ಔಷಧೀಯ ಸಸ್ಯಗಳಲ್ಲಿ ಒಂದಾದ ಮಾದಲ ಕಾಯಿಯ ಮಹತ್ವದ ಕುರಿತು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ …
ಮಾಡಲು ಮನೆಯ ಹಿತ್ತಲಿನಲ್ಲಿ ಇರಬಹುದಾದಂತಹ ಒಳ್ಳೆಯ ಔಷಧೀಯ ಸಸ್ಯ. ಇದರ ಬೇರು, ಕಾಂಡ, ಎಲೆ, ಹೂವು, ಬೀಜ, ಕಾಯಿ ಔಷಧೀಯ ಬಳಕೆಯಲ್ಲಿ ಬರುತ್ತದೆ. ರುಚಿಯಲ್ಲಿ ಕಿರು ಕಹಿ ಆದರು ಒಳ್ಳೆಯ ಔಷಧೀಯ ಗುಣ ಹೊಂದಿದೆ. ಕಾಯಿಯು ದೇವಿ ಮಹಾತ್ಮೆಯ ಪೂಜೆಯಲ್ಲಿ ಮತ್ತು ಚಂಡಿಕಾ ಹವನದಲ್ಲಿ ಹವನಕ್ಕೆ ಆಹುತಿಯಾಗಿ ಪೂಜನೀಯ ಸ್ಥಾನ ಪಡೆದಿದೆ. ಕಾಯಿಯ ತಿರುಳಿನಲ್ಲಿ ಎರಡು ವಿಧ ಸಿಹಿ ಮತ್ತು ಹುಳಿ ಅಂಶ ಇರುತ್ತದೆ.
ಅಡಿಗೆಯಲ್ಲಿ ಕಾಯಿಯನ್ನು ಕೋಸುಂಬರಿ ಸಲಾಡ್ ರಾಯತ ಮಾಡಿ ತಿನ್ನಬಹುದಾಗಿದೆ.

ಫೋಟೋ ಕೃಪೆ : logees.
1) ಮಾದಲಕಾಯಿ ಸಿಪ್ಪೆ ತೆಗೆದು ಬೇಯಿಸಿ ಜೀರಿಗೆ ಕಾಳು, ಮೆಣಸು, ಹಿಪ್ಪಲಿ, ಜೇಷ್ಠ ಮಧು ತುಪ್ಪ ಸೇರಿಸಿ ಮಾಡಿದ ಲೇಹ್ಯ ಬಾಣಂತಿಗೆ ತುಂಬಾ ಒಳ್ಳೆಯದು.
2) ಕಾಯಿಗೆ ಉಪ್ಪು ಖಾರ ಹಾಕಿ ತಿನ್ನುವುದರಿಂದ ನಂಜು ನಿವಾರಣೆ ಆಗುತ್ತದೆ.
3) ಬೇರನ್ನು ಕಿತ್ತು ಶುದ್ಧೀಕರಿಸಿ ನಿಂಬೆರಸದಲ್ಲಿ ತೈದು ತೆಗೆದುಕೊಳ್ಳುವುದರಿಂದ ವಾಂತಿ, ಭೇದಿ ಅಥವಾ ಕಾಲರ ಗುಣವಾಗುತ್ತದೆ.
4) ಬೇರನ್ನು ನಿಂಬೆರಸದಲ್ಲಿ ತೈದು ಹಚ್ಚುವುದರಿಂದ ತದ್ದು ಗುಣವಾಗುತ್ತದೆ.
5) ಎಲೆ ನೆನೆ ಹಾಕಿ ಚೆನ್ನಾಗಿ ಕೀವುಚಿ, ಸ್ವಲ್ಪ ಉಪ್ಪು ನಿಂಬೆರಸ ಹಾಕಿ ಕುಡಿಯುವುದರಿಂದ ಅತಿಯಾದ ಬಾಯಾರಿಕೆ ವಾಕರಿಕೆ ನಿಲ್ಲುತ್ತದೆ.
6) ಬೀಜ ಹೆಣ್ಣು ಮಕ್ಕಳ ಬಂಜೆತನ ನಿವಾರಣೆಗೆ ಔಷಧಿ ತಯಾರಿಸಲು ಉಪಯುಕ್ತವಾಗಿದೆ.
- ಸುಮನಾ ಮಳಲಗದ್ದೆ – ನಾಟಿವೈದ್ಯರು : 9980182883.
