ಮೈಸೂರು ಆಡಳಿತದಲ್ಲಿ ನೂರಾರು ಮಂದಿ ಸೇವೆ ಸಲ್ಲಿಸಿದ್ದರು, ಅವರು ಎಲ್ಲಿಯೂ ಪ್ರಸ್ತಾಪಗೊಳ್ಳದೆ ಎಲೆ ಮರೆಯಾಗಿ ಉಳಿದು ಹೋಗಿದ್ದಾರೆ.ಅವರ ಕುರಿತು ಮಣಿಕಂಠ ಟಿ ಮಣಿ ಅವರು ‘ನಭೂತೋ ನಭವಿಷ್ಯತಿ’ ಪುಸ್ತಕದಲ್ಲಿ ಮಾಹಿತಿ ಸಂಗ್ರಹಿಸಿ ಅದನ್ನು ಪುಸ್ತಕರೂಪದಲ್ಲಿ ಸದ್ಯದಲ್ಲಿ ಹೊರ ತರಲಿದ್ದಾರೆ, ಪುಸ್ತಕವನ್ನು ಮುಂಗಡವಾಗಿ ಕಾಯ್ದಿರಿಸಿರಿ…
ಪುಸ್ತಕ : ನಭೂತೋ ನಭವಿಷ್ಯತಿ
ಲೇಖಕರು : ಮಣಿಕಂಠ ಟಿ ಮಣಿ
ಪ್ರಕಾಶಕರು :
ಮುಂಗಡ ಪುಸ್ತಕ ಖರೀದಿ ಬೆಲೆ : ೨೫೦.೦೦
ಖರೀದಿಗಾಗಿ: Manikanta T Mani
ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಹಿಡಿದು ಯದುವಂಶದ ಕೊನೆಯ ಮಹಾರಾಜರಾದ ಜಯಚಾಮರಾಜ ಒಡೆಯರ ಆಡಳಿತದ ಅವಧಿಯವರೆಗೆ ಅನೇಕ ಶ್ರೇಷ್ಠ ಮಹನೀಯರು ಮೈಸೂರು ರಾಜ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅಂತಹ ಕೆಲವರ ಹೆಸರುಗಳನ್ನು ಮೈಸೂರು ಚರಿತ್ರೆಗೆ ಸಂಬಂಧಪಟ್ಟ ಇತಿಹಾಸದ ಪುಸ್ತಕಗಳಲ್ಲಿ ಪ್ರಸ್ತಾಪಿಸಿರುವುದನ್ನು ನಾವು ಕಾಣುತ್ತೇವೆ. ಆಡಳಿತದ ಪ್ರಮುಖ ಹುದ್ದೆಯಲ್ಲಿದ್ದು ಗಣನೀಯ ಸೇವೆ ಸಲ್ಲಿಸಿದ್ದ ಕೆಲವರ ಹೆಸರುಗಳು ಅವುಗಳಲ್ಲಿ ಕಂಡು ಬಂದರೂ, ಅವರಂತೆಯೇ ಸೇವೆ. ಸಲ್ಲಿಸಿರುವ ಇತರ ನೂರಾರು ಮಂದಿ ಎಲ್ಲಿಯೂ ಪ್ರಸ್ತಾಪಗೊಳ್ಳದೆ ಎಲೆ ಮರೆಯಾಗಿ ಉಳಿದು ಹೋಗಿದ್ದಾರೆ. ನೆನಪಿನ ಅಂಗಳದಿಂದ ಜಾರಿಹೋಗಿದ್ದಾರೆ. ಹಾಗೆ ಸೇವೆ ಸಲ್ಲಿಸಿದವರಲ್ಲಿ ಹಲವಾರು ಮಂದಿ ಅಂದಿಗೆ ಖ್ಯಾತನಾಮರಾಗಿದ್ದರೂ ಇಂದು ಅವರ ಬಗ್ಗೆ ನಮಗೆ ಹೆಚ್ಚು ತಿಳಿಯದೆ ಹೋಗಿದೆ. ಮೈಸೂರಿನ ಬಗ್ಗೆ ಪ್ರಸ್ತಾಪ ಮಾಡುವಾಗ ಕೆಲವೇ ಮಂದಿಯನ್ನು ಸಾಮಾನ್ಯವಾಗಿ ಪ್ರಸ್ತಾಪ ಮಾಡುವುದನ್ನು ನಾವು ಕಾಣುತ್ತೇವೆ.

ಅವರುಗಳು ಸೃಷ್ಟಿಸಿದ, ಇಲ್ಲವೇ ಹುಟ್ಟುಹಾಕಿದ ವ್ಯವಸ್ಥೆ ಇಂದು ಇಲ್ಲದಿರಬಹುದು. ಆದರೆ ಅದು ಅಂದಿಗೆ ಒಂದು ಮಹತ್ವದ ಸೇವೆಯಾಗಿತ್ತು, ಕೊಡುಗೆಯಾಗಿತ್ತು. ಅದೇ ರೀತಿ ಮಹಾರಾಜರ ಅವಧಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಸೇವೆ ಸಲ್ಲಿಸಿದ ದಿವಾನರುಗಳ ಪೈಕಿ ಕೇವಲ ಒಂದಿಬ್ಬರನ್ನೇ ಹೆಸರಿಸುತ್ತೇವೆ. ಅವರ ಸೇವೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತೇವೆ. ಆದರೆ ಅವರ ಕೈಕೆಳಗೆ ಸೇವೆ ಮಾಡಿ ಅವರ ಸಾಧನೆಗಳಲ್ಲಿ ನೆರವಾಗಿ ದುಡಿದ ಅಧಿಕಾರಿಗಳನ್ನು ಹೆಸರಿಸುವುದಿಲ್ಲ. ಪ್ರಮುಖ ಸ್ಥಾನದಲ್ಲಿದ್ದ ಇತರರ ಸೇವೆಯನ್ನು ಹೆಚ್ಚು ಗುರುತಿಸುವುದಿಲ್ಲ. ಇಂತಹವರ ಸೇವೆಯನ್ನು ನೆನೆಯುವುದೇ ಒಂದು ಪುಣ್ಯದ ಕೆಲಸ. ಇಂತಹವರ ನಿಸ್ಪೃಹ, ನಿಸ್ವಾರ್ಥ ಸೇವೆಯಿಂದ ಮೈಸೂರು, ಮಹಾರಾಜರು ಖ್ಯಾತಿ ಪಡೆಯುವಂತಾಯಿತು. ಮೈಸೂರು ರಾಮರಾಜ್ಯವಾಗಲು ಸಾಧ್ಯವಾಯಿತು. ಮೈಸೂರು ರಾಮರಾಜ್ಯವಾದದ್ದು ಕೇವಲ ಒಂದಿಬ್ಬರು ಅಧಿಕಾರಿಗಳಿಂದಲ್ಲ. ಮಹಾರಾಜರೊಬ್ಬರ ಸಲಹೆ, ಮಾರ್ಗದರ್ಶನದಿಂದ ಮಾತ್ರವಲ್ಲ. ಅದರ ಹಿಂದೆ ನೂರಾರು ಜನರ ದುಡಿಮೆ ಇದೆ, ಶ್ರಮವಿದೆ. ಅಂತಹ ಕೆಲವು ಗಣ್ಯರ ಹೆಸರುಗಳನ್ನು ಹಲವು ಪ್ರಮುಖ ಜಾಗಗಳಿಗೆ ಇಡಲಾಗಿದೆ. ಆದರೆ ಅವರು ಯಾರೆಂಬುದು ನಮಗೆ ತಿಳಿಯದು. ಹಾಗೆ ಹೆಸರಿಡಲು ಕಾರಣವೇನೆಂದು ತಿಳಿಯದು.

ಹೀಗಾಗಿ ಆ ಹೆಸರುಗಳು ಅಳಿಸಿಹೋಗುತ್ತಿವೆ ಅವರುಗಳ ಸೇವೆ, ತ್ಯಾಗದ ಅರಿವಿಲ್ಲದೆ ಅವರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಬದಲಿಗೆ ಹೊಸ ಹೆಸರುಗಳು ಕಾಣಿಸಿಕೊಳ್ಳುತ್ತಿವೆ. ಹಾಗೆ ಮೈಸೂರಿನ ಅಭಿವೃದ್ಧಿಗೆ ಶ್ರಮಿಸಿದ ಹಲವಾರು ಮಹನೀಯರು ಎಲೆಮರೆಯ ಕಾಯಿಗಳಂತೆ ಉಳಿದುಹೋಗಿದ್ದಾರೆ. ಅವರುಗಳ ಬಗ್ಗೆ ಹೆಚ್ಚು ಮಾಹಿತಿಯೂ ಸುಲಭವಾಗಿ ದೊರೆಯದು. ದೊರೆತರೂ ಅಪೂರ್ಣ. ಒಂದು ಲೇಖನಕ್ಕೆ ಆಗಬಹುದಾದಷ್ಟು ಮಾಹಿತಿಯೂ ಲಭ್ಯವಾಗುವುದಿಲ್ಲ. ಇತಿಹಾಸದ ಪುಸ್ತಕಗಳಲ್ಲಿ ಅಲ್ಲಿ-ಇಲ್ಲಿ ಅವರುಗಳ ಬಗ್ಗೆ ಮಾಹಿತಿ ಅಡಗಿ ಹೋಗಿದ್ದರೂ, ಅದೂ ಕೂಡ ಅಲ್ಪ – ಸ್ವಲ್ಪ ಮಾತ್ರ ಕೆಲವರ ಮಾಹಿತಿ ಅವರ ಕುಟುಂಬಗಳ ನೆನಪಿನಲ್ಲಿ…
- ಮಣಿಕಂಠ ಟಿ ಮಣಿ
