ಎಲ್ಲರ ಬಳಿ ನಮ್ಮ ವೈಯಕ್ತಿಕ ವಿಷಯಗಳನ್ನು ಹೇಳಿದಾಗ ಅವರಿಗೆ ನಮ್ಮನ್ನು ನೋಡಿ ಹಾಸ್ಯ ಎನಿಸಬಹುದು, ಇಲ್ಲವೇ ಆಡಿಕೊಂಡು ಅವಮಾನ ಮಾಡಬಹುದು. ಇದೆಲ್ಲಾ ಮೆಟ್ಟಿ ನಿಲ್ಲಲು ಒಂದು state of mind ಬೇಕು.ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಮನಸು ಎನ್ನುವುದು ಬಹಳ ಆಳವಾದ ನಿಗೂಢ ಜಗತ್ತು’, ತಪ್ಪದೆ ಮುಂದೆ ಓದಿ…
ತನ್ನ ತಾ ಅರಿಯದೆ ಬೇರೆಯವರ ಮನಸನ್ನು ತಿಳಿಯಲು ಅಸಾಧ್ಯ. ಅರಿಯಲು ಆಗದ ಊಹೆಗೂ ನಿಲುಕದ್ದು ಮನಸ್ಸು. ನಾನು ಎನ್ನುವುದನ್ನು ಬೆಳೆಸಿಕೊಂಡಾಗ ಹೊಗಳಿಕೆಗೆ ಮಾತ್ರ ಒಗ್ಗಿ ಹೋಗಿರುತ್ತದೆ ಅಥವಾ ನಾ ಮಾಡಿದ್ದೇ ಸರಿ, ನಾ ಆಡಿದ್ದೆ ಸರಿ ಎಂಬ ಭ್ರಮೆಯಲ್ಲಿ ಬದುಕಿರುತ್ತಾರೆ. ಇದಕ್ಕೆ ನಾರ್ಸಿಸಿಸ್ಟಿಕ್ ಮನೋಭಾವ ಎನ್ನುತ್ತಾರೆ. ಅವರು ನಾನು ಎಲ್ಲರಿಗಿಂತ ಉತ್ತಮ ಎಂದು ತಿಳಿದಿರುತ್ತಾರೆ. ಸದಾ self centered ಆಗಿರಬೇಕೆಂದು ಬಯಸುತ್ತಾರೆ. ಮರಕ್ಕಿಂತ ಮರ ದೊಡ್ಡದು ಎಂಬುದನ್ನು ಅರಿತು ಬಾಳುವುದು ದೊಡ್ಡತನ.
ಮನಸಿನಲ್ಲಿ ಅಸೂಯೆ ಭಾವ ಇದ್ದರೆ ಅದು ಅವರ ಜೊತೆಯಲ್ಲಿಯೇ ಇದ್ದುಕೊಂಡು ತನ್ನನ್ನೇ ನಾಶ ಮಾಡುತ್ತದೆ ಎಂದು ಅರಿತುಕೊಳ್ಳದೆ ಮನಸೋ ಇಚ್ಛೆ ಹೀಯಾಳಿಸುತ್ತಾರೆ. ಅದರಿಂದ ಕ್ಷಣಿಕ ಸಂತೋಷ ಹೊಂದಬಹುದು. ಆದರೆ ಅವರ ಮನಸಿನ ಹೊಯ್ದಾಟ ಅವರೇ ಅನುಭವಿಸುತ್ತಾರೆ. ಮೈಯಿಗೆ ಆದ ಗಾಯ ಕಣ್ಣಿಗೆ ಕಾಣುವಂಥದ್ದು, ಔಷಧಿ ಹಚ್ಚಿ ವಾಸಿ ಮಾಡಬಹುದು ಆದರೆ ಮನಸಿಗೆ ಆದ ಗಾಯಕ್ಕೆ ಅವರೇ ಹೊಣೆಯಾಗಿರುತ್ತಾರೆ. ಅವರೇ ವಾಸಿ ಮಾಡಿಕೊಳ್ಳಬೇಕು.
ಮನಸ್ಸು ಹಗುರ ಮಾಡಿಕೊಳ್ಳುವುದಕ್ಕೆ ಮತ್ತೊಬ್ಬರ ಹತ್ತಿರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಅವರು ಕೇಳಿಸಿಕೊಂಡು ಅವರ ಅಭಿಪ್ರಾಯ ತಿಳಿಸಬಹುದು. ಇಲ್ಲಾ ಸಮಾಧಾನ ಮಾಡಬಹುದು. ಮೊದಲಿಗೆ ಎಲ್ಲರ ಬಳಿ ನಮ್ಮ ವೈಯಕ್ತಿಕ ವಿಷಯಗಳನ್ನು ಹೇಳಿದಾಗ ಅವರಿಗೆ ನಮ್ಮನ್ನು ನೋಡಿ ಹಾಸ್ಯ ಎನಿಸಬಹುದು, ಇಲ್ಲವೇ ಆಡಿಕೊಂಡು ಅವಮಾನ ಮಾಡಬಹುದು. ಇದೆಲ್ಲಾ ಮೆಟ್ಟಿ ನಿಲ್ಲಲು ಒಂದು state of mind ಬೇಕು. ಅದೇ ನಿರ್ಲಿಪ್ತತೆ. ಚಾಣಕ್ಯನೂ ಸಹ ಇದೇ ಹೇಳಿರುವುದು. ನಮ್ಮ ಕಷ್ಟಗಳನ್ನು ಹಂಚಿಕೊಂಡಾಗ ನಮ್ಮ ದೌರ್ಬಲ್ಯ ಎತ್ತಿ ತೋರಿದಂತಾಗುತ್ತದೆ ಎಂದು.

ನಿರ್ಲಿಪ್ತತೆ ಎಂದರೆ ಎಲ್ಲದರಲ್ಲೂ ವೈರಾಗ್ಯ ಬೆಳೆಸಿಕೊಳ್ಳಬೇಕೆಂದಿಲ್ಲ. ಮಾಡುವ ಕೆಲಸ ಮಾಡಿಯೂ ಮಾಡಿದೆನೆಂದು ತೋರಿಸಿಕೊಳ್ಳದ ಭಾವ. ಎಲ್ಲದನ್ನೂ, ಎಲ್ಲರಲ್ಲೂ ಸಮನಾಗಿ ಕಾಣುವ ಮನೋಭಾವ. ನಮ್ಮ ಅಂತರಂಗದಿ ನೆಮ್ಮದಿ ಕಂಡುಕೊಂಡರೆ ಹೊರಗಿನ ಹೊಗಳಿಕೆ ತೆಗಳಿಕೆಗೆ ಯಾವ ಅರ್ಥವೂ ಇರುವುದಿಲ್ಲ.ಈ ಮನಸಿನ ಸ್ಥಿತಿಗೆ ಬರಲು ಸಾಧನ ಬೇಕು. ಸಾಧಿಸುವವನಿಗೆ ಪ್ರಪಂಚ ಒಂದು ಸಿನಿಮಾ ಥರ ರೀಲ್ ಓಡುತ್ತಿರುತ್ತದೆ ರಿಯಲ್ ಆಗಿ projection ಯಾರದ್ದು ಎಂದು ತಿಳಿದುಕೊಂಡು ಮುಂದೆ ಸಾಗುತ್ತಿರುತ್ತಾನೆ.
ನಿರೀಕ್ಷೆ ಇಟ್ಟುಕೊಂಡು ಏನೇ ಕೆಲಸ ಮಾಡಿದರೂ ನಿರಾಶೆ ಹೊಂದಬೇಕಾಗುತ್ತದೆ. ಅದರಿಂದ ನೋವೇ ಹೆಚ್ಚು. ಯಾರಿಂದಲೋ ಸಂತೋಷ ಬಯಸುವ ಬದಲು ನಾವೇ ಖುಷಿಯಿಂದ ಇದ್ದರೆ ಅದಕ್ಕಿಂತ ನಿಜವಾದ ಸಂತೋಷ ಬೇರೊಂದಿಲ್ಲ. ಅತಿಥಿಗಳು ಬಂದಾಗ ನಾವು ವಿಧ ವಿಧ ಅಡಿಗೆ ಮಾಡಿ ಬಡಿಸುವುದು ನಮ್ಮ ಸಂತೋಷಕ್ಕಾಗಿ ಅವರೇನು ಇಂಥಹುದೇ ಬೇಕೆಂದು ಬಯಸುವುದಿಲ್ಲ. ಅವರು ಕೇಳಿರುವುದೂ ಇಲ್ಲ. ಅವರು ಅತ್ತ ಹೋಗಿ ಇವರನ್ನು ಏನೋ ಕಾರಣಕ್ಕೆ ಮಾತು ಕತೆ ನಡೆಸಿರುವುದಿಲ್ಲ. ಆ ಸಮಯದಲ್ಲಿ ನಮ್ಮನೇಲಿ ಇದ್ದು ತಿಂದುಕೊಂಡು ಹೋದರು, ಇವಾಗ ಒಂದು ಮಾತಿಲ್ಲ ಕತೆಯಿಲ್ಲ ಎಂಬ ಮಾತುಗಳು ಹೇಳುತ್ತಾರೆ. ಇಂತಹ ಮಾತುಗಳು ಆಡುವುದು ತಪ್ಪು. ಮನಸು ಹುಚ್ಚು ಕುದುರೆಯಾಗಬಾರದು. ಅತಿಥಿ ಸತ್ಕಾರ ನಮ್ಮ ಕರ್ತವ್ಯ. ನಿರೀಕ್ಷೆ ಪಡುವುದು ನಮ್ಮದಲ್ಲದ ಸಂಗತಿ.

ಒಂದು ಸಿನಿಮಾ ನೋಡಿದ ಮೇಲೆ ಎಂಥ ಅದ್ಭುತವಾಗಿತ್ತು ಎಂದು ಹೇಳುತ್ತೇವೆ. ಅದೇ ನಮ್ಮ ಜೀವನವನ್ನು ಅದ್ಭುತ ಎಂದೇಕೆ ಅಂದುಕೊಳ್ಳಬಾರದು. ಮನಸ್ಸಿನಲ್ಲಿ ದಿನ ನೋಡಿದ್ದನ್ನೇ ನೋಡುವಾಗ ಹೊಸದನ್ನೇ ನೋಡುತ್ತಿದ್ದೇನೆ ಎಂದುಕೊಳ್ಳಬೇಕು. ಎಲ್ಲಾ ಹೊಸದಾಗಿ ಕಾಣುತ್ತಿರುವಂತೆ ಭಾಸವಾದರೆ ಬದುಕು ಬಹಳ ಸಂತೋಷಮಯವಾಗಿರುತ್ತದೆ. ಹಿಂದಿನ ಕಹಿ ಘಟನೆಗಳನ್ನು ಮನಸ್ಸಿನಿಂದ ಕಿತ್ತುಹಾಕಬೇಕು. ನಮ್ಮ ಬೇಸರ ಯಾವತ್ತೂ ನಮ್ಮ ಮುಖದಲ್ಲಿ ತೋರ್ಪಡಿಸಿಕೊಳ್ಳಬಾರದು. ಬೇಸರ ಮುಖ ಹೊತ್ತುಕೊಂಡು ಗುಂಪಿನಲ್ಲಿ ಬೆರೆಯಬಾರದು. ನೋಡಿದವರಿಗೆ ನಮ್ಮ ಮೇಲೆ ಯಾವ ಭಾವನೆ ಮೂಡುತ್ತದೋ ಇದರಿಂದ ನಮ್ಮ ಮನಸು ಮತ್ತೆ ವಿಚಲಿತಗೊಳ್ಲುತ್ತದೆ. ಇದೆಲ್ಲ ಭ್ರಮೆ, ಎಂದುಕೊಂಡು ಸಮ ಚಿತ್ತ ಇಟ್ಟುಕೊಂಡರೆ ಮನಸು ಸದಾ ಪ್ರಫುಲ್ಲವಾಗಿರುತ್ತದೆ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
