ಬೆವರಿನ ಬೆಲೆಯನು ಅರಿತವನೇ ತರುವನು ದೇಶಕೆ ಗೌರವಗತ್ತು…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕಾರ್ಮಿಕ ದಿನದಂದು ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕಾರ್ಮಿಕನಾಗಿ ದುಡಿದರೆ
ಮಾತ್ರ ನಮಗಿದೆ ತಿನ್ನುವ
ಅನ್ನದ ಹಕ್ಕು
ಖುಷಿಯೂ ಆರೋಗ್ಯವೂ
ಆಗುವುದು ನಮ್ಮಬದುಕಿನ ದಿಕ್ಕು
ಬೆವರಿನ ಬೆಲೆಯನು ಅರಿತವನೇ ತರುವನು ದೇಶಕೆ ಗೌರವಗತ್ತು
ಕುಳಿತು ತಿನ್ನುವ ಭೋಗಿಯೇ
ತರುವನು ದೇಶಕೆ ಆಪತ್ತು
ಕರ್ಮಯೋಗಿಯ ಕಾಯಕದಿಂದ
ಹೆಚ್ಚುವುದು ದೇಶದ ಸಂಪತ್ತು
ರಕ್ಷಣೆ ,ಪೋಷಣೆ,
ಧಾನ್ಯದೈಸಿರಿಯು ನೆಲದ ಮಕ್ಕಳ ದೇಣಿಗೆಯ ಸೊತ್ತು
ಗೌರವಿಸಬೇಕು ಕರ್ಮಯೋಗಿಗಳ
ಸ್ವಚ್ಛತೆ,ಸ್ವಾಸ್ಥ್ಯಕೆ
ಶ್ರಮಿಸುವರ
ಕಟ್ಟಡ ನಿರ್ಮಾಣ ಕಾರ್ಮಿಕರ
ರಸ್ತೆಮಾಡುವ ಸೂರ್ಯ ಮಿತ್ರರ
ಗಣಿಯೊಳಗಿನ ಕರ್ಮಯೋಗಿಗಳ
ಕಾರ್ಖಾನೆಗಳಲ್ಲಿ ಬೆವರು
ಬಸಿವವರ……..
ನಮಿಸುವ ನಾವು ದೇವರ ಮಕ್ಕಳ
ನಮಗಾಗಿ ಅಹರ್ನಿಶಿ ದುಡಿವವರ
ಬಿಡುವಿಲ್ಲದೆ ದೇಶಸೇವೆಗೆ ಸಂದವರ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
