‘ಇರುವೆ’ ನಿನ್ನ ಈ ಸಹನೆಯ ಗುಣ ನನಗೂ ಬರಲಿ….ಕವಿ ಡಿ.ರಾಮಣ್ಣ ಅಲ್ಮರ್ಸಿಕೇರಿ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಯಾರೆಲ್ಲಾ ತುಳಿದರು
ಸಹಿಸಿಕೊಂಡೇ ಮುನ್ನಡೆಯುವೆ
ಅದೆಷ್ಟೋ ಬಾರಿ
ಹಲವರು
ತುಳಿದ ಪಾದಕ್ಕಟ್ಟಿಕೊಂಡೇ
ಹೊಸ ಹುಟ್ಟು ಪಡೆಯುವೆ …
ತುಳಿದರೆಂದು ತುಚ್ಚವಾಗಿ
ಕಾಣಲಾರೆ
ಏನೆಲ್ಲಾ
ಆತಂಕ ಆಪತ್ತು ಬಂದರೂ
ಬರಬರನೆ ನಡೆದು
ಗೂಡು ಸೇರುವೆ ….
” ಇರುವೆ “
ನಿನ್ನ ಈ ಸಹನೆಯ ಗುಣ
ನನಗೂ ಬರಲಿ ….
ಕಂಡರೂ ಕಾಣದಂತಿರುವೆ
ತಡವಿದರೆ
ಬೆಚ್ಚಿ ಬೀಳುವಂತೆ
ಕಡಿಯುವೆ
ತುಸು ಹೆಜ್ಜೆ ತಪ್ಪಿದರು
ಸಲೀಸಾಗಿ ಗೆಳೆಯರೊಡಗೂಡಿ ಸೈನ್ಯದಂತೆ ನಡೆಯುವೆ
ನಿನ್ನ ಶಿಸ್ತು ಸಮನ್ವಯತೆ
ಮುನ್ನೋಟಕ್ಕೆ ಬೆರಗಾಗಿರುವೆ
” ಇರುವೆ “
ನಿನ್ನ ಈ ಬೆರಗಿನ ನೋಟ
ನನಗೂ ಬರಲಿ….
- ಡಿ.ರಾಮಣ್ಣ ಅಲ್ಮರ್ಸಿಕೇರಿ
