ಮಹೇಶ್ವರಿ ಕುಂಡ

ಮಹೇಶ್ವರಿ ಕುಂಡವು ಅದರ ಸ್ಫಟಿಕದಷ್ಟು ಸ್ವಚ್ಛವಾದ ನೀರಿನಿಂದ ಮತ್ತು ಸುಂದರವಾದ ಸುತ್ತಮುತ್ತಲಿನ ಪ್ರದೇಶದಿಂದ ಪ್ರಕೃತಿ ಪ್ರಿಯರಿಗೆ ಸುಂದರ ತಾಣವಾಗಿದೆ. ಮಹೇಶ್ವರಿ ಕುಂಡ್ ಕುರಿತು ವಸಂತ ಗಣೇಶ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಮಹೇಶ್ವರಿ ಕುಂಡ್ ಎಂದು ಕರೆಯಲ್ಪಡುವ ಈ ಕುಂಡವನ್ನು ಸ್ಥಳೀಯರು ಮೆಹಸ್ರ್ ಕುಂಡ್, ಮೆಸ್ಸರ್ ಕುಂಡ್ ಅಥವಾ ಮೆಶರ್ ಕುಂಡ್ ಎಂದೂ ಸಹ ಕರೆಯುತ್ತಾರೆ. ಇದು ಭಾರತದ ಉತ್ತರಾಖಂಡ್‌ನ ಪಿಥೋರಗಢ ಜಿಲ್ಲೆಯ ಮುನ್ಸಿಯಾರಿಯ ಸಮೀಪದಲ್ಲಿದೆ.

ಈ ಪ್ರಶಾಂತ ಸರೋವರದ ಹಿಂದೆ ಒಂದು ದಂತಕಥೆಯೂ ಇದೆ. ಸ್ಥಳೀಯರು ಹೇಳುವ ಪ್ರಕಾರ ಈ ಕುಂಡದಲ್ಲಿ ಯಕ್ಷರು, ಕಿನ್ನರ ಕಿಂಪುರುಷರು ಇಲ್ಲಿನ ಪ್ರಶಾಂತ ನೀರಿನಲ್ಲಿ ವಾಸಿಸುತ್ತಿದ್ದರು. ಯಕ್ಷನು ಯಾವುದೋ ಕಾರಣಕ್ಕಾಗಿ ಕುಂಡವನ್ನು ಶಪಿಸಿದನೆಂದು ಕಥೆಯು ಹೇಳುತ್ತದೆ.

ಫೋಟೋ ಕೃಪೆ :google

ಮಹೇಶ್ವರಿ ಕುಂಡವು ಅದರ ಸ್ಫಟಿಕದಷ್ಟು ಸ್ವಚ್ಛವಾದ ನೀರಿನಿಂದ ಮತ್ತು ಸುಂದರವಾದ ಸುತ್ತಮುತ್ತಲಿನ ಪ್ರದೇಶದಿಂದ ಪ್ರಕೃತಿ ಪ್ರಿಯರಿಗೆ ಸುಂದರ ತಾಣವಾಗಿದೆ. ಪ್ರವಾಸಿಗರಿಗೆ ಇಲ್ಲಿನ ಶಾಂತತೆ ಮತ್ತು ಸೌಂದರ್ಯ ಮೈ ಮನಗಳಿಗೆ ಚೈತನ್ಯ ನೀಡುವಂತಿದೆ. ಮೆಹಸ್ರ್ ಕುಂಡದ ಸುತ್ತಮುತ್ತಲಿನ ಪ್ರದೇಶವು ರಮಣೀಯವಾಗಿದ್ದು, ಇಲ್ಲಿನ ಬೆಟ್ಟಗಳು ಮತ್ತು ಕಾಡುಗಳು ಟ್ರೆಕ್ಕಿಂಗ್ ಮಾಡುವವರಿಗೆ ಹಾಗೂ ಸಾಹಸಿಗರನ್ನು ಕೈ ಬೀಸಿ ಕರೆಯುವಂತಿವೆ.

ಹಾಗೆಯೇ ಇಲ್ಲಿನ ಶಾಂತಿಯುತ ವಾತಾವರಣವು ಪ್ರವಾಸಕ್ಕೂ, ನೈಸರ್ಗಿಕ ಸೌಂದರ್ಯ ಛಾಯಾಗ್ರಹಕರಿಗೂ ಪ್ರಿಯವಾದ ತಾಣವನ್ನಾಗಿ ಮಾಡಿದೆ ಮತ್ತು ಪೌರಾಣಿಕ ಪ್ರಾಮುಖ್ಯತೆ ಹೊಂದಿರುವ ಮೆಹಸ್ರ್ ಕುಂಡ್ ಛಾಯಾಗ್ರಹಣ ಉತ್ಸಾಹಿಗಳಿಗೆ ಭೂದೃಶ್ಯ ಮತ್ತು ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ.

ಫೋಟೋ ಕೃಪೆ : google

ಸುತ್ತ ಮುತ್ತಲೂ ನಿಸರ್ಗದ ಶಾಂತಿಯುತ ವಾತಾವರಣ, ಮೇಲೆ ನಕ್ಷತ್ರಗಳಿಂದ ತುಂಬಿದ ಆಕಾಶವನ್ನು ಕಣ್ ತುಂಬಿಕೊಳ್ಳುತ್ತಾ ಒಂದೆರಡು ದಿನಗಳು ಕ್ಯಾಂಪಿಂಗ್ ಮಾಡಲೂ ಕೂಡಾ ಆತ್ಯುತ್ತಮ ಆಯ್ಕೆಯಾಗಿದ್ದು, ಜೀವನದಲ್ಲಿ ಆಗಾಗ ಸ್ಮರಿಸಿಕೊಳ್ಳುವ ಅನುಭವ ಪಡೆಯಲು ಸಹ ಈ ಸ್ಥಳ ಪ್ರಶಸ್ತವಾಗಿದೆ. ಸ್ಥಳೀಯರೊಂದಿಗೆ ಸಂವಹನ ನಡೆಸುವ ಮೂಲಕ ಈ ಸರೋವರಕ್ಕೆ ಸಂಬಂಧಿಸಿದ ಹಿಂದೂ ದಂತಕಥೆಯನ್ನು, ಹಾಗೆಯೇ ಆಸಕ್ತಿ ಇರುವ ಪ್ರವಾಸಿಗರು, ಅಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು. ಸಮೀಪದ ದೇವಾಲಯಗಳಿಗೆ ಭೇಟಿ ನೀಡಬಹುದು.

ಹಿಂದಿನ ಸಂಚಿಕೆಗಳು :


  • ವಸಂತ ಗಣೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading