ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರು ೧೯೮೯ ರಲ್ಲಿ ಡೆನ್‍ಮಾರ್ಕ್‍ನಲ್ಲಿ ನಡೆದ world masters games ನಲ್ಲಿ ೨೦೦ ಮೀ ವೀಲ್‍ಚೇರ್ ಓಟದ ಸ್ಫರ್ಧೆ, ಶಾಟ್ ಪುಟ್, ಜ್ಯಾವಲಿನ್ ಥ್ರೋಗಳಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಮಾಲತಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು ಅವರ ಸಾಧನೆಯ ಕುರಿತು ಒಂದು ಲೇಖನ…
“ನಾನು ಸಣ್ಣವಳು ಇದ್ದಾಗ ಸ್ಕೂಲ್ ನ ಹಿಂದೆ ಇದ್ದ ಮಾವಿನ ಮರದ ಹತ್ತಿರ ಎಲ್ಲರಿಗಿಂತ ಮೊದಲು ಓಡಿ ಹೋಗಿ ಅಲ್ಲಿ ಬಿದ್ದಿರುವ ಮಾವಿನ ಹಣ್ಣುನ್ನು ಆರಿಸಿಕೊಳ್ಳಲು ಬಯಸುತ್ತಿದ್ದೆ. ನಾನು ಹಕ್ಕಿಯ ತರಹ ಊರಿಂದ ಊರಿಗೆ ಹಾರಿಕೊಂಡು ಹೋಗ ಬಯಸಿದ್ದೆ. ನಾನು ಬೆಳದಂತೆ ನನಗೆ ಗೊತ್ತಾಯಿತು ಓಡಲು ಕಾಲು ಬೇಕು, ಹಾರಲು ರೆಕ್ಕೆ ಬೇಕು. ನನಗೆ ಕಾಲು ಇಲ್ಲ, ರೆಕ್ಕೆಗಳು ಇಲ್ಲ. ಇದು ನನಗೆ ಬಹಳ ಬೇಸರ ಮಾಡಿತು. ಆದರೆ ನಾನು ಕೈ ಚೆಲ್ಲಿ ಕುಳಿತು ಕೊಳ್ಳಲಿಲ್ಲ. ಬೇರೆ ಎನಾದರೂ ಮಾಡಲೇಬೇಕು ಎಂದು ಛಲದಿಂದ ಹೊಸ ಕೆಲಸವೊಂದನ್ನು ಮಾಡಲು ಹೊರಟೆ. ನಾನು ಈ ದಿನ ಅನೇಕ ಸಾಧನೆಗಳನ್ನು ಮಾಡಲು ಆ ಛಲದಿಂದ ಮಾತ್ರ ಸಾಧ್ಯವಾಯಿತು. ….” ಈ ಮಾತುಗಳನ್ನು ತಮ್ಮ ಜೀವನ ಚರಿತ್ರೆಯಲ್ಲಿ ಬರೆದಿರುವವರು ಶ್ರೀಮತಿ #ಮಾಲತಿ_ಕೃಷ್ಣಮೂರ್ತಿ_ಹೊಳ್ಳ ರವರು.
ಮಾಲತಿ ಅವರು ಹುಟ್ಟಿದ್ದು ಜುಲೈ ೬, ೧೯೫೮ರ ಬೆಂಗಳೂರಿನಲ್ಲಿ. ಅವರಿಗೆ ಪೋಲಿಯೋ ಆಕ್ರಮಿಸಿದ ನಂತರದಲ್ಲಿ ಅವರು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಹದಿನೈದು ವರ್ಷಗಳ ಕಾಲ ಚನ್ನೈನಲ್ಲಿ ಮೂಳೆ ಚಿಕಿತ್ಸಾಲಯಗಳಿಗೆ ಅಲೆದಿದ್ದಾರೆ. ೩೨ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ.
ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಮಾಲತಿ ಕೃಷ್ಣಮೂರ್ತಿ ಹೊಳ್ಳರವರು ಆರನೇಯ ಹುಟ್ಟಿದರು. ತಂದೆ ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ನಾಲ್ಕು ಮಕ್ಕಳು ಮನೆಯಲ್ಲಿ. ಒಂದು ವರ್ಷ ಇರುವಾಗ ಇವರಿಗೆ ಬಂದ ಜ್ವರ ಇವರನ್ನು ಸಂಪೂರ್ಣವಾಗಿ paralyzed ಮಾಡಿತು. ಮುಂದಿನ ಎರಡು ವರ್ಷಗಳ ಕಾಲ ಅವರು electric shock treatment ತೆಗೆದುಕೊಂಡರು. ಆಗ ಅವರ ದೇಹದ ಮೇಲು ಭಾಗಕ್ಕೆ ಶಕ್ತಿ ಬಂದಿತು.
ಈ ಮಗುವೇ ಮುಂದೆ ೪೨೮ ಬಹುಮಾನಗಳನ್ನು ವಿವಿಧ ಆಟಗಳಲ್ಲಿ ಗೆದ್ದಿದ್ದಾರೆ. ಇವರು ದಕ್ಷಿಣ ಕೊರಿಯಾ, ಬರ್ಸಿಲೋನಾ, ಅಥೆನ್ಸ್, ಬೀಜಿಂಗ್ ದಲ್ಲಿ ವಿಶೇಷ ಚೇತನರಿಗಾಗಿ ನಡೆಸುವ ಪ್ಯಾರ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ. ಇದೇ ತರಹ ಇವರು ಬೀಜಿಂಗ್, ಬ್ಯಾಂಕಾಕ್, ದಕ್ಷಿಣ ಕೊರಿಯಾ, ಕೌಲಾಂಪೂರ್ ಏಷ್ಯನ್ ಕ್ರೀಡಾಕೂಟದಲ್ಲಿ, ಡೆನ್ಮಾರ್ಕ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಮಾಸ್ಟರ್ ಸ್ಪರ್ಧೆಯಲ್ಲಿ, ಹೀಗೆ ಬಹುತೇಕ ಎಲ್ಲ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿ ಎಲ್ಲಾದರಲ್ಲು ಬಹುಮಾನಗಳನ್ನು ಪಡೆದಿದ್ದಾರೆ. ಡಾ. ರಾಜ್‍ಕುಮಾರ್ ರೊಂದಿಗೆ ಕಾಮನಬಿಲ್ಲು ಚಲನಚಿತ್ರದಲ್ಲಿ ನಟಿಸಿದ್ದು ಮಾಲತಿಯವರ ಹೆಗ್ಗಳಿಕೆ.
ಸಿಂಡಿಕೇಟ್ ಬ್ಯಾಂಕ್ ನ ಮ್ಯಾನೇಜರ್ ಆಗಿ ಕೆಲಸ ಮಾಡುವ ಇವರು #ಮಾತೃ_ದತ್ತಿ_ಸಂಸ್ಥೆ ಸ್ಥಾಪಿಸಿ ಅವರ ಸ್ನೇಹಿತರ ಜೊತೆಗೂಡಿ ೧೬ ಜನ ವಿವಿಧ ರೀತಿಯ ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.
ಯಾವುದೇ ತರಹದ ತೊಂದರೆಗಳು ಸಾಧನೆಯ ಹಾದಿಯಲ್ಲಿ ಅಡ್ಡಿ ಬರುವುದಿಲ್ಲ ಎಂದು ತೋರಿಸಿಕೊಟ್ಟಿರುವ ಶ್ರೀಮತಿ ಮಾಲತಿ ಕೃಷ್ಣಮೂರ್ತಿ ಹೊಳ್ಳ ರವರು. ಈ ಸಮಾಜದಲ್ಲಿರುವ ಅಸಮಾನತೆಗಳ ಅಟ್ಟಹಾಸದ ಕಾರಣದಿಂದಾಗಿ ಅಂಗವಿಕಲರು ಬಹಳ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿಯನ್ನು ಹೇಳುವ ಮಾಲತಿ ಹೊಳ್ಳ ಅವರು “ನಮಗೆ ಬೇಕಿರುವುದು ಈ ಸಮಾಜದ ಕರುಣೆ ಅಲ್ಲ, ನಾವೂ ಸಾಧಿಸಬಲ್ಲೆವು ಎಂದು ಸಿದ್ಧಪಡಿಸಿ ತೋರಿಸುವುದಕ್ಕೆ ಬೇಕಾದ ಸಹಾನುಭೂತಿ ಮಾತ್ರ” ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತಾರೆ..
೧೯೯೯ ರಲ್ಲಿ ಅಮೆರಿಕಾದ ಅಮೆರಿಕನ್ ಬಯಾಗ್ರಾಫಿಕಲ್ ಸಂಸ್ಥೆ,ವರ್ಷದ ಮಹಿಳೆ ಎಂದು ನೀಡಿ ಗೌರವಿಸಿದೆ. ೨೦೦೧ ರಲ್ಲಿ ಪಡೆದ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರು ಈ ಪ್ರಶಸ್ತಿ ಪಡೆದ ಪ್ರಪ್ರಥಮ ವಿಕಲಚೇತನ ಮಹಿಳೆ.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
