ಮೈಸೂರು ರಾಜ್ಯ 1956 ನವೆಂಬರ್ 1 ರಂದು ಉದಯವಾಯಿತು. ಕನ್ನಡ ಮಾತಾಡುವ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಮಾಡಲಾಗಿತ್ತು. – ಅರುಣ ಪ್ರಸಾದ್, ತಪ್ಪದೆ ಮುಂದೆ ಓದಿ…
1973 ನವೆಂಬರ್ 1 ರಂದು ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡುತ್ತಾರೆ ಅವತ್ತು ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಮಂತ್ರಿ ಆಗಿದ್ದವರು ಶಿವಮೊಗ್ಗ ಜಿಲ್ಲೆಯ ಎ.ಆರ್. ಬದರಿನಾರಾಯಣಯ್ಯಂಗಾರ್ (ಆನಂದಪುರಂ ರಾಮಕೃಷ್ಣಯ್ಯಂಗಾರ್ ಬದರಿನಾರಾಯಣ್ ಅಯ್ಯಂಗಾರ್ ಎಂಬುದು ಅವರ ಪೂರ್ಣ ಹೆಸರು) ಈ ಐತಿಹಾಸಿಕ ಕರ್ನಾಟಕ ನಾಮಕರಣದಲ್ಲಿ ಬದರಿನಾರಾಯಣರ ಪಾತ್ರ ಕೂಡ ಮುಖ್ಯಮಂತ್ರಿ ದೇವರಾಜ ಅರಸರಷ್ಟೆ ಮಹತ್ವದಾಗಿತ್ತು.

ಈ ಐತಿಹಾಸಿಕ ಕ್ಷಣದ ಪೋಟೋ ಇಲ್ಲಿ ಹಾಕಿದೆ ಅದರಲ್ಲಿ ಕರ್ನಾಟಕ ನಾಮ ಫಲಕ ದೇವರಾಜ ಅರಸರು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಕರ್ನಾಟಕ ನಾಮಕರಣದ ರೂವಾರಿ ಆಗಿನ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿಗಳಾದ ನಮ್ಮ ಶಿವಮೊಗ್ಗ ಜಿಲ್ಲೆಯ ಆನಂದಪುರಂನ ಹೆಮ್ಮೆಯ ಎ.ಆರ್. ಬದರಿನಾರಾಯಣಯ್ಯಂಗಾರ್ ಇದ್ದಾರೆ.
ಇವರು ಪ್ರಾಥಮಿಕ ಶಿಕ್ಷಣ ಪಡೆದ ಸರ್ಕಾರಿ ಶಾಲೆ ಆನಂದಪುರಂನಲ್ಲಿ ಈಗಲೂ ಕಾರ್ಯನಿರ್ವಹಿಸುತ್ತಿದೆ.

2014 ನವೆಂಬರ್ 1 ರ ತನಕ ನಮ್ಮ ಜಿಲ್ಲೆ ಶಿಮೊಗ್ಗ ಅಂತ ಆಗಿತ್ತು, ಕೆಲವರು ಶಿಮೊಗ್ಗ – ಶಿವಮೊಗ್ಗ ಅಂತಲೂ ಕರೆಯುತ್ತಿದ್ದರು ಬರೆಯುತ್ತಿದ್ದರು. 2014 ನವೆಂಬರ್ 1 ರಂದು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದ 12 ನಗರ/ಪಟ್ಟಣಗಳ ಹೆಸರು ಬದಲಿಸಿದರು ಇದರಿಂದ ಶಿಮೊಗ್ಗ ಶಿವಮೊಗ್ಗ ಎ೦ದು ಅಧಿಕೃತವಾಯಿತು.
ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಶಿವಮೊಗ್ಗ ಜಿಲ್ಲೆಯ ರಾಷ್ಟ್ರಕವಿ ಕುವೆಂಪು ಎನ್ನುವುದು ಕೂಡ ಹೆಮ್ಮೆಯ ವಿಷಯವೇ ಆಗಿದೆ.
- ಅರುಣ ಪ್ರಸಾದ್
