ಮಂಗನ ಕೈಯಲ್ಲಿ ಮಾಣಿಕ್ಯ…ಕತೆ- ಪ್ರೊ.ರೂಪೇಶ್ ಪುತ್ತೂರು



ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಹೇಳುವಾಗ, ಅದನ್ನು ಕೇಳುವವನು ಅಂಧಕಾರದಲ್ಲಿದ್ದರೇ ಅವನ ದಾರಿ ಅಂಧಕಾರದಲ್ಲಿಯೇ ಮುಳುಗಿರುತ್ತದೆ, ಅಂತವನಿಗೆ ಬೋಧನೆ ಮಾಡಿದರೆ ಏನು ಫಲ. ಜೀವನದಲ್ಲಿ ಆಶಾವಾದಿಯಾಗಿ ಬೆಳಕಿನತ್ತ ನಡೆಯಿರಿ. ಪ್ರೊ.ರೂಪೇಶ್ ಪುತ್ತೂರು ಅವರ ಜೀವನದ ಮಹತ್ವ ತಿಳಿಸುವ ಕತೆಯಿದು.ಮುಂದೆ ಓದಿ…

ಸಾಮರಸ್ಯೆತೆಯ ಸುಖವೇನು? ಅದನ್ನು ನಾವು ಕಾಪಾಡುತ್ತಿದ್ದೆವೆಯೇ? ನಮ್ಮ ಮುಂದಿನ #ಪೀಳಿಗೆಯು, ಸಾಮರಸ್ಯತೆಯ ದೀಪವನ್ನು ನಮ್ಮ ಕೈಯೊಳಗೆ ಕಾಣುತ್ತಿರುವರೇ? ಹೀಗೆಲ್ಲಾ…

ವಿನಾಶಕಾಲೇ ವಿಪರೀತ ಬುದ್ದಿ. ಅಲ್ಪನ ಕೈಯಲ್ಲಿ ರಾಜ್ಯ ಸಿಕ್ಕರೆ ಮಧ್ಯ ರಾತ್ರೀಲಿ ಕೊಡೆ ಹಿಡಿಯುತ್ತಾನೆ… ಹೀಗೆ ಕೆಲವು ಗಾದೆಗಳು ನನ್ನ ಮುಂದೆ ಬಂದು ಆಗಾಗ ತನ್ನ ಹಾಜರಾತಿ ಪ್ರಕಟಿಸುವುದುಂಟು.

ತಂಗಿ ಮೂರು ವರುಷದ ನಂತರ ಬಂದು ಮರಳಿ ಹೋಗುವುದರಿಂದ, ಅವಳಿಗೊಂದು ಔತಣ ಕೊಡೋಣ ಅಂತ ಪಕ್ಕದ ಹೋಟೇಲಿಗೆ ನಾವು ಕುಟುಂಬದೊಂದಿಗೆ ಕರೆದುಕೊಂಡು ಹೋದೆವು. ಅವರನ್ನು ಇಳಿಸಿ, ಕಾರು ನಿಲ್ಲಿಸಲು ನೋಡಿದಾಗ ಒಬ್ಬ ದಡಕ್ಕನೆ ಬಂದು ಅವನ ಕಾರನ್ನು ಎರಡು ಕಾರು ನಿಲ್ಲಿಸುವ ಸ್ಥಳದ ಮಧ್ಯೆ ತೂರಿಸಿ ತಂಗಿಸಿದ. ಅವನಲ್ಲಿ ಕೇಳಿಕೊಂಡೆ ” ನೀವು ಪಕ್ಕಕ್ಕೆ ಸರಿಯಾಗಿ ನಿಲ್ಲಿಸಿದರೆ, ಇನ್ನಾರಿಗಾದರೂ ಎರಡು ಜನರಿಗೆ ಕಾರು ನಿಲ್ಲಿಸಬಹುದಲ್ಲವೇ?” ನಾನೆಂದೆ. ನನ್ನ ಮಾತಿನ ಧಾಟಿಗೆ ಅವನು– ” ನೀವು ಮಂಗಳೂರಿನ ಚಡ್ಡಿ ಬುದ್ದಿ ನನಗೆ ಹೇಳಬೇಡಿ” ಎಂಬ ಏಕೈಕ ಉತ್ತರ ನನಗೆ ಧಾರೆಯೆರೆದ.

ಫೋಟೋ ಕೃಪೆ : thelivenagpu

ವಾಗ್ವಾದ ಬೇಡ , ಇವನ ಪಕ್ಕ ಗಾಡಿ ನಿಲ್ಲಿಸುವುದೂ ಬೇಡ ಎಂದು ನಾನು ಬೇರೊಂದು ಕಡೆ ದೂರ ನನ್ನ ಗಾಡಿಯನ್ನು ನಿಲ್ಲಿಸಿ ಹೊಟೇಲು ಕಡೆ ದಾಪುಗಾಲು ಹಾಕಿದೆ. ಊಟ ಮಾಡಿ ಮರಳಿ ಬಂದಾಗ, ಜನರೆಲ್ಲಾ ಒಂದುಗೂಡಿ ಏನೋ ನೋಡುತ್ತಿದ್ದಾರೆ.

ಅಲ್ಲೇ ಇದ್ದ ಅಡ್ವರ್ಟೈಸಿಂಗ್ ಬೋರ್ಡ್ ಕಟ್ಟುತ್ತಿದ್ದಲ್ಲಿಂದ ಬಿದ್ದು, ಒಂದು ದ್ವಿಚಕ್ರ ವಾಹನದ ಜೊತೆಗೆ ನನ್ನೊಂದಿಗೆ ವಾಗ್ಯುದ್ದಕ್ಕೆ ಇಳಿದವನ ವಾಹನ ಜಖಂ ಆಗಿತ್ತು. ಮನದಲ್ಲೇ ನೆನೆದೆ “ವಿದ್ಯೆ ಅಲ್ಪ ಸ್ವಲ್ಪ ಇದ್ದರೂ, ಚಡ್ಡಿ ಹಾಕಿದ್ದರಿಂದ ನನಗೆ ಬುದ್ದಿ ಇತ್ತೋ ಏನೋ!!!!!”

#ಜೀವನಕ್ಕೆ ಎಂದೂ rewind ಯಾ ಅಪಗ್ರಥನ (ಪುನರ್ಸಂಪುಟೀಕರಣ /ಮರುಕಳಿಸಿ ಪಡೆಯಲು) ಸಾಧ್ಯವಿಲ್ಲ. ಆದರೆ, ಕೆಲವೇ ಕೆಲವರಿಗೆ ಹಳೇ ಕಾಲಕ್ಕೆ ಮರಳಲು ಅಸಾಧ್ಯವಾಗಿ ಅಸಹಾಯಕರಾಗಿ ನಿಂತಾಗ, ಅದರ ಮರುಚಿಂತನೆ /ಪುನರ್ ವಿಮರ್ಶನೆ/ ಪುನರ್ವಿಚಾರಣೆ ಮಾಡಿ ಮನನೀಕರಿಸಿ,, “ಅವೆಲ್ಲಾ ಬೇಡವಾಗಿತ್ತು … ಮಾಡಬಾರದಾಗಿತ್ತು… ಇದನ್ನು ತಿದ್ದಬೇಕು” ಎನ್ನುವ ಮನೋವ್ಯಾಕುಲತೆ ಇರುತ್ತದೆ. ಅಂತವರು ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಿಯೇ ನೋಡುತ್ತಾರೆ.

ಕೋಳ ಹಾಕಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಬಿಡುಗಡೆಗೊಳಿಸಿ ರಕ್ಷಿಸಬಹುದು, ಕಾರಾಗೃಹದೊಳಗೆ ಇರುವವನನ್ನು ತೆರೆದು ಬಿಟ್ಟು ರಕ್ಷಿಸಬಹುದು. ಆದರೆ  ಬೇರವರಾರೂ ಸರಿ ಇಲ್ಲ ಎನ್ನುವ,
ಕತ್ತಲಲ್ಲೇ ಇದ್ದು ಅದೇ ಬೆಳಕೆಂದು ವಾದಿಸುವವರನ್ನು, ಅವರನ್ನು ಅವರೇ ಮನಗಾಣುವತನಕ ಯಾರಿಂದಲೂ ರಕ್ಷಿಸಲು ಅಸಾಧ್ಯ.



ಅಮ್ಮಜ್ಜ ಹೇಳಿದ ಒಂದು ಕಥೆ ನೆನಪಾಯಿತು

ತನ್ನ ದೃಷ್ಟಿ ಕಳೆದುಕೊಂಡ ನನ್ನಂತಹ ಒಬ್ಬ(ದೃಷ್ಟಿಹೀನ) ವ್ಯಕ್ತಿ, ನಿವೃತ್ತಿಯ ನಂತರ ತನಗೆ ಪಾಠ ಮಾಡಿದ ವೃದ್ದನಾದ ಗುರುವನ್ನು ಕಾಣಲು ಹೋಗುತ್ತಾನೆ. ಆಶಯ ವಿನಿಮಯ ಮಾಡಿ ಕಗ್ಗತ್ತಲಾಗಿದ್ದು ಗುರು ಶಿಷ್ಯರಿಬ್ಬರಿಗೂ ಗೊತ್ತಾಗಲಿಲ್ಲ. ಗುರು ತನ್ನ ದೃಷ್ಟಿ ಹೀನ ಶಿಷ್ಯನಿಗೆ ಉರಿಯುವ ದೀಪ ಕೊಟ್ಟು ” ತುಂಬಾ ಕತ್ತಲಾಯ್ತು, ಈ ದೀಪ ನಿನ್ನ ಕೈಯಲ್ಲಿರಲಿ. ಜೋಪಾನವಾಗಿ ತೆಗೆದುಕೊಂಡು ಹೋಗು” ಎಂದು ಬೀಳ್ಕೊಡುತ್ತಾನೆ. ತನ್ನನ್ನು ತಾನು ಕುರುಡನೆಂದು ಧೃಡೀಕರಿಸಿದ.

ಶಿಷ್ಯ : ” ಗುರುಗಳೇ ನೀವು ನನ್ನ ಹಾಸ್ಯ ಮಾಡುತ್ತಿರುವಿರೇ? ನಾನಿಂದು ಕುರುಡನಾಗಿರುವೆ. ನನಗಿಂದು ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ ದೀಪದ ಅವಶ್ಯಕತೆ ಇಲ್ಲ”

ಗುರು: ” ಇದು ನಿನಗಾಗಿ ಮಾತ್ರವಲ್ಲ. ನಿನ್ನ ಎದುರಿಗೆ ಬರುವವರಿಗೆ ಈ ಉರಿವ ದೀಪ ಕಂಡು ನಿನ್ನ ಮೇಲೆ ಬೀಳದಿರಲಿ ಎಂಬ ಮುಂಜಾಗೃತೆಗೂ ಹೌದು” ನಡೆನಡೆದು ಆ ಶಿಷ್ಯ ತೂಸು ದೂರ ತಲುಪಿದ್ದ, ಮುಂದಿನಿಂದ ಬಂದ ಒಬ್ಬ ವ್ಯಕ್ತಿ, ದೃಷ್ಟಿಹೀನ ಶಿಷ್ಯನಿಗೆ ಗುದ್ದಿ ಇಬ್ಬರೂ ಬಿದ್ದರು. ಶಿಷ್ಯ ಬಿದ್ದಲ್ಲಿಂದ ಸಿಟ್ಟಿನಿಂದ ” ನಿಮಗೆ ಕಣ್ಣೆರಡು ಇಲ್ಲವೇ? ನನ್ನ ಕೈಯಲ್ಲಿ ಉರಿವ ದೀಪ ಕಾಣಲಿಲ್ಲವೇ?”

ವ್ಯಕ್ತಿ: ” ಹಿರಿಯರೇ ನನಗೆ ಕಣ್ಣು ಕಾಣುತ್ತದೆ. ಆದರೆ ಈ ಕಗ್ಗತ್ತಲು ಬೇರೆ ಅಲ್ಲವೇ….. ಅಂದ ಹಾಗೆ ನೀವು ಹೇಳುತ್ತಿರುವ ಆ ಬೆಳಕು ಯಾವಾಗಲೋ ನಂದಿದೆ. ಈವಾಗ ಹೇಗಿದೆ ಅಂದರೆ, ಅದು ನಂದಿದ ಹೊಗೆಯೂ ಕಾಣುತ್ತಿಲ್ಲ”.

ಶಿಷ್ಯ ತಕ್ಷಣ ಮರಳಿ ಗುರುವಿಗೆ ನಂದಿದ ದೀಪ ಹಸ್ತಾಂತರಿಸಿದಾಗ, ದೀಪವನ್ನು ಜಾಗರೂಕತೆಯಾಗಿ ಹಿಡಿದು ಹೋಗಲು ಅವಗಣಿಸಿದ ಶಿಷ್ಯನಲ್ಲಿ ” ಇದರಿಂದ ನನಗೊಂದು ವಿಷಯ ತಿಳಿಯಿತು, ಜೀವನದ ಕೆಲ ಘಟ್ಟದಲ್ಲಿ (ಏಳಿಗೆ ಅಥವಾ ವಯಸ್ಸ), ಮುಂದೆ ಬರೇ ಕತ್ತಲೇ ಕಾಣಲು ನಿಶ್ಚಯಿಸಿದ ವ್ಯಕ್ತಿಯ ಕೈಯಲ್ಲಿ ಬೆಳಕು ಕೊಡಬಾರದು. ಅವರು ಅದನ್ನು ಜೋಪಾನವಾಗಿ ನಂದಿಸದೆ ಇರಿಸುವುದರಲ್ಲೂ ಸೋಲುವುದಲ್ಲದೆ , ಅದು ನ೦ದಿ ಹೋಗುವುದರಿಂದ ಇನ್ನೊಬ್ಬರಿಗೂ ತೊಂದರೆಯುಂಟು ಮಾಡುತ್ತಾರೆ.”

ನಾವು ಕೆಲವರಿಗೆ ಒಳ್ಳೆಯದನ್ನು ಹೇಳುವಾಗ, ಅದನ್ನು ಕೇಳುವವರು ಅಂಧಕಾರದ ಮನಸ್ಸಿನಿಂದ ಕೇಳುವವರಾದರೆ, ಅದು ಹೇಳುವುದರಲ್ಲಿ, ಹೇಳಿ ಕೊಡುವುದರಲ್ಲಿ ಯಾವುದೇ ಮಹತ್ವ/
ಮೌಲ್ಯವಿಲ್ಲ. ಆದ್ದರಿಂದ ನಾವು ಯಾವುದೇ ಹೊಸ ವರುಷ (calendar of any new year ) ಕ್ಕೆ ಹೋಗಬೇಕಾದಾಗ, ನಾವು ತೀರ್ಮಾನಿಸಬೇಕಾದುದು ನಾವು ಕತ್ತಲಲ್ಲಿದ್ದೇವೆಯೇ? ಬೆಳಕು ತೋರುವವರು ಇದ್ದಾರೆಯೇ? ಅವರನ್ನು ಅಲ್ಲಗಳೆಯುತ್ತಿದ್ದೆವೆಯೇ? ನಮ್ಮನ್ನು ನಾವು ಬಡಿದೆಚ್ಚರಿಸಬೇಕಾಗಿದೆಯೇ?

ಸಾಮರಸ್ಯತೆಯ ಸುಖವೇನು? ಅದನ್ನು ನಾವು ಕಾಪಾಡುತ್ತಿದ್ದೆವೆಯೇ? ನಮ್ಮ ಮುಂದಿನ ಪೀಳಿಗೆಯು, ಸಾಮರಸ್ಯತೆಯ ದೀಪವನ್ನು ನಮ್ಮ ಕೈಯೊಳಗೆ ಕಾಣುತ್ತಿರುವರೇ? ಹೀಗೆಲ್ಲಾ…

ನಿಮ್ಮವ ನಲ್ಲ

*ರೂಪು*


  • ಪ್ರೊ.ರೂಪೇಶ್ ಪುತ್ತೂರು  (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW