ಕಣ್ಣಿಗೆ ಕಾಣದ ವೈರಸ್ ಮುಂದೆ ಹಣ ಶೂನ್ಯ



ಮನುಷ್ಯನಲ್ಲಿ ಹಣ ಅಂತಸ್ತು ಎಲ್ಲವು ಇದ್ದರೂ ಉತ್ತಮ ಆರೋಗ್ಯವಿರದಿದ್ದರೆ, ಏನು ಪ್ರಯೋಜನ, ಕಣ್ಣಿಗೆ ಕಾಣದ ವೈರಸ್ ಮನುಷ್ಯನನ್ನು ಹೇಗೆ ಭಯದಲ್ಲಿ ಕೂರಿಸಿದೆ ಎನ್ನುವುದಕ್ಕೆ ಕೊರೋನಾವೇ ಸಾಕ್ಷಿ.ಅಹಂನ್ನು ಬಿಟ್ಟು ಬಾಳಿ ಎನ್ನುತ್ತಾರೆ ಪ್ರೊ ರೂಪೇಶ್ ಪುತ್ತೂರು ಅವರು.

“ಎಲ್ಲಾ ಕಣ್ಣಿಗೆ ಕಾಣುವ ರಾಜ್ಯವನ್ನು – ಸಾಮ್ರಾಜ್ಯವನ್ನು ನಾನು ವಶಪಡಿಸಿದೆ, ಚಿನ್ನ-ಮುತ್ತು- ರತ್ನ….. ಸಂಪತ್ತನಿಂದ ಖಜಾನೆ ತುಂಬಿಸಿದೆ….. ಆದರೆ ಕಣ್ಣಿಗೆ ಕಾಣದ ದೇಹದೊಳಗಿನ ಈ ರೋಗವನ್ನು ಕಾಣಲು ಸಾಧ್ಯವಾಗಲಿಲ್ಲ. ಆ ರೋಗದೊಂದಿಗೆ ಹೋರಾಡಿ ಜಯಿಸಲು ಆಗುತ್ತಿಲ್ಲ. ನಾನು ಆ ಕಣ್ಣಿಗೆ ಕಾಣದ ರೋಗದ ಮುಂದೆ – ನಿನ್ನ ಮುಂದೆ ಸೋತು ಅಡಿಯಾಳಾಗಿರುವೆ. ನನ್ನ ತಾಯಿ ಬಂದು ನನ್ನ ನೋಡಿ ಹೋಗುವವರೆಗೂ ನನ್ನ ಜೀವಂತವಾಗಿಡು- ಎಂದು ಕೇಳಿಕೊಳ್ಳಬೇಕೆಂದಿದ್ದೀನಿ” ಎಂದು ಜಗತ್ತಿನ ಅತ್ಯಂತ ಸುಂದರವಾದ ಆಡಂಬರದ ಅರಮನೆಯೊಳಗೆ ತನ್ನ ಕೊನೆಯ ದಿನಗಣನೆಯಲ್ಲಿ, ಪ್ರಪಂಚದ ಅತ್ಯಂತ ದುಬಾರಿ ಮಂಚದ ಮೇಲೆ ಮಲಗಿಕೊಂಡು, ಹೇಳಿದ #ಅಲೆಕ್ಸಾಂಡರ್ ಚಕ್ರವರ್ತಿ.

ಲೋಕದಲ್ಲಿ ತಾನೇ ದೊಡ್ಡವನೆಂದು ಅಹಂಕಾರಿಸಿದ #ನೆಪೋಲಿಯನ್ ಬೋನಪಾರ್ಟ್ ಎಂಬ ಪ್ರಚಂಡನ ಎತ್ತರ ಐದು ಅಡಿ ಐದು ಇಂಚು. ಸುಮಾರು ಆರುವರೆ ಅಡಿ ಎತ್ತರದ ತನ್ನ ಅಂಗರಕ್ಷಕರು ತನ್ನ ಸುತ್ತ ನಿಂತಾಗ, ತಾನು ಯಾರಿಗೂ ಕಾಣುತ್ತಿಲ್ಲವಲ್ಲವೆಂದು ಅವನು ಮರುಗಿ ಅಸ್ವಸ್ಥನಾಗುತ್ತಿದ್ದನಂತೆ. ಒಂದ್ಸಲ ಅವನ ಸದಸ್ಸಿಗೆ ಒಬ್ಬ ವರ್ಣ ಚಿತ್ರಕಾರ ಬಂದು ನೆಪೋಲಿಯನನ ಅದ್ಭುತ ಛಾಯಾಚಿತ್ರ ಉಡುಗೊರೆಯಾಗಿ ಕೊಟ್ಟ. ಆ ಕೂಡಲೇ ಗೋಡೆಯಲ್ಲಿ ಅತ್ಯಂತ ಎತ್ತರದಲ್ಲಿನ ಆಣಿ/ಮೊಳೆ ಯ ಕಡೆ ನೆಪೋಲಿಯನನ ಕಣ್ಣು ಓಡಿತು. ಆ ಎತ್ತರದಲ್ಲಿ ಅದು ಸಿಕ್ಕಿಸಬೇಕು ಎಂದು ಮನಸ್ಸಿನೊಳಗೆ ಹೇಳುತ್ತಿದ್ದಂತೆಯೇ, ಇದನ್ನು ಮನಗೊಂಡ ಒಬ್ಬ ಅಂಗರಕ್ಷಕ.



” ದೊರೆಯೇ…ಆ ಛಾಯಾಚಿತ್ರ ನನ್ನ ಕೈಗೆ ಕೊಡಿ, ನಾನು ನಿಮಗಿಂತ ಎತ್ತರವಿದ್ದೇನಲ್ಲಾ, ನಾನು ಆ ಛಾಯಾಚಿತ್ರ ಅಲ್ಲಿ ಆ ಮೊಳೆಗೆ ತೂಗಿಸುತ್ತೇನೆ” ಎಂದಾಗ, ಆ ವರ್ಣ ಚಿತ್ರಕಾರನನ್ನೂ, ಆ ಛಾಯಾಚಿತ್ರವನ್ನೂ, ಸಭೆ- ಸದಸ್ಸನ್ನು ಮರೆತು ಕ್ರೋದಿತನಾಗಿ “ಬಾಯಿ ಮುಚ್ಚು (Shut up) ನೀನು ಎತ್ತರದಲ್ಲಿ ದೊಡ್ಡವನಾಗಿರಬಹುದು , ಆದರೆ ನೀನೆಂದೂ ನನಗಿಂತ ದೊಡ್ಡವನಲ್ಲ…. ” ನೆಪೋಲಿಯನ್ ಆಕ್ರೋಷಿಸುತ್ತಾನೆ.

ಈವಾಗ ಅಲೆಕ್ಸಾಂಡರ್ ನಮ್ಮಂತೆ , ನೆಪೋಲಿಯನ್ ಕೊರೋನಾ ವೈರಸ್ ತರಹ ನಿಮಗೆ ಬಾಸವಾಗಿರಬಹುದು. ನೇರವಾಗಿ ಕಾಣಲು ಅಸಾಧ್ಯವಾದ, ಒಂದು ಚಿಕ್ಕ ಅತಿ ಸೂಕ್ಷ್ಮ ವೈರಸ್ಸು , ಯಾರ ಕೈಗೂ ಸಿಗದೆ, ನಮ್ಮನ್ನೆಲ್ಲಾ ಪರಿಹಸಿಸಿ, ಎಲ್ಲೋ ನಗುನಗುತ್ತಾ ಅಟ್ಟಹಾಸಿಸುವ ಕೋರೋನಾ ವೈರಸ್!!!! ನಿಶ್ಶಬ್ದವಾಗಿ ನಮ್ಮಂತಹಾ ಮನುಷ್ಯನಿಗೆ ಹೇಳುವುದು -ಸ್ವಯಂ ನೀವೇ ನಿಮಗೆ ಪ್ರಶ್ನೆ ಮಾಡಿ ಯಾರು ದೊಡ್ಡವನೆಂದು!!! ಎಂದಾಗಿರಬಹುದಲ್ಲವೇ?

ತನ್ನನ್ನು ತಾನು ಬುದ್ದಿವಂತನೆನ್ನುವ ಮನುಜನಿಗೆ ಈ ಕೋರೋನಾ ವೈರಸ್ ಮುಂದೆ ಎದೆ ತಟ್ಟಿ, ಜೋರಾಗಿ , ಅಕ್ರೋಷಿಸಲು ಒಂದು ದಿನ ಬರಬಹುದೇ?  ಬರುತ್ತದೆ….. ಕಾಲ ಉತ್ತರಿಸುತ್ತದೆ.

ನಿಮ್ಮವ ನಲ್ಲ
*ರೂಪು*


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW