ವಾಟೆ ಹುಳಿಯಲ್ಲಿ ಅನೇಕ ಔಷಧಿ ಗುಣಗಳಿವೆ, ಟೊಮೇಟೊ ವಿನೆಗರ್ ಬಳಕೆಯಿಂದ ಈ ಸಂಪ್ರದಾಯಿಕ ಹುಳಿಗಳು ಅಪರಿಚಿತವಾಗುತ್ತಿದೆ. ಇದರ ಬಗ್ಗೆ ಅರುಣ ಪ್ರಸಾದ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ಟೊಮೇಟೊ ವಿನೆಗರ್ ಬಳಕೆಯಿಂದ ಸಂಪ್ರದಾಯಿಕ ಹುಳಿಗಳು ಅಪರಿಚಿತವಾಗುತ್ತಿದೆ. ಮ೦ಗಗಳ ಕಾಟ ನಿವಾರಿಸಲು ವಾಟೆಮರ ಅರಣ್ಯಗಳಲ್ಲಿ ತೋಟದ ಅಂಚಿನಲ್ಲಿ ಬೆಳೆಸಿದರೆ ಪರಿಹಾರ ಸಿಗಬಹುದಾ?…
ಹುಣುಸೆ ಹಣ್ಣು, ಮಾವಿನ ಹುಳಿ, ಉಪ್ಪಾಗೆ ಹುಳಿ, ಕವಳಿಕಾಯಿ ಹುಳಿ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಹೆಚ್ಚು ಬಳಕೆ ಮಾಡುವ ಸಂಪ್ರದಾಯಿಕ ಹುಳಿಗಳಾಗಿದೆ.
ಕೊಡಗಿನ ಪುನರ್ಪುಳಿ ಹುಳಿ ಅಲ್ಲಿನ ಸ್ಥಳೀಯ ಸಿಗ್ನೇಚರ್ ಪುಡ್ ಪಂದಿ ಕರಿಯಲ್ಲಿ ಬಳಸುವುದರಿಂದ ಅಲ್ಲಿನ ಪುನರ್ಪುಳಿಯ ಸಾಸ್ ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಬಂದಿದೆ. ಸಾಮಾನ್ಯವಾಗಿ ಬಯಲು ಸೀಮೆಯ ಉಷ್ಣ ಪ್ರದೇಶದ ಹುಣಸೇ ಹಣ್ಣು ಹೆಚ್ಚು ಬಳಕೆಗೆ ಸುಲಭವಾಗಿ ದೊರೆಯುವ ಹುಳಿ ಆಗಿದೆ.
ಆದುನಿಕ ಪಾಕ ವಿಧಾನಗಳಲ್ಲಿ ಟೊಮೊಟಾ, ವಿನಿಗರ್ ಬಳಕೆಯಿಂದ ಸಂಪ್ರದಾಯಿಕ ಹುಳಿಗಳ ಬಳಕೆ ತುಂಬಾ ಕಡಿಮೆ ಆಗಿದೆ.
ಮಲೆನಾಡಿನಲ್ಲಿ ಯಥೇಚ್ಛವಾಗಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮಾವಿನಕಾಯಿ ಸಿಪ್ಪೆ ತೆಗೆದು ಉದ್ದದ ಹೋಳುಗಳನ್ನು ಒಣಗಿಸಿ ವರ್ಷ ಪೂರ್ತಿ ಅಡುಗೆಗೆ ಬಳಸುತ್ತಿದ್ದರು ಇದೇ ರೀತಿ ಉಪ್ಪಾಗೆ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಬಳಸುತ್ತಿದ್ದ ಕಾಲ ಈಗ ಇಲ್ಲ. ನಾನು ಪ್ರತಿ ವರ್ಷ ಸ್ವಲ್ಪ ವಾಟೆ ಹುಳಿ ಖರೀದಿಸುತ್ತೇನೆ. ಆದರೆ ವಾಟೆ ಹಣ್ಣಿನ ಮರಗಳು ನಮ್ಮ ಭಾಗದಲ್ಲಿ ಅತಿ ವಿರಳವಾಗಿದೆ. ಕೆಲವೆ ಕೆಲವರ ಮನೆಗಳಲ್ಲಿ ಇದೆ. ಆದರೂ ವೇಗದ ಜೀವನ ಶೈಲಿಯಲ್ಲಿ ವಾಟೆ ಕಾಯಿ ಸ೦ಗ್ರಹಿಸಿ ತೆಳುವಾಗಿ ಹೋಳಿನ ಭಾಗಗಳಾಗಿ ಕತ್ತರಿಸಿ ಅದರ ಬೀಜಗಳನ್ನು ತೆಗೆದು, ಉಪ್ಪಿನ ನೀರಲ್ಲಿ ಮುಳುಗಿಸಿ ಅನೇಕ ದಿನ ಸೂರ್ಯನ ಬಿಸಿಲಲ್ಲಿ ಒಣಗಿಸುವ ವ್ಯವದಾನ ಇರುವುದಿಲ್ಲ ಅಥವಾ ಹೆಚ್ಚು ಮಾನವ ದಿನದ ಶ್ರಮದ ಲೆಖ್ಖದಿಂದ ಇದು ದುಭಾರಿ ಆಗುವುದೂ ಒಂದು ಕಾರಣವಾಗಿರಬಹುದು.
ವಾಟೆ ಹುಳಿಯಲ್ಲಿ ಅನೇಕ ಆರೋಗ್ಯ ಸಂಬಂಧಿ ಔಷಧದ ಗುಣವಿದೆ, ಕಾಳು ಮೆಣಸು ಮತ್ತು ವಾಟೆ ಹುಳಿ ಶೀಥ ಕೆಮ್ಮು ನಿವಾರಕವಾಗಿ ಬಳಸುತ್ತಾರೆ.
ವಾಟೆ ಹುಳಿಗೆ ‘ಮಂಗನ ಹಣ್ಣು’ ಎಂದೇ ಕರೆಯುವ ವಾಡಿಕೆ ಇದೆ ಕಾರಣ ಇದು ಮಂಗಗಳಿಗೆ ಅತ್ಯಂತ ಪ್ರಿಯವಾದ ಹಣ್ಣು, ಅರಣ್ಯ ಇಲಾಖೆ ಮತ್ತು ಕೃಷಿಕರು ಹೆಚ್ಚು ಹೆಚ್ಚು ವಾಟೆ ಮರಗಳನ್ನು ಬೆಳೆಸುವ ಮೂಲಕ ಮ೦ಗಗಳು ಕೃಷಿ ಪಸಲು ಲೂಟಿ ಮಾಡುವುದನ್ನು ತಡೆಯಲು ಸಾದ್ಯವಾ? ಪರಿಣಿತರು ಈ ಬಗ್ಗೆ ಚಿಂತಿಸಬೇಕಾಗಿದೆ.
- ಅರುಣ ಪ್ರಸಾದ್