ಜೀವಂತ ಉಸಿರಾಗಿ ಕಾವ್ಯವಾಗಿ ಸಾಲುಗಳಾಗಿ ಸುಮ್ಮನೇ ಓದಿಕೊಳ್ಳಬೇಕು…ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿ ಬಂದ ಕವಿತೆ, ತಪ್ಪದೆ ಮುಂದೆ ಓದಿ…
ಮತ್ತೆ ಕವಿತೆಯಾಗಬೇಕು
ಸಾಲುಗಳು ಬದುಕಾಗಿ
ಎಂದೂ ನಿಲುವಾಗದೇ
ಹರಿಯಬೇಕು ನದಿಯಂತೆ
ನಮ್ಮ ಖುಷಿಯೊಳಗೆ
ಬದುಕು ಉಳಿವಂತೆ
ಹಗುರವಾಗಬೇಕು
ಗಿಡ ಮರದ ನೆರಳಾಗಬೇಕು
ಉಸಿರು ಉಳಿಸಬೇಕು
ಜೀವ ಕಾಯಬೇಕು ಮತ್ತೆ
ಹೃದಯದಿ ಕಾದು ಕುಳಿತ
ನೆನಪಾಗಬೇಕು ಮಗುವಾಗಿ
ಮತ್ತೆ ನಡೆಯಬೇಕು
ನಡೆಯುವಾಗ ಅನುಭವ
ಹಿತಕ್ಕೆ ಸ್ವಭಾವ ತಿದ್ದಿ ತೀಡಿ
ಹಗುರವಾಗಬೇಕು
ಹಕ್ಕಿ ಕಣ್ಣಲ್ಲಿ ಜಗವ ನೋಡಬೇಕು
ಮಾತಲ್ಲಿ ಮನದಲ್ಲಿ ಸಿಗದಿರುವ
ಮಾತು ಹುಡುಕಬೇಕು
ಸತ್ವವಾಗಬೇಕು ನಿತ್ಯ
ಉಳಿಯಬೇಕು ಒಂದು
ಜೀವಂತ ಉಸಿರಾಗಿ
ಕಾವ್ಯವಾಗಿ ಸಾಲುಗಳಾಗಿ
ಸುಮ್ಮನೇ ಓದಿಕೊಳ್ಳಬೇಕು…….
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ
