ಅಂತರವಿದ್ದರೂ ಆಪ್ತರು ನಾವು!

ವಿರುದ್ಧ ದಿಕ್ಕಲಿ ಚಲಿಸಿದರೇನಂತೆ; ನಾನಿಡುವ ಪ್ರತಿ ಹೆಜ್ಜೆಯಲೂ ನೀ ಜೊತೆಯಾಗುವೆ…ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಲೋಕ ರುಜು ಹಾಕುವ
ನಂಟಿನ ಸಂಗಾತಿಗಳಂತೆ
ಹಗಲು ರಾತ್ರಿ ಒಟ್ಟಿಗೆ
ಕಳೆಯಲಾಗದಿರೇನಂತೆ;
ನನ್ನ ಪ್ರತಿ ಉಸಿರಲಿ‌ ನೀನಿರುವೆ!

ವಾಸ್ತವದಲಿ ಇಬ್ಬರ
ಬದುಕಿನ ಪಥಗಳು ವಿರುದ್ಧ ದಿಕ್ಕಲಿ
ಚಲಿಸಿದರೇನಂತೆ;
ನಾನಿಡುವ ಪ್ರತಿ
ಹೆಜ್ಜೆಯಲೂ ನೀ ಜೊತೆಯಾಗುವೆ!

ನಿನ್ನ ದನಿಗೆ ನಾ;ನನ್ನ ದನಿಗೆ ನೀ
ಕಿವಿಯಾಗದಿರೇನಂತೆ;
ನಿನ್ನೆದೆಯೊಳಗಿನ
ಅನುರಾಗದ ಪಿಸುಮಾತನು
ಸದ್ದಿಲ್ಲದೇ ನಾ ಆಲಿಸುತಿರುವೆ!

ತಲೆಯೆತ್ತಿ ನೋಡಿದರೆ,
ಬಾನು ಭುವಿಯ ಅಂತರ ಅಬ್ಬಾ!
ಅನಿಸಿದರೇನಂತೆ ನನ್ನೊಲವೇ;
ದೃಷ್ಟಿ ಬದಲಿಸಿ ದೂರದಿ ನೋಡು,
ಒಂದನೊಂದು ಬಾಚಿತಬ್ಬಿಲ್ಲವೇ!

ಅಳತೆಗೆ ಸಿಗದಷ್ಟು ಅಂತರವಿದ್ದರೂ;
ಆಪ್ತರಂತೆ ಕಾಣುವ ಬಾನು ಭುವಿಯಂತೆ
ನಾವಿಲ್ಲವೇ ನನ್ನೊಲವೇ ನಾವಿಲ್ಲವೇ!


  • ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW