ಅವನ ಕ್ಲಾಸ್ಮೇಟ್ ಶಶಿಕಲಾ ತುಂಬಾ ಒಳ್ಳೆಯ ಹುಡುಗಿ. ಇವನ ಹಳೆಯ ಪ್ರೇಮ ಪ್ರಕರಣ ತಿಳಿದೂ ಅವನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾಳೆ. ಅದಕ್ಕೆ ಗೌರೀಶನ ಉತ್ತರವೇನು?. ಶಾಂತಿನಾಥ ದೇಸಾಯಿ ಅವರ ‘ಮುಕ್ತಿ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಮುಕ್ತಿ
ಲೇಖಕರು: ಶಾಂತಿನಾಥ ದೇಸಾಯಿ.
ಪ್ರಕಾಶನ : ಜನತಾ ಪ್ರಕಾಶನ ರಾಯಚೂರು
ಮುದ್ರಣದ ವರ್ಷ:೧೯೮೩
ಪುಟಗಳು: ೩೦೪
ಬೆಲೆ: ರೂ. ೨೫೦
ಮಲೆನಾಡಿನ ಹಳ್ಳಿಯೊಂದರಿಂದ ಗೌರೀಶ ಕಾಲೇಜು ಓದಲೆಂದು ಧಾರವಾಡಕ್ಕೆ ಬಂದಾಗ ಜೊತೆಯಾದ ಸ್ನೇಹಿತರೆಂದರೆ ಸೀನಿಯರ್ ಆಗಿದ್ದ ಸತ್ಯೇಂದ್ರ ಮತ್ತು ಶ್ರೀಕಾಂತ. ರೋಹಿಣಿ ಎನ್ನುವ ಸಹಪಾಠಿ ಹುಡುಗಿ ಶ್ರೀಕಾಂತನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ಸ್ವಭಾವವೂ ಒಂದೇ ಆಗಿತ್ತು.
ಕಾಮಿನಿ ಶ್ರೀಕಾಂತನ ತಂಗಿ. ಚೆಂದದ ರೂಪಿನ ಹುಡುಗಿ. ಅವಳಿಗೆ ಪಾಠ ಹೇಳುವ ನೆಪದಲ್ಲಿ ಗೌರೀಶ ಸನಿಹವಾಗಿದ್ದ. ಒಮ್ಮೆ ಅವರೆಲ್ಲರನ್ನೂ ತಮ್ಮೂರಿಗೆ ಕರೆದುಕೊಂಡು ಹೋದಾಗ ಅವನ ತಾಯಿ ಮತ್ತು ಅತ್ತೆ ಗಂಡು ಮಕ್ಕಳ ಜೊತೆ ಹೀಗೆ ಅಂಕೆ ಇಲ್ಲದೇ ಮೆರೆಯುವ ಆ ಹೆಣ್ಣು ಮಕ್ಕಳನ್ನು ಜರಿದಿದ್ದರು.

ದಿನ ಕಳೆದಂತೆ ಮೋಹಕ ರೂಪ ಹೊಂದಿದ ಶ್ರೀಕಾಂತ ಗೌರೀಶನಿಗೆ ನಿಕಟವಾಗುತ್ತಾನೆ. ಅವನ ಬಗ್ಗೆ ಗೆಳೆಯರ ವಲಯದಲ್ಲಿ ಇನ್ನೊಂದು ವದಂತಿಯೂ ಇತ್ತು.!! ಅದೇನು?…..
ಅವನು ‘ಪ್ರಗತಿ’ ಎನ್ನುವ ಪತ್ರಿಕೆಗೆ ಚುನಾವಣೆಯ ಬಗ್ಗೆ ಲೇಖನ ಬರೆಯುತ್ತಿದ್ದ. ಅವನೊಂದಿಗೆ ಸೇರಿ ರಾಜಕೀಯದಲ್ಲಿ ಭಾಗವಹಿಸಿದ ಪರಿಣಾಮವಾಗಿ ಗೌರೀಶನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತಿತ್ತು. ಇದರಿಂದ ಸಹಜವಾಗಿಯೇ ಮನೆಯವರಿಗೆ ಬೇಸರವಾಗಿತ್ತು.
ಈ ನಡುವೆ ಸತ್ಯೇಂದ್ರ ಓದು ಮುಗಿದು ಮುಂಬೈ ಸೇರಿದ್ದ. ಅಲ್ಲಿಯೇ ಕೆಲಸ ಸಿಕ್ಕಿ ಸುಶೀಲಳನ್ನು ಮದುವೆಯಾಗಿ ಗೃಹಸ್ಥನಾಗಿದ್ದ. ಆದರೆ ಇಲ್ಲಿ ಶ್ರೀಕಾಂತನಿಗೆ ಟಿ.ಬಿ ಕಾಯಿಲೆ ಉಲ್ಭಣವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಅವನ ಜೊತೆ ಇದ್ದು ಸಹಾಯ ಮಾಡಲು ಗೌರೀಶ ರಜೆಯಲ್ಲಿ ಮನೆಗೂ ಹೋಗದೇ ಗೆಳೆಯನೊಂದಿಗೆ ಉಳಿದ. ಶ್ರೀಕಾಂತನ ತಾಯಿಗೆ ಇದರಿಂದ ತುಂಬಾ ಸಮಾಧಾನವಾಗಿತ್ತು.
ತನ್ನ ತಂಗಿಯ ಆಕರ್ಷಣೆಗೊಳಗಾದ ಗೆಳೆಯನ ಬಗ್ಗೆ ಶ್ರೀಕಾಂತನಿಗೆ ಮರುಕವಿತ್ತು!!. ನೀನು ಸುಖವಾಗಿರ ಬೇಕು. ಅವಳು ನಿನಗೆ ತಕ್ಕ ಹುಡುಗ ಎಂದಿದ್ದ.!! ಅದಕ್ಕೆ ಕಾರಣ ಬಣ್ಣದ ಚಿಟ್ಟೆಯಂತೆ ಹಾರುವ ಅವಳಿಗೆ ಹಲವು ಗೆಳೆಯರಿದ್ದರು.! ಅವಳ ದೃಷ್ಟಿಯಲ್ಲಿ ಮದುವೆಯೊಂದು ಬಂಧನವಾಗಿತ್ತು. ಅವಳು ಶಿವರಾಮ ಕುಲಕರ್ಣಿಯೊಂದಿಗೆ ತಿರುಗುವಾಗ ಕಾಲೇಜಿನಲ್ಲಿ ಎಲ್ಲರೂ ಇವನಿಗೆ ‘ಅವಳ ಚಪ್ಪಲಿ ಕಾಯಿ’ ಎಂದು ಗೇಲಿ ಮಾಡಿ ನಕ್ಕಿದ್ದು ಅಪಮಾನವೆನ್ನಿಸಿತ್ತು. ಇಷ್ಟಾದರೂ ಗೌರೀಶನಿಗೆ ಅವಳಲ್ಲಿ ಪ್ರೇಮವಿತ್ತು. ಆದರೂ ಅವನು ಕಾಮಿನಿಯಿಂದ ದೂರವಾಗಲು ಕಾರಣವೇನು? .
ಅವನ ಕ್ಲಾಸ್ಮೇಟ್ ಶಶಿಕಲಾ ತುಂಬಾ ಒಳ್ಳೆಯ ಹುಡುಗಿ. ಇವನ ಹಳೆಯ ಪ್ರೇಮ ಪ್ರಕರಣ ತಿಳಿದೂ ಅವನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾಳೆ. ಅದಕ್ಕೆ ಗೌರೀಶನ ಉತ್ತರವೇನು?.

ಮುಂದೆ ಎಲ್ಲವನ್ನೂ ಬಿಟ್ಟು ಹಣ ಸಂಪಾದನೆಗಾಗಿ ಆಫ್ರಿಕಾಕ್ಕೆ ಹೋದ ಗೌರೀಶನಿಗೆ ಕೆಲಸ ಮಾಡುವ ಕಂಪನಿಯಲ್ಲಿ ಜೊತೆಯಾದ ಡಾಲಿ ಅವನನ್ನು ಮನಸಾರೆ ಪ್ರೀತಿಸುತ್ತಾಳೆ.ಅಲ್ಲಿ ಮದುವೆಯ ಬಗ್ಗೆ ಚಿಂತೆ ಇರದ ಅವರಿಬ್ಬರ ಸಹ ಜೀವನ ಶುರುವಾಗುತ್ತದೆ.!
ಇತ್ತ ತಾನು ಕಾಯಿಲೆಯಿಂದ ಗುಣಮುಖನಾಗಿ ಚೆನ್ನಾಗಿ ಜೀವಿಸಬೇಕು ಎಂದು ಆಶಾಭಾವನೆಯಿಂದ ಇದ್ದ ಶ್ರೀಕಾಂತ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?. ಸಂಪ್ರದಾಯಸ್ಥ ಮನೆತನದ ಹಿನ್ನಲೆಯಿಂದ ಬಂದಿರುವ ಇವರೆಲ್ಲರ ಪ್ರೀತಿ- ಪ್ರೇಮ -ಮದುವೆಯ ಬಗ್ಗೆ ಇರುವ ವಿವಿಧ ಮನಸ್ಥಿತಿಯ ಕುರಿತು ಓದಿದಾಗ, ಕೆಲವೊಮ್ಮೆ ನೈತಿಕತೆಯ ಅಧಃಪತನ ಅಂದೂ ಇಂದೂ ಹೇಗೆಲ್ಲಾ ಆಗುತ್ತಿದೆ ಎಂದು ಕಳವಳವಾಗುತ್ತದೆ.
ಗೆಳೆಯನ ಸಾವಿನ ಸುದ್ದಿ ತಿಳಿದು ಭಾರತಕ್ಕೆ ಬಂದ ಗೌರೀಶನಿಗೆ ಬದಲಾದ ಕಾಮಿನಿ ತನ್ನನ್ನು ಮದುವೆಯಾಗುವಂತೆ ಬೇಡಿ ಕೊಂಡಿದ್ದೇಕೆ? ಇಲ್ಲಿ ಬದುಕು ಮತ್ತು ಸಾವಿನ ಬಗೆಗಿನ ವಿಶ್ಲೇಷಣೆಗಳು ಸಾಕಷ್ಟಿದೆ. ಕೊನೆಯಲ್ಲಿ ಗೌರೀಶನ ನಿಲುವೇನು?. ತಿಳಿಯಲು ಕಾದಂಬರಿಯನ್ನು ಓದಿ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
