ಮೈ ಕೈ ನೋವಿಗೆ ನಾಗಾರ್ಜುನ ಎಲೆಯ ಚಿಗುರು ತಂಬುಳಿ ಒಳ್ಳೆಯದು, ಅದನ್ನು ಮಾಡುವ ವಿಧಾನವನ್ನು ವೀಣಾ ಉದಯ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ ಮನೆಯಲ್ಲಿ ಮಾಡಿ ನೋಡಿ…
ಬೇಕಾಗುವ ಸಾಮಗ್ರಿಗಳು :
ನಾಗಾರ್ಜುನ ಎಲೆ – ಸ್ವಲ್ಪ
ತುಪ್ಪ – ಒಗ್ಗರಣೆಗೆ
ಜೀರಿಗೆ – ಸ್ವಲ್ಪ
ತೆಂಗಿನ ಕಾಯಿ ತುರಿ – ಸ್ವಲ್ಪ
ಮಜ್ಜಿಗೆ – ೧ ಕಪ್


ಮಾಡುವ ವಿಧಾನ :
ನಾಗಾರ್ಜುನ ಎಲೆಯ ಚಿಗುರನ್ನು ತೆಗೆದು ಸ್ವಚ್ಛ ಮಾಡಿಕೊಳ್ಳಬೇಕು. ಸ್ಟೋವ್ ಮೇಲೆ ಬಾಣಲೆಯನ್ನಿಟ್ಟು, ಅದರಲ್ಲಿ ಸ್ವಲ್ಪ ತುಪ್ಪ, ಸ್ವಲ್ಪ ಜೀರಿಗೆ ಹಾಕಿ, ಸ್ವಚ್ಛ ಮಡಿದ ಹುರಿದು ನಾಗಾರ್ಜುನ ಎಲೆಯ ಚಿಗುರನ್ನು ಹಾಕಿ ಸಣ್ಣಗೆ ಹುರಿದುಕೊಂಡು ಅದನ್ನು ಒಂದು ಕಪ್ ತೆಂಗಿನ ಕಾಯಿ ತುರಿಯ ಜೊತೆ ಜಾರ್ ನೊಳಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು, ನಂತರ ಒಂದು ಪಾತ್ರೆಯಲ್ಲಿ ಎಲ್ಲ ಮಿಶ್ರಣವನ್ನು ಸೇರಿಸಿ ಅದಕ್ಕೆ ಒಂದು ಕಪ್ ಮಜ್ಜಿಗೆ ಹಾಕಿದರೆ ನಾಗಾರ್ಜುನ ಎಲೆಯ ತಂಬುಳಿ ಸಿದ್ದ . ಇದು ಮೈ ಕೈ ನೋವಿಗೆ ಬಹಳ ಒಳ್ಳೇದು
- ವೀಣಾ ಉದಯ ಪಟ್ಟಾಜೆ
