ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಶರಷಟ್ಪದಿ ವಿರಚಿತ ‘ನಳ ಚರಿತೆ’ ಕೃತಿಯ ಕುರಿತು ಬಿ ಸತ್ಯವತಿ ಭಟ್ ಕೊಳಚಪ್ಪು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ನಳ ಚರಿತೆ
ಲೇಖಕರು : ಚನ್ನಕೇಶವ ಜಿ ಲಾಳನಕಟ್ಟೆ
ಪ್ರಕಾರ : ಕವನ ಸಂಕಲನ
ಕನ್ನಡ ಸಾಹಿತ್ಯಲೋಕದಲ್ಲಿ ಮೊದಲ ಬಾರಿಗೆ ಶರ ಷಟ್ಪದಿಯಲ್ಲಿ ಕೃತಿ ರಚನೆ. ಹಿರಿಯ ಸಾಹಿತಿ ಶ್ರೀಯುತ ಚೆನ್ನಕೇಶವರು ನನ್ನ ಆತ್ಮೀಯರಲ್ಲೊಬ್ಬರು. ಅವರ ಸಂಭೋದನೆಯ “ಅಮ್ಮಾ” ಕರೆಯು ಹೃದಯ ತಳವನ್ನು ಮುಟ್ಟುವಷ್ಟೇ ಅಪ್ಯಾಯಮಾನ.

ಇವರು ಸಾಹಿತ್ಯಲೋಕಕ್ಕೆ ಚಿರ ಪರಿಚಿತರು. ಇವರ ಕೆಲವು ಕೃತಿಗಳು ಈಗಾಗಲೇ ಬೆಳಕು ಕಂಡಿದ್ದು ಪ್ರಾಜ್ಞರ, ಪಂಡಿತರ ಮನ್ನಣೆ ಪಡೆದಿದೆ ಎನ್ನುವುದು ಅವರ ಸಾಹಿತ್ಯ ಹೆಜ್ಜೆಗಳ ಗಟ್ಟಿ ಗುರುತಿಗೆ ಜ್ವಲಂತ ಸಾಕ್ಷಿ..ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಇವರದು ಎತ್ತಿದ ಕೈ ಎನ್ನಲು ಹೆಮ್ಮೆಯೊಂದಿಗೆ ಅಭಿಮಾನ ಸಂತೋಷದ ಬೆರಕೆಯೂ ಇದೆ.
ಪ್ರಕೃತ ಮುನ್ನಲೆಗೆ ಬರುತ್ತಿರುವ ಛಂದೋಬದ್ಧ ಷಟ್ಪದಿಗಳಲ್ಲೂ ಇವರು ಹಿಂದೆ ಬಿದ್ದಿಲ್ಲವೆನ್ನುವುದಕ್ಕೆ ಶರ ಷಟ್ಪದಿ ವಿರಚಿತ ಇವರ ‘ನಳ ಚರಿತೆ’ ಕಣ್ಣಮುಂದಿರುವುದೇ ಔನ್ನತ್ಯದ ಸಂಕೇತ.
ಒಂದೇ ಷಟ್ಪದಿಯಲ್ಲಿ ಸಂಪೂರ್ಣ ಒಂದೇ ವಿಷಯಾಧಾರಿತ ಪುಸ್ತಕ ಬರೆಯುದೆಂದರೆ ಅದೊಂದು ಮಹೋನ್ನತ ಸಾಧನೆ!ಅದೊಂದು ಆರಾಧನೆ!! ನಿರಂತರದ ತಪಸ್ಸು!!! ಆ ತಾಯಿ ಇವರ ಕೈಗಳಿಂದ ಅವುಗಳನ್ನು ಬರೆಸಿದ್ದಾಳೆ ಎಂದರೆ ಅದಕ್ಕಿಂತ ಹೆಚ್ಚಿನ ಆತ್ಮ ಸಂತೋಷ ಇನ್ನೇನು ಬೇಕು.

ಒಂದು ಅತ್ಯಮೂಲ್ಯ ಪುಸ್ತಕ ಓದದ ಕೊರತೆ ನಿಮ್ಮನ್ನು ಬಾಧಿಸದಂತೆ, ನೀವೂ ಈ ನಳಚರಿತೆಯನ್ನು ಕೊಂಡುಕೊಂಡು ಓದಿ ಪುನೀತರಾಗಿ ಎಂಬುದು ನನ್ನ ನಮ್ರ ವಿನಂತಿ.
ಇನ್ನೂ ಹೆಚ್ಚೆಚ್ಚು ಮೌಲ್ಯಯುತ ಸತ್ತ್ವಭರಿತ, ಜನಪ್ರೀತ ಹೊತ್ತಗೆಗಳು ಇವರಿಂದ ಹೊರಬರಲಿ..ಆ ಸರಸ್ವತಿಯ ಅನುಗ್ರಹ ಸದಾ ಇರಲಿ.
- ಬಿ ಸತ್ಯವತಿ ಭಟ್ ಕೊಳಚಪ್ಪು – ಮಂಗಳೂರು (ಹಿರಿಯಕ್ಕ)
