‘ಮೌನ ಮಂದಾರ’ ಕವನ – ಸ್ವಭಾವ ಕೋಳಗುಂದ

‘ಎಡ ಬಲ ನಡುವೆ… ಸುಳಿದು ಆಡುವ ಒಲವು’… ಕವಿ ಸ್ವಭಾವ ಕೋಳಗುಂದ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಓದಿ…

ಗರುಡ ಧ್ವನಿಯ ನೋಟ
ನಡುನಡುವೆ ಸಂಕಟದ ಛಾಯೆ
ಗೂಡು ಬಿಟ್ಟು ಹಾರುವ ಕಾತುರ
ಮುಗಿಲ ಮನೆ ಮೌನ ಮಂದಾರ

ಎಡ ಬಲ ನಡುವೆ
ಸುಳಿದು ಆಡುವ ಒಲವು
ಹಿಮ ಮನೆಯ ಶಂಕರನ ಕುಣಿತ
ರಾಶಿ ಗಂಧದ ಬೆನಕ

ದಾರಿ ಮಾತ್ರ ಕವಲು
ಸಳಿದ ಹುಬ್ಬಿನ ನಡುವೆ ಇಳಿದ
ನಾಸಿಕದ ಕಂಬ ಸಾಲು
ಮಾತಿನ ಮನೆಯೆಲ್ಲ ಬೆಳಕಿನ ಕಿಟಕಿಗಳು

ಸಾಲಿಗೊಂದು ನೆನಪಿನ ಮರ ಮೆರವಣಿಗೆ
ಪಾದ ಸೋಕಲು ಸುಮದ
ಸಾಲು ಸಾಲು ಮೋಕ್ಷ
ಅರುಂಧತಿಯ ತೋರುವ ಧಾವಂತ

ಪದ ಪಲ್ಲಟಕೆ ಸಾಲು ಸೋಲುವ ಭಯ
ಈ ನಾಟಕದ ಪರದೆ ಎಳೆ
ಅಲ್ಲೊಂದು ನಿಟ್ಟುಸಿರು ಪದ್ಯ
ಯಾವ ಕವಿಯ ಸಂಕಟವೋ


  • ಸ್ವಭಾವ ಕೋಳಗುಂದ – ಗೌರವ ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅರಸೀಕೆರೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading