ಬಲಿಕೊಡುವರೆಂದು ಚಿಂತಿಸುತ್ತಿದ್ದಾಗ ಆ ಸಂತನೇ ಮುಂದೆ ಬಂದ, ತನ್ನ ಬಲಿ ಕೊಟ್ಟ ಇದರಿಂದ ನಿರ್ಮಾಣವು ಸುಲಭವಾಯಿತು ಎನ್ನುವ ಕತೆಯಿದೆ.
ಈ ಗೋಡೆಯಲ್ಲಿ ಸಾಕಷ್ಟು ಕಾವಲು ಗೋಪುರಗಳಿದ್ದು, ನೋಡಲು ಮಡಿಕೆಯಂತೆ ಕಾಣುತ್ತವೆ. ಮುಖ್ಯ ದ್ವಾರವನ್ನು ರಾಮ್ ಪೋಲ್ ಅಥವಾ ರಾಮ್ ಗೇಟ್ ಕೂಡಾ ಎನ್ನಲಾಗುತ್ತದೆ. ಕೋಟೆಯೊಳಗೆ ಸುರಂಗ ಮಾರ್ಗವು ಇದ್ದು, ಸುಮಾರು ೫ ಕಿಮೀವರೆಗೂ ಇದೆ. ಈ ಕೋಟೆ ಮೇವಾಡ ಅರಸರಿಗೆ ಭದ್ರತೆಯನ್ನು ಕೊಟ್ಟಿತು.
ಈ ಕೋಟೆ ಇಂದಿಗೂ ಗಟ್ಟಿಮುಟ್ಟಾಗಿದೆ. ಮತ್ತು ೧೯ನೆಯ ಶತಮಾನದಲ್ಲಿ ರಾಣಾ ಕುಂಭನ ಬಾದಲ್ ಮಹಲ್ ಅರಮನೆ ನೋಡುಗರನ್ನು ಸೆಳೆಯುತ್ತಿದೆ. ಇದು 36 ಕಿಲೋಮೀಟರು ಉದ್ದ, 360 ದೇವಾಲಯಗಳು, 40 ಅಡಿ ಸಾಂದ್ರತೆಯ ಅತಿ ದೊಡ್ದ ಟ್ಯಾಂಕ್ ಕೂಡಾ ಇದೆ.
ರಾಜಸ್ತಾನಕ್ಕೆ ಭೇಟಿ ನೀಡಿದರೆ ನಮ್ಮ ಹೆಮ್ಮೆಯ ಮಹಾನ್ ಗೋಡೆ ಮತ್ತು ಕೋಟೆಯನ್ನು ನೋಡುವುದನ್ನು ಮರೆಯಬೇಡಿ …
ಹತ್ತಿರದ ವಿಮಾನ ನಿಲ್ದಾಣಗಳು :
ಉದಯಪುರ ಡಬೊಕ್ ವಿಮಾನ ನಿಲ್ದಾಣ,
ಹತ್ತಿರದ ನಗರಗಳು : ಉದಯಪುರ, ದೆಹಲಿ,ಮುಂಬೈ
ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಫೆಬ್ರುವರಿಯವರೆಗೂ ಒಳ್ಳೆಯ ತಿಂಗಳು
- ಶಾಲಿನಿ ಹೂಲಿ ಪ್ರದೀಪ್
