ಭಾರತದ ಸಂಸ್ಕೃತಿಯ ಬಿಂಬಿಸಿ ವಂದಿಸುವೆ ಗುರು ನಿನಗೆ ನಮೋ ನಮಃ…ಕವಿಯತ್ರಿ ಸರ್ವಮಂಗಳ ಜಯರಾಂ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಉಸಿರು ನೀಡಿದ ಜನ್ಮ ದಾತೆ
ನಮ್ಮೆಲ್ಲರ ಭಾಗ್ಯಧಾತೆ
ಜಗದೆಲ್ಲರ ಮೊದಲ ಗುರುವು
ತಾಯಿ ನುಡಿ ಕಲಿಸಿದ ಆದಿ ಗುರುವು
ವಂದಿಸುವೆ ಗುರು ನಿನಗೆ ನಮೋ ನಮಃ .
ಗುರಿ ತೋರಿದ ಗುರುವರ್ಯ ಶಂಕರಾಚಾರ್ಯ
ಜ್ಞಾನದ ಆಗರ ನಮ್ಮ ಗುರು ಮಹನೀಯ
ಸನ್ಮಾರ್ಗದ ವಾಹಕ ಗುರು ಆಚಾರ್ಯ
ಭಾವೈಕ್ಯತೆಯ ಬಂಧ ಬೆಸೆದ ಗುರು ಗೋವಿಂದ
ವಂದಿಸುವೆ ಗುರು ನಿನಗೆ ನಮೋ ನಮಃ.
ಕುಲದ ನೆಲೆಯ ತಿಳಿಸಿದ ಕನಕದಾಸ
ಕಾಯಕದಿ ಕೈಲಾಸ ಕಾಣೆಂದ ಬಸವಣ್ಣ
ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧ
ಭಾರತದ ಸಂಸ್ಕೃತಿಯ ಬಿಂಬಿಸಿದ ವಿವೇಕ
ವಂದಿಸುವೆ ಗುರು ನಿನಗೆ ನಮೋ ನಮಃ
ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸಿ
ಬದುಕಿನ ಅಂಧಕಾರವ ನೀಗಿ
ಪೂರ್ಣ ಪ್ರಜ್ಞ ಅರಿವಿನ ಪ್ರಭೆ ಬೀರಿ
ಯಶಸ್ವಿ ಬದುಕಿನ ಹರಿಕಾರನಾಗಿಹ ನಮ್ಮ ಗುರು
ವಂದಿಸುವೆ ಗುರು ನಿನಗೆ ನಮೋ ನಮಃ
- ಸರ್ವಮಂಗಳ ಜಯರಾಂ – ಶಿಕ್ಷಕಿ, ಗೌರಿಬಿದನೂರು.
