ಘಟಪ್ರಭಾ ನದಿಯ ಕೃಪೆಯಿಂದ ನೂರಾರು ಪಕ್ಷಿಗಳು ಕೂಡ ವಲಸೆ ಬರುತ್ತವೆ. ಇಲ್ಲಿ ಹೆಚ್ಚಾಗಿ ಪಕ್ಷಿ ಪ್ರೇಮಿಗಳು, ಪರಿಸರ ಪ್ರಿಯರಿಗೆ ಸ್ವರ್ಗವಾಗಿದೆ. ಇದಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಕೂಡ ಇದರ ಅಭಿವೃದ್ಧಿಗೆ ಶ್ರಮಿಸಬೇಕು.ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಘಟಪ್ರಭಾ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…
ಸುತ್ತಲಿನ ಪರಿಸರದ ಜೀವಕೆ ಉಸಿರಾಗುತ, ಹಸಿರ ಸಿರಿಯನು ಸದಾ ರಕ್ಷಿಸುತ ನಂಬಿದ ನೂರಾರು ಹೊಲಗಳ ಸಂಜೀವಿನಿಯಾಗಿ ದಣಿದ ಹಕ್ಕಿಗಳ ದಾಹ ನೀಗಿಸುವ ಧಾತೆಯಾಗಿ ನೀರಿನ ದಾಹವನ್ನು ನೀಗಿಸುತ ಪೊರೆಯುತಲಿರುವ ನಿಸರ್ಗದ ರಮಣೀಯತೆಗೆ ಕಾರಣವಾಗಿಹ ಗಂಗಾ ಮಾತೆಯ ಕೂಸು ಘಟಪ್ರಭಾ ನದಿ.
ಇಲ್ಲಿನ ಹಸಿರ ಸಿರಿಯ ಸೊಬಗನ್ನು ಸವಿಯುತ್ತಿದ್ದರೆ ಕಂಗಳಿಗೆ ಆಯಾಸವೆ ಇಲ್ಲ. ದಟ್ಟವಾದ ಗಿಡಮರಗಳಿಂದ ಆವೃತವಾಗಿದ್ದು.ನೋಡು ನೋಡುತ್ತಿದಂತೆಯೇ ನಮ್ಮಲ್ಲೇ ನಾವೇ ಮೈ ಮರೆಯುತ್ತೇವೆ.ಅಷ್ಟರ ಮಟ್ಟಿಗೆ ನಯನ ಮನೋಹರವಾಗಿದೆ.ಮುದಗೊಳಿಸುವ ಶಾಂತಿಯ ನೆಲೆಯಾಗಿದೆ. ರಭಸದಿ ನೀರು ಧುಮುಕುವ ದೃಶ್ಯವು ಎಂಥವರನ್ನೂ ಸೋಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತದೆ.ಧರೆಯ ಕೋಮಲತೆಯ ಸೌಂದರ್ಯಕ್ಕೆ ಹೊಳಪು ನೀಡುತಲಿ ತನ್ನನ್ನು ತಾನೇ ಅರ್ಪಿಸಿಕೊಂಡು ಹಾಲಿನಂತೆ ಸದಾ ತನ್ನೆಡೆಗೆ ಆಕರ್ಷಿಸುವ ಜಲಪಾತವನ್ನು
ಸೃಷ್ಟಿಸಿ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿ ರೂಪಿಸಿದ್ದಲ್ಲದೆ ನೂರಾರು ಜನರ ಜೀವನಕೆ ಆಧಾರವಾಗಿದೆ.ರವಿಯ ಹೊಂಬಿಸಿಲಿನ ಬಿಂಬಕ್ಕೆ ಇಡೀ ನದಿಗೆ ಹೊನ್ನಿನ ಹೊದಿಕೆ ಹೊಚ್ಚಿದಂತೆ ಕಾಣುತ್ತದೆ.ಪ್ರಕೃತಿಯ ವಿಸ್ಮಯದ ಚಮತ್ಕಾರಗಳನು ಆಸ್ವಾದಿಸಲು ಈ ನದಿಯ ತಟವು ಆಗರವಾಗಿದೆ.ಪ್ರಾಕೃತಿಕ ಭವ್ಯ ಮಡಿಲಿನ ಕಣಜವಿದು.

ಈ ನದಿಯ ಉಗಮ ಸ್ಥಾನವನ್ನು ಹೇಳಬೇಕೆಂದರೆ ನಿಖರವಾಗಿ ತಿಳಿದು ಬಂದಿಲ್ಲ.ಆದರೆ ಕೆಲವು ಮೂಲಗಳ ಪ್ರಕಾರ ಸಹ್ಯಾದ್ರಿಯ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 884 ಮಿ ಎತ್ತರದಲ್ಲಿ ಜನಿಸುತ್ತದೆ.ಹಾಗೆಯೇ ಇದು ಸುಮಾರು 283 ಕಿಮಿನಷ್ಟು ಹರಿದು ಕಲಾದಗಿ ಗ್ರಾಮದಿಂದ(ವಿಜಯಪುರ ಜಿಲ್ಲೆ)ಈಶಾನ್ಯ ದಿಕ್ಕಿಗೆ 35 ಕಿಮೀ ದೂರ ಹರಿದು ಕೃಷ್ಣಾ ನದಿಯನ್ನು ಕೂಡುತ್ತದೆ.ಇದು ಕೃಷ್ಣಾನದಿಯ ಅತ್ಯಂತ ಪ್ರಮುಖವಾದ ಉಪನದಿಯಾಗಿದೆ.ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳು ಘಟಪ್ರಭಾದ ನದಿಯ ಪ್ರಮುಖ ಉಪನದಿಗಳಾಗಿವೆ. ಅಲ್ಲದೆ ಲಕ್ಷಾಂತರ ಜನರ ಪಾಲಿನ ಜೀವನದಿಯಾಗಿದೆ.42500 ಹೆಕ್ಟೇರ್ ಭೂಮಿಗೆ ನೀರಾವರಿಯ ಸೌಲಭ್ಯವನ್ನು ಒದಗಿಸಿ ರೈತರ ಬಾಳನು ಬೆಳಗುತ್ತಿದೆ.ಅಲ್ಲದೆ ಕೃಷಿ ವಲಯಕ್ಕೆ ಸಾಕಷ್ಟು ರೀತಿಯಲ್ಲಿ ಸೌಕರ್ಯಗಳನ್ನು ಒದಗಿಸಿದೆ.176
ಅಗಾಧವಾದ ಸಂಪನ್ಮೂಲಗಳು ಸುತ್ತಲೂ ಆವರಿಸಿದ್ದು ಅತ್ಯಂತ ಹೇರಳವಾಗಿದ್ದು ಪ್ರಾಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.ಅಲ್ಲದೆ ವೈವಿಧ್ಯಮಯವಾದ ಗಿಡ ಮೂಲಿಕೆಗಳು ಕೂಡ ಇಲ್ಲಿ ಅಲ್ಲಲ್ಲಿ ಕಂಡು ಬರುತ್ತವೆ.ಮೊದಲಿನ ಜನರು ಸಣ್ಣ ಪುಟ್ಟ ಗಾಯಕ್ಕೆ ಅಥವಾ ಇತರ ಕಾಯಿಲೆಗಳಿಗೆ ಇವುಗಳ ಬೇರು ಎಲೆಗಳನ್ನು ಉಪಯೋಗಿಸಿ ಶಮನ ಮಾಡಿಕೊಳ್ಳುತ್ತಾರೆ
ಹಾಗಾಗಿ ನದಿಯು ಜೀವಸಂಕುಲಕ್ಕಷ್ಟೇ ಅಲ್ಲದೆ ವೈದ್ಯಕೀಯ ರೀತಿಯಲ್ಲಿಯೂ ಸಹಕಾರಿಯಾಗಿದೆ.215

ಘಟಪ್ರಭಾ ನದಿಯ ಕೃಪೆಯಿಂದ ನೂರಾರು ಪಕ್ಷಿಗಳು ಕೂಡ ವಲಸೆ ಬರುತ್ತವೆ. ಅಳಿವಿನಂಚಿನಲ್ಲಿರುವ ಪಕ್ಷಿಗಳಿಗೆ ಆಶ್ರಯ ತಾಣವಾಗಿ ನೆಲೆಯನ್ನು ಕಲ್ಪಿಸಿದೆ.ಕೊಲ್ಲಾಪುರ ಮತ್ತು ನರಗುಂದ ರಸ್ತೆ ಸಮೀಪವಿರುವ ಈ ಧಾಮವು ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುವಷ್ಟು ಪ್ರಸಿದ್ಧವಾಗಿದೆ.ನಾಡಿನ ವಿವಿಧ ಮೂಲೆಗಳಿಂದ ಜನರು ಭೇಟಿ ನೀಡುತ್ತಾರೆ.ದೇಶ ಮಾತ್ರವಲ್ಲದೆ ವಿದೇಶಿಯ ಪಕ್ಷಿಗಳು ನೋಡಲು ಕಾಣ ಸಿಗುತ್ತವೆ.ಅದರಲ್ಲಿಯೂ ಯುರೋಪಿಯನ್ ನ ಪ್ರಸಿದ್ಧ ಪಕ್ಷಿಯಾದ ವೈಟ್ ಸ್ಟಾಕ್ ಮತ್ತು ಡೆಮೋಸೆಲ್ಲೆ ಕ್ರೇನ್ ಈ ಪ್ರದೇಶಕ್ಕೆ ವಲಸೆ ಬರುವ ಹಕ್ಕಿಗಳಲ್ಲೇ ಅತ್ಯಂತ ಜನಪ್ರಿಯವಾಗಿದೆ.ಅಲ್ಲದೆ ಸ್ಥಳೀಯ ಪಕ್ಷಿಗಳು ಹಾಗೂ ಇತರ ರೀತಿಯ ಪಕ್ಷಿ ಪ್ರಭೇಧಗಳು ಇಲ್ಲಿ ಕಂಡು ಬರುತ್ತವೆ. ಅಲ್ಲದೆ ಸಾಮಾನ್ಯವಾಗಿ ಕಂಡು ಬರುವ ಮುಂಗುಸಿ ಹಾವು ನವಿಲುಗಳು ಹಾಗೂ ಇತರ ರೀತಿಯ ಪ್ರಾಣಿ ಪ್ರಭೇಧಗಳು ಹೆಚ್ಚಾಗಿ ವಾಸಿಸಿವೆ.ಈ ಪಕ್ಷಿಧಾಮಕ್ಕೆ ವರ್ಷವಿಡಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ .ಇದು ನೂರಾರು ಏಕರೆಯ ಕೃಷಿ ಭೂಮಿಯನ್ನು ಹೊಂದಿದ್ದು ವನ್ಯ ಜೀವಿಗಳು ಮತ್ತು ನೈಸರ್ಗಿಕ ಪರಿಸರವು ಎಂಥವರನ್ನೂ ಆಕರ್ಷಿಸುತ್ತದೆ.ಇಲ್ಲಿ ಹೆಚ್ಚಾಗಿ ಪಕ್ಷಿ ಪ್ರೇಮಿಗಳು, ಪರಿಸರ ಪ್ರಿಯರಿಗೆ ಸ್ವರ್ಗವಾಗಿದೆ. ಇದಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಕೂಡ ಇದರ ಅಭಿವೃದ್ಧಿಗೆ ಶ್ರಮಿಸಬೇಕು.
ಈ ನದಿಯಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕಿದ್ದಲ್ಲದೆ. ವಿವಿಧ ಅಣೆಕಟ್ಟುಗಳನ್ನು ಕಟ್ಟಲಾಗಿದೆ ಅದರಲ್ಲಿಯೂ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ 1827ರಲ್ಲಿ ತಡೆಗೋಡೆ ನಿರ್ಮಿಸಿದ್ದು 71 ಕಿಮೀ ಉದ್ದದ ಕಾಲುವೆ ನಿರ್ಮಿಸಿ.42500 ಹೆಕ್ಟೇರ್ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.ಸ್ವಾತಂತ್ರ್ಯ ನಂತರ ಕರ್ನಾಟಕ ಸರ್ಕಾರವು ಈ ಕಾಲುವೆ ವಿಸ್ತರಿಸಿದ್ದು ಹಿಡಕಲ್ ಹತ್ತಿರದ ಜಲಾಶಯದಿಂದ ಬೃಹತ್ ಪ್ರಮಾಣದ ನೀರನ್ನು ಸಂಗ್ರಹಿಸಲಾಗುತ್ತದೆ.ಒಟ್ಟಿನಲ್ಲಿ ವಿವಿಧ ರೀತಿಯ ಕಾಲುಗಳನ್ನು ನಿರ್ಮಾಣ ಮಾಡುವುದರ ಮೂಲಕ 3.31,000 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತಿದೆ.

ಈ ನದಿಯು 53ಮೀ ಆಳಕ್ಕೆ ಧುಮುಕುತ ಸುಂದರ ಗೋಕಾಕ್ ಜಲಪಾತವನ್ನು ಸೃಷ್ಟಿಸಿದೆ. ಜಲಪಾತದ ಮೇಲ್ಗಡೆಯ್ಕ್ ಹಳೆ ತೂಗುಸೇತುವೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಈ ಜಲಪಾತದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತನ್ನು ಉತ್ಪಾದಿಸಿ ವಿದ್ಯುತ್ತಿನ ಕೊರತೆಯನ್ನು ನೀಗಿಸಿ ಮನೆಗಳಿಗೆ ಬೆಳಕನು ಕರುಣಿಸಿದೆ.
ಒಟ್ಟಿನಲ್ಲಿ ಘಟಪ್ರಭೆಯು ಮೈದುಂಬಿ ಹರಿಯುತ ಸದಾ ನೋಡುಗರನ್ನು ಆಕರ್ಷಿಸುತ್ತದೆ.ಸರ್ಕಾರವು ಕೂಡ ಈ ನದಿಯನ್ನು ಇನ್ನು ಹೆಚ್ಚು ಅಭಿವೃದ್ಧಿ ಪಡಿಸುತ್ತ ಇದರ ರಕ್ಷಣೆಗೆ ಸದಾ ಸಿದ್ಧವಾಗಬೇಕು.ಹೀಗೆ ಘಟಪ್ರಭೆ ಸಕಲ ಜೀವರಾಶಿಗಳಿಗೆ ವರವಾಗಿ ಸದಾ ಪೊರೆಯುತಿದೆ.
ಹಿಂದಿನ ಸಂಚಿಕೆಗಳು :
- ಮಧ್ಯ ಭಾರತದ ಜೀವದಾತೆ : ಗೋದಾವರಿ ನದಿ
- ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು : ಭೀಮಾ ನದಿ
- ದೈವೀಕತೆಗೆ ಹೆಸರು ದೇವತೆಗಳ ಉಸಿರು – ಸರಸ್ವತಿ ನದಿ
- ನಿಸ್ವಾರ್ಥಕ್ಕೆ ಹೆಸರು ಸ್ನೇಹಕ್ಕೆ ಉಸಿರು – ವೇದಾವತಿ ನದಿ
- ಭಾರತದ ಮೇರು ಜೀವಸಂಕುಲದ ಉಸಿರು – ಮಹಾನದಿ
- ಶಿರಸಿಯ ಜೀವನಾಡಿ ಪಶ್ಚಿಮಘಟ್ಟದ ಕುಡಿ – ಅಘನಾಶಿನಿ ನದಿ
- ಶಿವಮೊಗ್ಗದ ಉಸಿರು ನಾಡಿಗೆ ಹೆಸರು – ಶರಾವತಿ
- ಉತ್ತರ ಕನ್ನಡದ ಉಸಿರು ವಿದ್ಯುತ್ ಗೆ ಹೆಸರು -ಕಾಳಿ ನದಿ
- ಕೇರಳದ ರಾಣಿ ಕನ್ನಡನಾಡಿನ ರಮಣಿ – ಕಪಿಲಾ ನದಿ
- ಮಂಗಳೂರಿನ ಜೀವನಾಡಿ – ನೇತ್ರಾವತಿ
- ಕರುನಾಡಿನ ಜೀವ – ತುಂಗಭದ್ರೆ
- ಪೂಜ್ಯ ಭಾವದ ನೆಲೆ ದೇವನ ಸುತ್ತಿದ ಗಂಗೆಯ ಸೆಲೆ_ಕೃಷ್ಣಾ ನದಿ
- ಅವಿನಾಶ ಸೆರೆಮನಿ
