ಮರೆತು ಹೋದ ಕಲಾವಿದರು

ಇದು ಚಿತ್ರರಂಗದ ಕಲಾವಿದರ ಒಂದು ದುರಂತ ಕತೆ. ಒಂದು ಕಾಲದಲ್ಲಿ ಅವರ ನಟನೆ, ಸಾಧನೆಗಳನ್ನು ಪುಂಖಾನು- ಪುಂಖಾವಾಗಿ ಹೊಗಳಿ ಸಂಭ್ರಮಿಸುತ್ತಿದ್ದ ಜನ, ಕ್ರಮೇಣ ಅವರನ್ನು ಹೇಗೆ ಮರೆತು ಬಿಡುತ್ತಾರೆ ನೋಡಿ. ಕಾಲ ಅದೆಷ್ಟು ಬೇಗ ಅವರನ್ನು ಮರೆವಿನ ಕತ್ತಲಕ್ಕೆ ತಳ್ಳುತ್ತದೆ. ಅವರು ಬದುಕಿದ್ದರೂ ಸತ್ತವರ ಹಾಗೆ ಇರುತ್ತಾರೆ. ಇದ್ದಷ್ಟು ಸಮಯ ಅವರ ಸಾಧನೆ ಮತ್ತು ಪ್ರತಿಭೆಯನ್ನು ಹೊಗಳುತ್ತಾ ಅಟ್ಟಕ್ಕೇರಿಸುತ್ತಿದ್ದ ಜನ ಅವರು ಹಣ್ಣೆಲೆಯಾಗಿ ಹಿನ್ನೆಲೆಗೆ ಸರಿಯುತ್ತಿದ್ದಂತೆ ಅವರನ್ನು ಸಂಪೂರ್ಣವಾಗಿ ಮರೆತೇ ಬಿಡುತ್ತಾರೆ. ಅದು ರಂಗಭೂಮಿಯೇ ಇರಲಿ, ಚಿತ್ರರಂಗವೇ ಇರಲಿ, ಸಾಹಿತ್ಯ ರಂಗವೇ ಇರಲಿ ಅಥವಾ ಚಿತ್ರಕಲಾ ರಂಗವೇ ಇರಲಿ.

ಹೂಗಳು ಅರಳುವ ಹೊತ್ತಿನಲ್ಲಿ ಎಲ್ಲರ ಕೈ ಅದರತ್ತ ಚಾಚುತ್ತವೆ. ಹೂ ಮುದುಡುವಾಗ ಯಾವ ಕೈಯ ಬೆರಳೂ ಅದರತ್ತ ಚಾಚುವುದಿಲ್ಲ. ಅವು ತಮ್ಮಷ್ಟಕ್ಕೇ ಉದುರಿ ಹೋಗುತ್ತವೆ. ಮನಸ್ಸಿನ ತುಂಬಾ ತಾತ್ಸಾರ ತುಂಬಿಕೊಳ್ಳುತ್ತದೆ. ಜನ ಹಾಗೇ. ನಡೆಯುವವರ ಕಾಲುಗಳಿಗೇ ನಮಸ್ಕರಿಸುತ್ತಾರೆ. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಒಂದು ಕಾಲದಲ್ಲಿ ಜನರಿಂದ ಹೊಗಳಿಸಿಕೊಂಡ, ಹಲವು ಕಲಾವಿದರು ಹಿನ್ನೆಲೆಗೆ ಸರಿಯುತ್ತಿದ್ದಂತೆ ಈ ಜಗತ್ತು ಅವರನ್ನು ಅಪರಿಚಿತರಂತೆ ನಡೆಸಿಕೊಳ್ಳುತ್ತದೆ. ತಮ್ಮ ಸಾಧನೆಗಳೆಲ್ಲ ಮಣ್ಣಲ್ಲಿ ತೋರಿ ಹೋದಂತಾಗಿ ಅಂಥ ಜೀವಗಳು ಒಳಗೊಳಗೇ ಕಣ್ಣೀರಿಡುತ್ತವೆ.

ಇತ್ತೀಚಿಗೆ ಈ ಲೋಕದಿಂದ ಅಪರಿಚಿತರಂತೆ ಹೊರಟು ಹೋದ ಇಬ್ಬರು ಕಲಾವಿದರ ವಿದಾಯ ಎಷ್ಟೊಂದು ನೋವುದಾಯಕವಾಗಿತ್ತೆಂದರೆ ಹೇಳಲೂ ಶಬ್ದಗಳಿಲ್ಲ. ನೀವು ವಿಜಯನಗರದ ವೀರ ಪುತ್ರ ಸಿನಿಮಾದ ಬಗ್ಗೆ ಕೇಳಿರಬೇಕು. ಕೆಲವರಾದರೂ ಅದನ್ನು ನೋಡಿರುತ್ತೀರಿ. ಅದರಲ್ಲಿ ನೀವು ಆರ.ಏನ್. ಸುದರ್ಶನ್ ಅವರನ್ನು ನೋಡಿರುತ್ತೀರಿ. ಚಿತ್ರ ನಿರ್ಮಾಪಕರಾಗಿ, ನಟರಾಗಿ, ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಆರ.ನಾಗೇಂದ್ರ ರಾಯರ ಮೂರನೇ ಪುತ್ರರಿವರು. ಹಿರಿಯ ಪುತ್ರರಾದ ಆರ. ಎನ್. ಜಯಗೋಪಾಲರು ಸುಪ್ರಸಿದ್ದ ಚಿತ್ರಸಾಹಿತಿಗಳು. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ – ಸಂಭಾಷಣೆ ಬರೆದಿದ್ದಾರೆ. ಡಾ.ರಾಜಕುಮಾರರ ಪ್ರೀತಿಯ ಬಳಗದಲ್ಲಿದ್ದವರು. ಆರ.ನಾಗೇಂದ್ರ ರಾಯರ ಎರಡನೇ ಪುತ್ರ ಕೃಷ್ಣ ಪ್ರಸಾದರು ಸುಪ್ರಸಿದ್ದ ಚಿತ್ರ ಸಂಕಲನಕಾರರು. ಅವರ ಮೂರನೆಯ ಪುತ್ರನೇ ಸುದರ್ಶನ ಅವರು.

ಅವರು ನಟರಾಗಿ ಹತ್ತಾರು ಸಿನಿಮಾಗಳಲ್ಲಿ ನಟಿಸಿದವರು. ಸಿನಿಮಾ ನಂಬಿಕೊಂಡೇ ಬದುಕಿದ ಕುಟುಂಬ ಅವರದು. ಆಗೆಲ್ಲ ಕನ್ನಡ ಸಿನಿಮಾಗಳು ಮದರಾಸಿನಲ್ಲೇ ತಯಾರಾಗುತ್ತಿದ್ದುದರಿಂದ ಇವರ ಕುಟುಂಬವೂ ಅಲ್ಲೇ ನೆಲೆಸಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅಲ್ಲಿ ಕೈ ಸಾಗದೆ ಎಲ್ಲವನ್ನೂ ಕಳೆದುಕೊಡರು. ಅಷ್ಟೇ ಅಲ್ಲದೆ ಆರೋಗ್ಯವನ್ನು ಕೆಡಿಸಿಕೊಂಡು ಸುದರ್ಶನರು ತಾರಾ ಪತ್ನಿ ಶೈಲಶ್ರೀಯೊಂದಿಗೆ ಬೆಂಗಳೂರಿಗೆ ದಶಕದ ಹಿಂದೆಯಷ್ಟೇ ವಾಪಸಾಗಿದ್ದರು. ವಯಸ್ಸಾಗಿದ್ದರಿಂದ ಕೈಗೆ ಕೆಲಸವೂ ಸಿಗದೇ ಜೀವನಕ್ಕೂ ದಂಪತಿಗಳು ಪರದಾಡಿದರು. ನಮಗೆ ಸನ್ಮಾನ ಬೇಡ. ಚಿತ್ರರಂಗ ನಮಗೆ ಕೆಲಸ ಕೊಡಲಿ. ಮರ್ಯಾದೆಯಿಂದ ಬದುಕುತ್ತೇವೆ ಎಂದು ಶೈಲಶ್ರೀ ಯವರು ಮಾಧ್ಯಮಗಳ ಮುಂದೆ ಗೋಳು ತೋಡಿಕೊಂಡಿದ್ದರು. ಆದರೆ ಕೊನೆಗೆ ಅವರಿಗೆ ಆಸರೆಯಾದದ್ದು ಚಿತ್ರರಂಗವಲ್ಲ. ಆಸರೆಯಾದದ್ದು ಕಿರುತೆರೆ. ಸುದರ್ಶನರು ಟಿವಿ ಧಾರಾವಾಹಿಗಳಲ್ಲಿ ಕೊಟ್ಟ ಪಾತ್ರ ತೂಗಿಸುತ್ತ, ನಿರ್ಮಾಪಕರು ಕೊಟ್ಟ ಹಣವನ್ನು ಚೌಕಾಸಿ ಮಾಡದೇ ಸ್ವೀಕರಿಸಿದರು. ಕೆಲವರು ತಿನ್ನುವುದಕ್ಕಾಗಿ ಬದುಕುತ್ತಾರೆ. ಆದರೆ ಸುದರ್ಶನ್ ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯವಾಗಿತ್ತು.

ಇತ್ತೀಚಿಗೆ ಅವರೊಳಗಿದ್ದ ಹಳೆಯ ರೋಗ – ರಾಕ್ಷಸ ಮತ್ತೆ ಸದ್ದಿಲ್ಲದೇ ಅವರನ್ನಾವರಿಸಿದ. ಒಳಗೊಳಗೇ ಕೊರಗತೊಡಗಿದ ಸುದರ್ಶನರು ಹೊರಗೆ ಅದನ್ನು ಕಲ್ಲು ಬಿದ್ದೀತು ಎಂಬ ಭಯ ಅವರಿಗೆ. ಆದರೆ ಅದೇ ಕಾರಣಕ್ಕೇನೋ.

ಕೊಟ್ಟ ಪಾತ್ರ ತೂಗಿಸುತ್ತ, ನಿರ್ಮಾಪಕರು ಕೊಟ್ಟ ಹಣವನ್ನು ಚೌಕಾಸಿ ಮಾಡದೇ ಸ್ವೀಕರಿಸಿದರು. ಕೆಲವರು ತಿನ್ನುವುದಕ್ಕಾಗಿ ಬದುಕುತ್ತಾರೆ. ಆದರೆ ಸುದರ್ಶನ್ ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯವಾಗಿತ್ತು.

ಇತೀಚೆಗೆ ಅವರೊಳಗಿದ್ದ ಹಳೆಯ ರೋಗ – ರಾಕ್ಷಸ ಮತ್ತೆ ಸದ್ದಿಲ್ಲದೇ ಅವರನ್ನಾವರಿಸಿದ. ಒಳಗೊಳಗೇ ಕೊರಗತೊಡಗಿದ ಸುದರ್ಶನರು ಹೊರಗೆ ಅದನ್ನು ಬಹಿರಂಗ ಪಡಿಸಿಲ್ಲ. ಯಾಕಂದರೆ ಹೊರ ಜಗತ್ತಿಗೆ ಗೊತ್ತಾದರೆ ಸಿಗುತ್ತಿರುವ ಅಷ್ಟಿಷ್ಟು ಅನ್ನಕ್ಕೂ ಕಲ್ಲು ಬಿದ್ದೀತು ಎಂಬ ಭಯ ಅವರಿಗೆ. ಆದರೆ ಅದೇ ಕಾರಣಕ್ಕೇನೋ. ಜವರಾಯ ಅವರನ್ನು ಸೆಳೆದುಕೊಂಡು ಹೋಗೇಬಿಟ್ಟ. ಅದು ಅಂಥ ದೊಡ್ಡ ಸುದ್ದಿಯೂ ಆಗಲಿಲ್ಲ. ಆದರೆ ದುರಂತವೆಂದರೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ದರ್ಶನಕ್ಕಿಡಲು ರವೀಂದ್ರ ಕಲಾಕ್ಷೇತ್ರದ ಆವರಣವನ್ನು ಕೊಡಲಿಲ್ಲ. ಕಲಾಕ್ಷೇತ್ರ ಹೆಣ ಇಡುವ ಜಾಗವಲ್ಲ ಎಂದು ಸಂಸ್ಕೃತಿ ಮಂತ್ರಿ ಹೇಳಿ ಕೈಚೆಲ್ಲಿ ಬಿಟ್ಟರು. ಆದರೆ ಅದಾಗಲೇ ಸಾಕಷ್ಟು ಕಲಾವಿದರು- ಸಾಹಿತಿಗಳ ಪಾರ್ಥಿವ ಶರೀರಗಳು ಇಲ್ಲಿ ಸಾರ್ವಜನಿಕ ದರ್ಶನಕ್ಕೆ ಬಂದು ಹೋಗಿದ್ದವು. ಸುದರ್ಶನರು ಸತ್ತ ಮೇಲೂ ಅವಗಣನೆಗೆ ಒಳಗಾದರು.

#ಕಲವದರ #ಸನಮ #ಪರತಭ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW