ಪ್ರಕೃತಿ ಸೌಂದರ್ಯಕ್ಕೆ ಮನಸೋತು ಹೀಗೊಂದು ಮನದ ಮಾತು… ಮನಸು ವಿಕಸನವಾಗಬೇಕು ವಿಕಾರವಾಗಬಾರದು. ಮನವೆಂಬ ಮರ್ಕಟದ ಜೊತೆ ಮನವೆಂಬ ಮತ್ಸರ ಎಂದೂ ಸೇರಿಸಬಹುದೇನೋ…ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಮನುಷ್ಯನ ಗುಣ ಅವರು ಕಲಿತ ವಿದ್ಯೆಯಿಂದ ಬರುವುದಿಲ್ಲ. ಓದು ಜ್ಞಾನಕ್ಕೆ, ವಿದ್ಯೆ ವಿನಯಕ್ಕೆ ದಾರಿ ಅಂತಾರೆ, ಕೆಲವೊಮ್ಮೆ ಮತ್ಸರದ ಗುಣ ಈ ವಿನಯ ವಿದ್ಯೆಯನ್ನೆಲ್ಲ ಮುಚ್ಚಿಬಿಡುತ್ತದೆ. ಸೌಂದರ್ಯ ಸವಿಯಲೂ ಸವಿ ಮನಸಿರಬೇಕು. ಪ್ರಕೃತಿದತ್ತ ಸೌಂದರ್ಯ ಯಾರ ಸ್ವತ್ತೂ ಅಲ್ಲ ಮತ್ಸರದ ವಸ್ತುವೂ ಅಲ್ಲ.
“Beauty is not caused, It is” ಅಂತಾರಲ್ಲ ಹಾಗೆ ಸೌಂದರ್ಯವು. ಈ ವಿಶ್ವವು ಸೌಂದರ್ಯಗಳನ್ನೊಳಗೊಂಡಿದೆ. ಪ್ರಕೃತಿ ತನ್ನ ಸೌಂದರ್ಯವನ್ನು ಪ್ರತೀ ಕಣಕಣದಲ್ಲೂ ತುಂಬಿಕೊಂಡಿದೆ we have to accept it. ಸೌಂದರ್ಯ ಬರೀ ನೋಡುವುದರ ವಸ್ತುವಿನಲ್ಲಿ ಮಾತ್ರ ಇರುವುದಿಲ್ಲ, ಇದು ಮಾನವನ ಕಣ್ಣಿನಲ್ಲಿ ಪ್ರತಿಬಿಂಬಿಸುತ್ತದೆ.

ಫೋಟೋ ಕೃಪೆ :google
ಇಲ್ಲಿ ತಮಗೆ ಸಿಗದ ವಸ್ತು ಬೇರೆಯವರಿಗೆ ಸಿಕ್ಕಾಗ ಮತ್ಸರಕ್ಕೆ ಕಾರಣವಾಗಬಹುದು. ಅವರವರ ಭಾವಕೆ ಅವರವರ ಭಕುತಿಗೆ ಮನಸು ಇರುತ್ತದೆ. Not every man is perfect ಹಾಗೆ ಪರಿಮಳ ಬೀರದ ಹೂಗಳು ನೋಡಲು ಚಂದ, ಅಂದವಾಗಿ ಕಾಣುವ ಹೂಗಳು ಕೆಟ್ಟ ಪರಿಮಳ ಬೀರಬಹುದು.
ಕವಿಗಳಿಗೆ ಸೌಂದರ್ಯದ ಬಗ್ಗೆ ಸದಾ ಉತ್ಸಾಹವಿರುತ್ತದೆ. “Edmund Spenser” ಬರೆದಿರುವ “The soveriegn beauty which I do admire” ಪ್ರಪಂಚದ ಸೌಂದರ್ಯ ಹೊಗಳಲು ಎಷ್ಟು ಯೋಗ್ಯವಾಗಿದೆ ಎಂದು ಹೇಳಿದ್ದಾನೆ.
Each individual’s journey has a beautiful destination… ನೋಡುವ ನೋಟ ಸರಿ ಇದ್ದರೆ ಲೋಕದ ಡೊಂಕು ಅಲ್ಲ ತನ್ನ ಡೊಂಕು ಮುಚ್ಚಿಹೋಗುತ್ತದೆ. ಇರುವ ಎರಡು ದಿನದ ಬಾಳು ಬಾಳಬೇಕು, ಬದುಕಲು ಬಿಡಬಿಡಬೇಕು.
ಕೆಲವೊಮ್ಮೆ ಸೌಂದರ್ಯವೇ ಮುಳುವಾಗಬಹುದು. ತಮ್ಮ ಸೌಂದರ್ಯದ ಬಗ್ಗೆ ಬಹಳ ಹೆಮ್ಮೆ ಪಡುವವರು ಅವರ ಅಂದ ಕ್ಷಣಿಕ ಎಂದು ಅರಿವಾಗುವುದಿಲ್ಲ. ಬಾಹ್ಯ ಸೌಂದರ್ಯವಿದ್ದರೇನು, ಆಂತರಿಕ ಸೌಂದರ್ಯ ಇರದಿದ್ದ ಮೇಲೆ.
ಕೆಲವರಿಗೆ ಅವರ ಸೌಂದರ್ಯದ ಮೇಲೆ ಎಷ್ಟು ಅಹಂಕಾರವಿರುತ್ತದೆ ಎಂದರೆ, ಬೇರೇ ಯಾರೂ ತನ್ನಷ್ಟು ರೂಪುವಂತರಲ್ಲ ಎಂದು ಜನರ ಜೊತೆ ಬೆರೆಯುವುದೇ ಕಡಿಮೆ ಮಾಡುತ್ತಾರೆ. ಇದು ಹೆಣ್ಣು ಮಕ್ಕಳಲ್ಲಿ ಮಾತ್ರವಲ್ಲ ಗಂಡುಮಕ್ಕಳಲ್ಲೂ ಈ ಭಾವನೆ ಇರುತ್ತದೆ.

ಕೆಲವರಿಗಂತು ವಿಕೃತ ಮನಸಿರುತ್ತದೆ ನಮ್ಮ ಪರಿಸರದ ಸೌಂದರ್ಯವನ್ನು ಹಾಳು ಮಾಡುವ ಪ್ರವೃತ್ತಿಯವರು. ಗಿಡದಲ್ಲಿ ಒಂದು ಸುಂದರ ಹೂವನ್ನು ಕಂಡರೆ ಅದನ್ನು ಕಿತ್ತು ಮುದುಡಿ ಬಿಸಾಕುವುದು, ಸುಂದರ ಹೂದೋಟದ ಬಳ್ಳಿಯನ್ನು ಹೊಸಕಿ ಹಾಕುವುದು. ಹೀಗೆ ಕೆಲವರಿಗೆ ಸುಂದರ ವಸ್ತುಗಳ ಮೇಲೆ ಒಳ್ಳೆಯ ಭಾವನೆ ಬೆಳೆಸಿಕೊಂಡಿರುವುದೇ ಇಲ್ಲ.
ಯಾವುದೇ ವಸ್ತುವಾಗಲಿ, ಯಾರೇ ವ್ಯಕ್ತಿಯಾಗಲಿ ಸೌಂದರ್ಯಕ್ಕೆ ಬೆಲೆ ಕೊಡಬೇಕು. ತನಗಿಂತ ಚೆನ್ನಾಗಿದಾರೆ ಎಂಬ ಒಂದೇ ಕಾರಣಕ್ಕಾಗಿ ಅವರ ಮೇಲೆ ಅಪವಾದವಾಗಲಿ, ಅಪಪ್ರಚಾರ ಮಾಡುವುದಾಗಲಿ ಮಾಡಿದಾಗ ಸಮಾಜದಲ್ಲಿ ಒಳ್ಳೆಯತನಕ್ಕೆ ಬೆಲೆ ಇರುವುದೇ ಇಲ್ಲ. ಅವರ /ಅದರ ಸೌಂದರ್ಯ ಇದ್ದೇ ಇರುತ್ತದೆ.
ಸುಂದರ ಮನಸುಗಳ ಹೂಗುಚ್ಚವಾಗಬೇಕು ಮನಸೆಂಬ ಸದನ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
