‘ಮರೆಯಲಿ ಹೇಗೆ ನಿನ್ನ ನಾ’ ಕವನ – ಕೆ.ಸಿ.ರತ್ನಶ್ರೀ ಶ್ರೀಧರ್

ಆ ವೈದ್ಯರಿಗೇನು ಗೊತ್ತು? ನಮ್ಮಿಬ್ಬರ ಆ ಬಾಂಧವ್ಯ !! ಅವರೇನು ಬಲ್ಲರು ಹೇಳು ನಮ್ಮ ಬಿಡಿಸದಾ ಬಂಧ!!…ಕವಿಯತ್ರಿ ಕೆ.ಸಿ.ರತ್ನಶ್ರೀ ಶ್ರೀಧರ್ ಅವರ ಕವನವನ್ನು ತಪ್ಪದೆ ಪೂರ್ತಿಯಾಗಿ ಓದಿ…

ಮರೆಯಬೇಕಂತೆ ನಿನ್ನ
ಮರೆತು ಹೇಗೆ ಕಳೆಯಲಿ
ನೀನಿಲ್ಲದ ರಾತ್ರಿಗಳನು
ನಾ ಹೇಗೆ ತೊರೆಯಲಿ
ನೀ ನೀಡಿದ ಆಸರೆಯನು
ನಾ ಹೇಗಿರಲಿ ನೀನಿಲ್ಲದೆ
ಮರೆಯಲಿ ಹೇಗೆ ನಿನ್ನ ನಾ

ತಲೆಶೂಲೆ ಕಾಡಿದಾಗ
ನಿದಿರದೇವಿ ಕರೆದಾಗ
ಆಯಾಸದಿ ಬಳಲಿದಾಗ
ದುಃಖದಲಿ ನಾ ಕಂಗೆಟ್ಟು
ನಿನ್ನೆದೆಯಲಿ ತಲೆಯಿಟ್ಟು
ಅತ್ತಾಗಲೆನ್ನ ಕಣ್ಣೊರೆಸಿದ್ದ
ನಿನ್ನ ಮರೆಯಲಿ ಹೇಗೆ ನಾ

ನಿನ್ನ ಸಹವಾಸ ಬಿಡಬೇಕಂತೆ
ನಿನ್ನಿಂದ ದೂರ ಇರಬೇಕಂತೆ
ನಿನ್ನ ಎದೆಯಾಸರೆಯ ನಾ
ಈಗಲೇ ತೊರೆಯಬೇಕಂತೆ
ನ(ಬೆ)ನ್ನ ಬೇನೆ ದೂರಾಗಲು
ನಿನ್ನ ನಾ ಮರೆಯಬೇಕಂತೆ
ಮರೆಯಲಿ ಹೇಗೆ ನಿನ್ನ ನಾ

ಆ ವೈದ್ಯರಿಗೇನು ಗೊತ್ತು?
ನಮ್ಮಿಬ್ಬರ ಆ ಬಾಂಧವ್ಯ !!
ಅವರೇನು ಬಲ್ಲರು ಹೇಳು
ನಮ್ಮ ಬಿಡಿಸದಾ ಬಂಧ!!
ನೀ ಕೊಟ್ಟಿದ್ದೆ ನನಗೆ ಇಂಬು
ನೀ ನನ್ನ ಪ್ರೀತಿಯ ದಿಂಬು
ತೊರೆಯಲಿ ಹೇಗೆ ನಿನ್ನ ನಾ


  • ಕೆ. ಸಿ. ರತ್ನಶ್ರೀ ಶ್ರೀಧರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW