ಕಹಿಯಾದ ನೆನಪುಗಳಿಂದ ಬಹುದೂರ ಸಾಗೋಣ….ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ನಿಜಗುಣಿ ಎಸ್ ಕೆಂಗನಾಳ ಅವರ ಒಂದು ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಎಳ್ಳು ಬೆಲ್ಲವ ತಿಂದು
ಮಾತಾಡೋಣ ಮಕರ
ಸಂಕ್ರಾಂತಿ ಹಬ್ಬವನು
ಸಡಗರ ಸಂಭ್ರಮದಿಂದ
ಆಚರಣೆ ಮಾಡೋಣ..!!
ಕಹಿಯಾದ ನೆನಪುಗಳಿಂದ
ಬಹುದೂರ ಸಾಗೋಣ
ಸಿಹಿಯಾದ ನೆನಪುಗಳನ್ನ
ಹತ್ತಿರ ಬರಮಾಡಿ ಕೊಳ್ಳೋಣ..!!
ನೋವಿನಲ್ಲೆ ನಲಿವಿನ ಗೂಡನ್ನು
ಕಟ್ಟಿ, ಕಹಿಯಾದ ನೆನಪುಗಳಿಗೆ
ಸಿಹಿಯಾದ ಕನಸುಗಳ
ಮಾಹಪುರದ ಅಭಿಷೇಕವನ್ನ
ಮಾಡೋಣ..!!
ಈ ಮಕರ ಸಂಕ್ರಾಂತಿ ಮನೆ
ಮನಗಳನ್ನು ಬೆಳಗುವುದರ
ಜೊತೆಗೆ ನಮ್ಮೆಲ್ಲರ ಬದುಕಿನ
ಪ್ರತಿ ಹೆಜ್ಜೆಗೂ ಸಡಗರ ಸಂಭ್ರಮವ ತರಲೆಂದು ನಾವೆಲ್ಲ
ಒಂದಾಗಿ ಸೇರಿ ಈ ಸಂಕ್ರಾಂತಿಯನ್ನ ಆಚರಣೆ ಮಾಡೋಣ….!!
- ನಿಜಗುಣಿ ಎಸ್ ಕೆಂಗನಾಳ – ಸಾಹಿತಿಗಳು ರಂಗಭೂಮಿ, ಕಲಾವಿದರು, ಕಲಬುರಗಿ
