ಸತ್ಯಕ್ಕೆ ಸಾವಿಲ್ಲ- ಪ್ರೊ ರೂಪೇಶ್ ಪುತ್ತೂರು



ಮಾನವೀಯ ಮೌಲ್ಯಗಳು ರಸ್ತೆಯಂತೆ ವಿಶಾಲತೆ ಮತ್ತು ಮಿತಿಯನ್ನು ಹೊಂದಿರಬೇಕು, ಇಲ್ಲವಾದರೆ ಅನಾಹುತಗಳು ಸಂಭವಿಸುತ್ತದೆ ಎನ್ನುತ್ತಾ ಜೀವನದ ಸಾತ್ವಿಕ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಲೇಖಕರಾದ ಪ್ರೊ ರೂಪೇಶ್ ಪುತ್ತೂರು ಅವರು, ಮುಂದೆ ಓದಿ…

ಮನುಷ್ಯನಿಗೆ ಕಣ್ಣು + ಒಳಗಣ್ಣೂ ಇದೆ. ನೋಡುವುದು ಬರೇ ಸಮಾಂತರ ದೃಷ್ಟಿಯಿಂದ ನೋಡುವುದಾಗದೆ ದೃಷ್ಟಿ ಕೋನ ಬದಲಾಯಿಸಬೇಕು.

ನನ್ನೂರಿನಲ್ಲಿ ಒಂದು ಕಾಲದಲ್ಲಿ ರಸ್ತೆ ಕಡಿದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹೆಚ್ಚು ಆಟೋ ರಿಕ್ಷಾ ಇರುವ ತಾಲೂಕು ಆಗಿತ್ತು, ವಾಹನ ಓಡಿಸುವಾಗ ಏಕಾಗ್ರತೆ ಜೊತೆ ಆಟೋ ಚಾಲಕರ ಕಣ್ಣುಗಳು ರಸ್ತೆಯ ಇಕ್ಕೆಲಗಳಲ್ಲಿ ಪ್ರಯಾಣಿಕರನ್ನು ಸೆರೆ ಹಿಡಿಯುತ್ತಿದ್ದರೂ ಎಂದೂ ಅದರಿಂದ ಒಂದು ಅಪಘಾತ ಆಗಿದ್ದು ಎಲ್ಲೂ ಕಂಡಿಲ್ಲ. ಕಾರಣ ಅವರ ಒಳಗಣ್ಣು ದಾರಿ ತಪ್ಪುತ್ತಿರಲಿಲ್ಲ.
ಇಂದು ನೂತನವಾಗಿ ರಸ್ತೆ ಸೇರಿರುವ ಪುತ್ತೂರಿನ ಆಟೋ ಚಾಲಕರೂ ಅದನ್ನು ಮುಂದುವರಿಸುತ್ತಿದ್ದಾರೆ. ಅಪಘಾತ ರಹಿತತೆ ರಕ್ತಗತವಾಗಿದೆ.

ಫೋಟೋ ಕೃಪೆ : oneindia

ನಾವು ಈ ಜೀವನದ ರಸ್ತೆಯಲ್ಲಿ ಈ #ಆಟೋ_ಚಾಲಕರಂತೆ ರಸ್ತೆಯನ್ನು ಒಳಗಣ್ಣಲ್ಲಿ ಕಾಣಬೇಕು.

ಒಂದು ಕಾಲದಲ್ಲಿ ಅದು ನಡೆವ ದಾರಿಯಾಗಿ, ನಂತರ ಎತ್ತಿನ ಬಂಡಿ, ಹೀಗೆ ವಿವಿಧ ಮೋಟಾರು ವಾಹನಗಳು ಸರಸಾಗಾಟಾಗಿ ಓಡಾಡುವ ಅಗಲವಾದ ರಸ್ತೆಯಾದರೂ, ಅದು ಸಂಚಾರಕ್ಕಾಗಿಯೇ ಮೀಸಲಿಟ್ಟ ಜಾಗ.

ಕಾಲ ಕಳೆದಂತೆ ರಸ್ತೆ ವಿಶಾಲತೆಯನ್ನು ಒಳಗೊಂಡು ಹೋಗುತ್ತಿದೆ. ಅದರಲ್ಲಿ ಓಡಾಡುವವರೆ ಭಾವನೆ ವಿವಿಧವಾದರೂ ರಸ್ತೆಯ ಮಿತಿ ದಾಟುವುದಿಲ್ಲ ಅಲ್ಲವೇ? ಮಾನವೀಯ ಮೌಲ್ಯವೆಂಬ ರಸ್ತೆಯೂ ಹಾಗೆ… ಅದಕ್ಕೆ ವಿಶಾಲತೆಯಿದೆ , ಮಿತಿಯೂ ಇದೆ.

ಅವೆರಡರ ಅರಿವು ಇಲ್ಲದವರಿಂದ ಅಪಘಾತವಾಗುತ್ತದೆ, ಅಂತಹಾ ಅಪಘಾತದಿಂದ ಸ್ವಾಸ್ಥ್ಯ ಸಮಾಜದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಕೆಲವರು ಆ ಅಪಘಾತ ನೋಡುತ್ತಾ ನಿಯಂತ್ರಣ ತಪ್ಪುವವರೂ , ನಿಯಂತ್ರಣ ತಪ್ಪದೇ ಇರುವವರೂ ಇರುತ್ತಾರೆ. ಆದರೆ ಕೆಲವು ಆತ್ಮಸಾಕ್ಷಿಯ ಒಳಗಣ್ಣು ಒತ್ತೆಯಿಟ್ಟ ಮನುಷ್ಯರಲ್ಲದ ಮನುಷ್ಯ ಜನ್ಮದ ಶಾಪಗಳು, ಆ ರಸ್ತೆಯಲ್ಲಿ ವಾಹನಗಳಿಲ್ಲದಾಗ ಕಾಲ್ನಡಿಗೆಯಲ್ಲಿ ನಡೆದ ತಮ್ಮ ಪೂರ್ವಜರನ್ನು ಅರಿಯಲು ಪ್ರಯತ್ನಿಸದೆ ಬೈಯುತ್ತಾರೆ.



ಇಂದು ….

ಆ ಬೈದವರನ್ನು ಪ್ರಚಾರ ಮಾಡುವುದರಲ್ಲಿ ,
ಪ್ರಚಾರ ಮಾಡದೇ ಇರುವುದರಲ್ಲಿ ,
ಅವರಿಗೆ ಬುದ್ದಿ ಹೇಳುವುದರಲ್ಲಿ,
ಫಲವಿದೆಯೋ ಎಂದು ಯೋಚಿಸುವುದರಲ್ಲಿ
ನಾವು ಪ್ರಭುದ್ದತೆ ಹುಡುಕಬೇಕಾಗಿದೆ.

#ಮಾನವ_ಜೀವನದಲ್ಲಿ ನಾವು ಕ್ಷುಲ್ಲಕವಾಗಿ ಸಂಪಾದಿಸಿದ್ದು ಬಿಟ್ಟು ಹೋಗುತ್ತೇವೆ. ಅದು ಯಾರದಾದರೂ ಪಾಲಾಗಬಹುದು, ಆ ಪಾಲಾದವರು ನಮ್ಮನ್ನು ಮರೆಯಬಹುದು. ಆದರೆ ನಮ್ಮಿಂದ ಅವರಿಗೆ ಸಿಕ್ಕ ಪ್ರೀತಿ ಹಾಗೂ ಸತ್ಯ ಎಂದೂ ಸಾವಿಲ್ಲದೆ ಅಚ್ಚಳಿಯದಿರುತ್ತದೆ.

ಮರಣ ಎಂಬ ಸಾರ್ವಕಾಲಿಕ ಸತ್ಯ ಅರಿತು ಮಾನವ ಮಾನವನನ್ನು ಆತ್ಮಸಾಕ್ಷಿಯ ಒಳಗಣ್ಣಿಂದ ನೋಡಿದಾಗ, ಹಲವಾರು ಅರಿಯದ ಅರಿವಿನ ಪ್ರಶ್ನೆ ನಮ್ಮೊಳಗೆ ಬರುತ್ತದೆ. ಆ ಪ್ರಶ್ನೆಗಳಿಗೆ ಉತ್ತರ ಪರಾಂಬರಿಸುವುದರಲ್ಲಿ ದೊರಕುತ್ತದೆ. ಆದರೆ ಅಲ್ಲಿಯವರೆಗೆ ಸುಳ್ಳಿನ ದಾರಿ, ಸುಳ್ಳಿನ ರಥದಲ್ಲಿ ಪ್ರಯಾಣಿಸಿದವನ ಆತ್ಮಸಾಕ್ಷಿಯ ಕುದುರೆ ಎಲ್ಲೋ ಕಣ್ಮರೆಯಾಗಿರುತ್ತದೆ, ಜೀವನದ ರಥ ನಿಂತಿರುತ್ತದೆ, ಪರಾಂಬರಿಸಲು ಸಮಯ ಶೂನ್ಯವಾಗಿರುತ್ತದೆ.

ಅಲ್ಲಿ ನಮಗೆ ಕಾಣುವುದೊಂದೆ …
ಸತ್ಯಕ್ಕೆ ಸಾವಿಲ್ಲ ಎಂಬ ಜೀವ.

ನಿಮ್ಮವ ನಲ್ಲ
*ರೂಪು*


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು) ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW