ಮಾವಿನಕಾಯಿ ಉಪ್ಪಿನಕಾಯಿ, ಲಿಂಬೆ ಉಪ್ಪಿನಕಾಯಿ, ಅಮಟೆಕಾಯಿ ಹೀಗೆ ನಾನಾ ರೀತಿ ಉಪ್ಪಿನಕಾಯಿಗಳನ್ನು ನೀವು ತಿಂದರೆ ಬಹುದು. ಆದರೆ ಮಾಕಲಿ ಬೇರಿನ ಉಪ್ಪಿನಕಾಯಿಯನ್ನು ತಿಂದಿಲ್ಲ ಎಂದರೆ ಮನೆಯಲ್ಲಿಯೇ ಎಚ್ ವಿ ಮೀನಾ ಅವರು ಹೇಳಿಕೊಟ್ಟ ರೀತಿಯಲ್ಲಿ ಮಾಡಿ ತಿನ್ನಿ…

ಬೇಕಾಗುವ ಸಾಮಗ್ರಿಗಳು:
- ಮಾಕಲಿ ಬೇರು (ಕೆಲವರು ಮಾಗಳಿ ಬೇರು ಎನ್ನುವುದುoಟು) -2
- ಮಾವಿನ ಶುಂಠಿ (ಶುಂಠಿ ಮಾವು ಎಂದು ಹೇಳುತ್ತಾರೆ )- 7-8
- ಹುಣಿಸೇ ಕಾಯಿ – 2
- ಹಸಿಮೆಣಸಿನಕಾಯಿ -2 (ಬೇಕು ಎನಿಸಿದರೆ )
- ಉಪ್ಪು
- ಕೆಂಪು ಮೆಣಸಿನಕಾಯಿ -10 ( ಬ್ಯಾಡಗಿ + ಗುಂಟೂರು )
- ಮೆಂತ್ಯ ಕಾಳು – 1/4 ಚಮಚ
- ಸಾಸಿವೆ – 1/4 ಚಮಚ



ಮೆಂತ್ಯ, ಮೆಣಸಿನಕಾಯಿ ಸ್ವಲ್ಪ ಹುರಿದು, ಸಾಸಿವೆ ಜೊತೆ ನುಣ್ಣಗೆ ಪುಡಿ ಮಾಡಿ.) ಕೊನೆಯದಾಗಿ ಸಾಸಿವೆ, ಅರಿಶಿನ, ಇಂಗು ವಗ್ಗರಣೆ ಹಾಕಿ. ಹುಣಿಸೇಕಾಯಿ ಹಾಗೂ ಖಾರದ ಪುಡಿ ಬೇಡ ಎನ್ನುವವರು 5-6 ನಿಂಬೆ ಹಣ್ಣಿನ ರಸ ಹಿಂಡಿ ಒಂದೆರಡು ದಿನಗಳ ನಂತರ ಒಗ್ಗರಣೆ ಹಾಕಿ ಉಪಯೋಗಿಸಿ. ಇದನ್ನು 8 ದಿನಗಳ ಕಾಲ ಹೊರಗೆ ಇಟ್ಟರೆ ಕೆಡುವುದಿಲ್ಲ. ನಂತರ ಫ್ರಿಡ್ಜ್ ನಲ್ಲಿ ಇಡಬೇಕಾಗುತ್ತದೆ.
- ಎಚ್ ವಿ ಮೀನಾ – ಕವನಗಳು, ಕವಿತೆಗಳು, ಸಾಹಿತ್ಯ,
