‘ಮಾವಿನಂತೆ ಮಾಗೋಣ’ ಕವನ – ಡಿ. ರಾಮಣ್ಣಅಲ್ಮರ್ಸಿಕೇರಿ

ಪ್ರೀತಿ ಕರುಣೆ, ಸೌಹಾರ್ದತೆ, ಮಾನವೀಯತೆಯ ಹೊರತು ಈ ಜಗತ್ತಿನಲ್ಲಿ ಯಾವುದು ಉಳಿದಿಲ್ಲ…ಡಿ. ರಾಮಣ್ಣಅಲ್ಮರ್ಸಿಕೇರಿ ಅವರ ಲೇಖನಿಯಲ್ಲಿ ಮೂಡಿ ಬಂದ ಕವಿತೆ, ತಪ್ಪದೆ ಮುಂದೆ ಓದಿ…

ಭಾಷೆ ದೇಶ
ಜಾತಿ ಧರ್ಮ
ಗಡಿ ಪ್ರಾಂತಗಳ
ಬಲೆನೇಯ್ದು
ನೀವು ನಮ್ಮನ್ನು
ಬಂಧಿಸದಿರಿ …

ಸುಖ ಶಾಂತಿ ನೆಮ್ಮದಿ
ಸಮೃದ್ಧಿ ಸಂಪ್ರೀತಿ
ಎಲ್ಲೆಡೆ ನೆಲೆಸುವಂತೆ
ಪ್ರಾರ್ಥಿಸುವ ನಮ್ಮ
ಧ್ವನಿಯ ಅಡಗಿಸದಿರಿ…

ಪ್ರೀತಿ ಕರುಣೆ
ಸೌಹಾರ್ದತೆ ಮಾನವೀಯತೆಯ
ಹೊರತು
ಈ ಜಗತ್ತಿನಲ್ಲಿ
ಯಾವುದು ಉಳಿದಿಲ್ಲ
ಎಂಬುದನ್ನು
ಹಳೆಯ ಕ್ಯಾಲೆಂಡರ್ ಗಳು
ಮತ್ತೆ ಮತ್ತೆ ನೆನಪಿಸುತ್ತಿವೆ ….

ಇನ್ನಾದರೂ ಹೊಸ
ಕ್ಯಾಲೆಂಡರ್ ನೊಂದಿಗೆ
ಬದಲಾಗೋಣ
ಬಂಧುತ್ವ ಬದುಕು
ಮುಕ್ಕಾಗದಂತೆ
ಮುನ್ನಡೆಯುವ
ಸಂಕಲ್ಪ ಮಾಡೋಣ
ನಾವು ನಾವಾಗೋಣ
ಮಾಗುತಾ ಮಾವಿನಂತೆ ಸಿಹಿಯಾಗೋಣ…


  • ಡಿ. ರಾಮಣ್ಣಅಲ್ಮರ್ಸಿಕೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading