‘ಮನುಕುಲದ ಬೇಲಿ’ ಕವನ – ಡಾ. ಕೃಷ್ಣವೇಣಿ.ಆರ್.ಗೌಡ

ಡಾ. ಕೃಷ್ಣವೇಣಿ.ಆರ್.ಗೌಡ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….

ಏಕೋ ಗೊತ್ತಿಲ್ಲ
ಅಂತರಾಳದ ತಳಮಳ,
ಕಾಣುವ ಗೋಡೆಗೆ
ನೆರಳ ಭಯ..

ಜಾತಿ ಒಗ್ಗಟ್ಟುಗಳ ಪಕ್ಷಕೆ
‘ಮಿಕ’ ಹೌ ಹಾರಿ ಸಾಯುತಿದೆ.
ಗುಡಿಸುವ ಸ್ವಚ್ಚ ಹಾದಿಗೆ
ಊರ ಬಿಡುವ ತವಕ…

ನೋಡಿದರೆ ಚರ್ಚು, ಮಸೀದಿ,
ಮಂದಿರಗಳೆಲ್ಲವು
ಬಿರುಕು ಬಿಟ್ಟ ಒಣ ಗೋಡೆಗಳಾಗಿವೆ….

ವಂದೇ ಮಾತರಂ ನೆಲದಿ
ಋಂಡ ಚಂಡಾಡುತಿವೆ,
ಇಕ್ಕಟ್ಟ ಉಲ್ಭಣದ ಕಾವು
ಮೇಲೆದ್ದು ಜಿಗಿಯುತಿದೆ…

ಭರತ ದೇವಿ ರೋದಿಸಿ
ಅರಚುತ್ತಿದ್ದಾಳೆ…

ಬೆಳಕ ಬೀರುವ ಹೊತ್ತಿಗೆಗಳು
ಸೀಮೆ ಸುಣ್ಣದಿ ಕುದಿಯುತಿವೆ.
ಬಾಯಿ ಮಾತಿನ ಮೇಜ
ಮೇಲಿನ ಪುಂಡರ ಗೋಷ್ಠಿಗೆ
ಕಲಾಮು ಹವೆಯಿಲ್ಲದ
ಟೈರು ಗಾಲಿಯಲಿ
ಸೋತಿದೆ…

ಒಂದೊಂದು ಮನೆಯ ಬಾಗಿಲಿಗೂ
ಒಂದೊಂದು ಜಾತಿಯ
ಕೈ ಬಡಿತ
ಆಶಾಂತಿಯ ಗೈದಿದೆ…

ಇನ್ನೆಲ್ಲಿ ಮನುಕುಲದ
ಒಗ್ಗಟ್ಟು ಬೇಲಿ?.

ಕಲ್ಮಶವಿಲ್ಲದ ಸುಮವೊಂದು
ತಪಗೈಯ್ಯುತಿದೆ
ಸಮಾನತೆಯ ಬೀಜ
ಮೊಳಗಲೆಂದು….


  • ಡಾ. ಕೃಷ್ಣವೇಣಿ.ಆರ್.ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading