ದೇಹದ ಮೇಲಾದ ಕಲೆಗಳಿಗೆ ನಿಂಬೆರಸ ಬಿಸಿ ಮಾಡಿ ಹಚ್ಚುವುದರಿಂದ ಕಲೆಗಳು ಗುಣವಾಗುತ್ತದೆ, ಲಿಂಬೆ ಹಣ್ಣಿನ ಮಹತ್ವದ ಕುರಿತು ನಾಟಿವೈದ್ಯೆರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಿಂಬೆಯಲ್ಲಿ ಮೂರು ವಿಧ. ಗಜನಿಂಬೆ , ಕಾಡು ನಿಂಬೆ ಮತ್ತು ರಸ ನಿಂಬೆ ಗಜ ನಿಂಬೆ ಇದು ಸಿಪ್ಪೆ ದಪ್ಪ ಅಡಿಗೆಯಲ್ಲಿ ಉಪಯೋಗ ಉಪ್ಪಿನಕಾಯಿಯಲ್ಲಿ ಉಪಯೋಗ. ಕಾಡು ನಿಂಬೆಯ ಉಪಯೋಗ ತುಂಬಾ ಇಲ್ಲಿ ವಿಷಯ ಪ್ರಸ್ತಾಪ ಮಾಡಿದರೆ ಲೇಖನ ತುಂಬಾ ಉದ್ದವಾಗುತ್ತದೆ. ನಾವೆಲ್ಲರೂ ಹೆಚ್ಚು ಉಪಯೋಗಿಸುವುದು ರಸ ನಿಂಬೆಹಣ್ಣು ತಿಳುಸಿಪ್ಪೆ ರಸ ಹೆಚ್ಚಿರುತ್ತದೆ. ಈ ಗಿಡವು ಹೆಚ್ಚು ಔಷಧೀಯ ಗುಣವನ್ನು ಹೊಂದಿರುತ್ತದೆ.
ನಿಂಬೆ ಹಣ್ಣಿನ ಉಪಯೋಗ ಒಂದೇ ಎರಡೇ ಅಡಿಗೆಯಲ್ಲಿ, ದೃಷ್ಟಿ ನಿವಾರಿಸಲು, ಉಪ್ಪಿನಕಾಯಿ, ತಂಪು ಪಾನೀಯ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರ ಎಲೆ, ಬೇರು, ಹೂವು, ಎಳೆ ಕಾಯಿ ಮತ್ತು ಹಣ್ಣು ಇವೆಲ್ಲವೂ ಔಷಧೀಯ ರೂಪದಲ್ಲಿ ಉಪಯೋಗ.
1) ಎಲೆಯನ್ನು ಸ್ವಚ್ಛಗೊಳಿಸಿ, ಅಕ್ಕಿ ತೊಳೆದ ನೀರಿನಲ್ಲಿ ಕಿವುಚಿ ಕುಡಿಯುವುದರಿಂದ ಗರ್ಭಿಣಿಯರ ವಾಂತಿ ನಿಲ್ಲುತ್ತದೆ
2) ಹೂವಿನ ಕಷಾಯ ಮಾಡಿ ಕುಡಿ ಯುವುದರಿಂದ ನಂಜು ನಿವಾರಕವಾಗಿ ಕೆಲಸ ಮಾಡುತ್ತದೆ.
3) ನಿಂಬೆಯ ಎಳೆಯ ಕಾಯಿಗಳನ್ನು ಬೇಯಿಸಿ ಕಾಳುಮೆಣಸು ಜೀರಿಗೆ ಸೇರಿಸಿ ತುಪ್ಪದಲ್ಲಿ ಹುರಿದು ಬೆಲ್ಲ ಸೇರಿಸಿ ಸೇವಿಸುವುದರಿಂದ ಬಾಳಂತಿಯರಿಗೆ ತುಂಬಾ ಒಳ್ಳೆಯದು.
ಫೋಟೋ ಕೃಪೆ : google
4) ನಿಂಬೆಯ ಬೇರನ್ನು ನಿಂಬೆಯ ರಸದಲ್ಲಿ ತೈದು ನೆಕ್ಕುವುದರಿಂದ ವಾಂತಿ ಮತ್ತು ಭೇದಿ ಎರಡು ನಿಲ್ಲುತ್ತದೆ.
5) ಸುಮಾರು 25 ವರ್ಷದ ಹಿಂದಿನ ಮಾತು.ನಾವೆಲ್ಲ ಆಸ್ಪತ್ರೆಯಲ್ಲಿ ಕಿವಿ ಅಥವಾ ಮೂಗನ್ನು ಚುಚ್ಚಿಕೊಂಡವರಲ್ಲ. ಆಗ ನಿಂಬೆಮುಳ್ಳೆ ಇದಕ್ಕೆ ಬೇಕಾಗುವ ಸಲಕರಣೆ.ನಿಂಬೆಯ ಮುಳ್ಳಿನಿಂದ ಕಿವಿ ಮೂಗು ಚುಚ್ಚಿ ಆಭರಣವನ್ನು ಧರಿಸಲು ಗಾಯ ಬೇಗನೆ ವಾಸಿಯಾಗುತ್ತದೆ.ನಂಜು ನಿವಾರಣೆ ಆಗುತ್ತದೆ.
6) ಬೀಜದ ಚೂರ್ಣ ಸೇವಿಸುವುದರಿಂದ ಹೊಟ್ಟೆ ಹುಳು ನಾಶವಾಗುತ್ತದೆ
7) ಬೀಜವನ್ನು ನೀರಿನಲ್ಲಿ ಅರೆದು ಲೇಪಿಸುವುದರಿಂದ ಇಂದ್ರಲೂಪ್ತ ಗುಣವಾಗುತ್ತದೆ.
8) ಒಣಗಿದ ನಿಂಬೆ ಸಿಪ್ಪೆಯನ್ನು ಬಸ್ಮ ಮಾಡಿ ಜೇನುತುಪ್ಪ ಸೇರಿಸಿ ಪ್ರತಿ ಎರಡು ಗಂಟೆಗೊಮ್ಮೆ ಕೊಡುತ್ತಿದ್ದರೆ ವಾಂತಿ ನಿಲ್ಲುತ್ತದೆ.
9) ನಿಂಬೆ ಸಿಪ್ಪೆಗೆ ಉಪ್ಪು ಕಾಳುಮೆಣಸು ಜೀರಿಗೆ ಪುಡಿ ಇಂಗು ಚೂರು ಶುಂಠಿ ಸ್ವಲ್ಪ ಓಮ ಹಾಕಿ ಮಿಕ್ಸಿ ಮಾಡಿ ಸಣ್ಣ ಸಣ್ಣ ಬಿಲ್ಲೆಗಳನ್ನಾಗಿ ಮಾಡಿ ಒಣಗಿಸಿ ಡಬ್ಬಿ ತುಂಬಿ ಗಾಳಿ ಆಡದಂತೆ ಇಟ್ಟುಕೊಳ್ಳಬೇಕು ಬೇಕಾದಾಗ ಬಾಯಲ್ಲಿಟ್ಟು ಚಪ್ಪರಿಸಿದರೆ ಗ್ಯಾಸ್ಟ್ರಿಕ್ ಗುಣವಾಗುತ್ತದೆ. ಬಾಯಿ ರುಚಿ ಹೆಚ್ಚುತ್ತದೆ.
10) ನಿಂಬೆ ರಸವನ್ನು ಸುಣ್ಣದಲ್ಲಿ ಸೇರಿಸಿ ಹಚ್ಚುವುದರಿಂದ ವಿಷ ಜಂತುಗಳ ಕಡಿತ ಮತ್ತು ನಂಜು ನಿವಾರಣೆ ಆಗುತ್ತದೆ.
11) ನಿಂಬೆರಸ ಸುಣ್ಣ ಬೆಲ್ಲ ಸೇರಿಸಿ ಹಚ್ಚುವುದರಿಂದ ಗಂಟಲುಗಳಲೆ (ಟ್ರಾನ್ಸಿಲ್) ಗುಣವಾಗುತ್ತದೆ.
12) ತೊಗರಿ ಬೀಜದ ಪುಡಿ ನೆಲ್ಲಿ ಪುಡಿ ನಿಂಬೆರಸ ಸೇರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗಿ ಸೊಂಪಾಗಿ ಬೆಳೆಯುತ್ತದೆ.
13) ಒಂದು ಕಪ್ಪ್ ಆಗತಾನೆ ಕರೆದಿರುವ ಹಸುವಿನ ಹಾಲಿನಲ್ಲಿ ಒಂದು ನಿಂಬೆ ಹಣ್ಣಿನಷ್ಟು ಹುಳಿ ಹಾಕಿ ತಕ್ಷಣ ಕುಡಿಯುವುದರಿಂದ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.
14) ಎಳೆನೀರಿನಲ್ಲಿ ನಿಂಬೆರಸ ಸೇರಿಸಿ ಕುಡಿಯುವುದರಿಂದ ಬೇಸಿಗೆಯ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
15) ಒಂದು ಚಮಚ ನಿಂಬೆರಸಕ್ಕೆ ಒಂದು ಎಸಳು ಬೆಳ್ಳುಳ್ಳಿ ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸುವುದರಿಂದ ಸಂಧಿವಾತ ನಿವಾರಣೆ ಆಗುತ್ತದೆ.
16) ಕಾಫಿ ಡಿಕಾಕ್ಷನ್ ಗೆ ನಿಂಬೆರಸ ಸೇರಿಸಿ ಕುಡಿಯುವುದರಿಂದ ಜ್ವರ ಮತ್ತು ಕೆಮ್ಮು ನಿವಾರಣೆ ಆಗುತ್ತದೆ.
17) ಗ್ಯಾಸ್ಟ್ರಿಕ್ ಸಮಸ್ಯೆಗೆ ಮೆಡಿಸಿನ್ ಮಾಡುವ ವಿಧಾನ: ಓಮ್ ಕಾಳನ್ನು ಕಸಕಡ್ಡಿ ತೆಗೆದುಕೊಂಡು ಹಣ್ಣು ನಿಂಬೆರಸ ಹಿಂಡಿ ಬಿಸಿಲಿಗೆ ಒಣಗಿಸಿ ಮಾರನೇ ದಿನ ಮತ್ತೆ ನಿಂಬೆ ಹಣ್ಣನ್ನು ಕತ್ತರಿಸಿ ಮತ್ತೆ ರಸ ಹಾಕಿ ಮಿಶ್ರ ಮಾಡಿ ಬಿಸಿಲಿನಲ್ಲಿ ಒಣಗಿಸಿ. ಹೀಗೆ ಇಪ್ಪತ್ತೋಂದು ದಿನಗಳ ಕಾಲ ನಿಂಬೆ ಹಣ್ಣಿನ ರಸ ಹಾಕಿ ಮಿಶ್ರ ಮಾಡಿ ಒಣಗಿಸಿದ ನಂತರ ಇಂಗು ಸೈಂದ ಲವಣ ಹಾಕಿ ಚೆನ್ನಾಗಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟಿರುವ ಪದಾರ್ಥ ನನ್ನಲ್ಲಿ ಇದೆ ಅಗತ್ಯ ಇದ್ದವರು ಪ್ರಯೋಜನ ಪಡೆಯಬಹುದು.
ಫೋಟೋ ಕೃಪೆ : google
18) ನಿಂಬೆ ಹಣ್ಣಿನ ರಸವನ್ನು ಕೆಂಪು ಕಲ್ಲು ಸಕ್ಕರೆಯೊಂದಿಗೆ ಬೆರೆಸಿ ಕಾಯಿಸಿ ಪಾಕ ಮಾಡಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುಕೊಂಡು ಕಫ ಕೆಮ್ಮು ಇದ್ದಾಗ ಒಂದೊಂದೇ ಬಾಯಲ್ಲಿಟ್ಟು ಸೀಪುತ್ತಿದ್ದರೆ ಗುಣವಾಗುತ್ತದೆ.
19) ಮೂರು ವಾರ (21 ದಿನ) ಬೇರೆ ಏನನ್ನು ಸೇವಿಸದೆ ನಿಂಬೆರಸ ಸೇರಿಸಿದ ನೀರನ್ನು ಕುಡಿಯುತ್ತಿದ್ದರೆ ಚರ್ಮರೋಗ ಗುಣವಾಗುತ್ತದೆ .
20) 21 ದಿನ ಬೇರೆ ಏನನ್ನು ಸೇವಿಸದೆ ನಿಂಬೆರಸ ಸೇರಿಸಿದ ನೀರನ್ನು ಕುಡಿಯುವುದರಿಂದ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ.
21) ಇಡಿಯಾದ ನಿಂಬೆ ಹಣ್ಣನ್ನು ಕೆಂಡದಲ್ಲಿ ಸುಟ್ಟು ಅದರ ರಸ ಕುಡಿಯುವುದರಿಂದ ನೆಗಡಿ ಗುಣವಾಗುತ್ತದೆ.
22) ದೇಹದ ಮೇಲಾದ ಕಲೆಗಳಿಗೆ ನಿಂಬೆರಸ ಬಿಸಿ ಮಾಡಿ ಹಚ್ಚುವುದರಿಂದ ಕಲೆಗಳು ಗುಣವಾಗುತ್ತದೆ.
23) ನಿಂಬೆರಸ ಸಾಸಿವೆ ಎಣ್ಣೆ ಸ್ವಲ್ಪ ಕರ್ಪೂರ ಸೇರಿಸಿ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
24) ನಿಂಬೆ ರಸ ಕೊಬ್ಬರಿ ಎಣ್ಣೆ ಸೇರಿಸಿ ಕೂದಲಿಗೆ ಮಸಾಜ್ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.
25) ಮೊಸರು ನಿಂಬೆರಸ ಸೇರಿಸಿ ಕೂದಲಿಗೆ ಹಚ್ಚುವುದರಿಂದ ಹೊಟ್ಟು ನಿವಾರಣೆ ಆಗುತ್ತದೆ.
26) ಪ್ರತಿದಿನ ಒಂದು ಡ್ರಾಪ್ ನಿಂಬೆ ರಸವನ್ನು ಕಣ್ಣಿಗೆ ಹಾಕುವುದರಿಂದ ಕಣ್ಣಿನ ಪೊರೆ ನಿವಾರಣೆ ಆಗುತ್ತದೆ.
27) ಒಂದು ಕಪ್ಪು ನೀರಿನಲ್ಲಿ ಒಂದು ಒಳ ಮುಷ್ಟಿಯಷ್ಟು ಒಣ ದ್ರಾಕ್ಷಿಯನ್ನು ನೆನೆಸಿ ರಾತ್ರಿ ಮುಚ್ಚಿಡಬೇಕು. ಬೆಳಿಗ್ಗೆ ಶೌಚಾದಿಗಳನ್ನು ಪೂರೈಸಿ
ನಿಂಬೆರಸದೊಂದಿಗೆ ಜೆಗಿದು ತಿನ್ನುವುದರಿಂದ ಅನೇಕ ಉದರ ರೋಗಗಳು ಗುಣವಾಗುತ್ತದೆ.
28) ಹಾಲಿನ ಕೆನೆ ಮತ್ತು ನಿಂಬೆರಸ ಸೇರಿಸಿ ಚರ್ಮಕ್ಕೆ ದಪ್ಪವಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ವಣ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಚರ್ಮದ ಸುಕ್ಕು ನಿವಾರಣೆ ಆಗುತ್ತದೆ.
29) ಕಾಚು ಮುಂತಾದ ಅನೇಕ ಗಿಡಮೂಲಿಕೆ ಉಪಯೋಗಿಸಿ ನಾನು ತಯಾರಿಸುವ ಔಷಧಿಯನ್ನು ನಿಂಬೆರಸದೊಂದಿಗೆ ತೆಗೆದುಕೊಳ್ಳುವುದರಿಂದ ಬಿಳಿ ಮುಟ್ಟು ಮತ್ತು ಕೆಂಪು ಮುಟ್ಟು ಎರಡು ಗುಣವಾಗುತ್ತದೆ.
ಫೋಟೋ ಕೃಪೆ : google
ವಿಶೇಷ ಸೂಚನೆ :
30) ನಿಂಬೆ ರಸವನ್ನು ಹೆಚ್ಚು ಉಪಯೋಗಿಸುವುದರಿಂದ ಹಲ್ಲಿನ ಸವೆತ ಉಂಟಾಗುತ್ತದೆ.
31) ನಿಂಬೆರಸ ಹೆಚ್ಚು ಉಪಯೋಗಿಸುವುದರಿಂದ ಅಸಿಡಿಟಿ ಉತ್ಪತ್ತಿಯಾಗುತ್ತದೆ.
32) ಸನ್ ಬರ್ನ್ ಆಗುವವರು ಹೆಚ್ಚು ಉಪಯೋಗಿಸುವಂತಿಲ್ಲ.
33) ನಿಂಬೆರಸ ಹೆಚ್ಚು ಉಪಯೋಗಿಸುವುದರಿಂದ ಬಾಯಿ ಹುಣ್ಣು ಆಗಬಹುದು.
34) ನಿಂಬೆ ರಸವನ್ನು ಹೆಚ್ಚು ಉಪಯೋಗಿಸುವುದರಿಂದ ಎದೆ ಉರಿ ಸಾಧ್ಯತೆ ಇದೆ.
35) ನಿಂಬೆರಸ ಹೆಚ್ಚು ಉಪಯೋಗಿಸುವುದರಿಂದ ಮೈಗ್ರೇನ್ ಬರುವ ಸಾಧ್ಯತೆ ಇದೆ.
36) ನಿಂಬೆ ರಸದ ಹೆಚ್ಚು ಉಪಯೋಗದಿಂದ ಮೂತ್ರ ವಿಸರ್ಜನೆ ಹೆಚ್ಚಾಗಬಹುದು ಇದರಿಂದ ದೇಹದ ನೀರಿನ ಪ್ರಮಾಣ ಕಡಿಮೆ ಆಗುವ ( ಡಿ ಹೈಡ್ರೇಶನ್) ಸಾಧ್ಯತೆ ಇರುತ್ತದೆ.
37) ಹುಳಿ ಹೆಚ್ಚು ಉಪಯೋಗಿಸುವುದರಿಂದ ವಾತರೋಗ ಹೆಚ್ಚುತ್ತದೆ.
- ಸುಮನಾ ಮಳಲಗದ್ದೆ