‘ನಮ್ಮ ಉಸಿರು ಕನ್ನಡ’ ಕವನ – ಸವಿತಾ ಮುದ್ಗಲ್

ಸವಿತಾ ಮುದ್ಗಲ್ ಅವರ ಲೇಖನಿಯಲ್ಲಿ ಅರಳಿದ ಕನ್ನಡದ ಕಂಪು, ತಪ್ಪದೆ ಮುಂದೆ ಓದಿ…

ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು
ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮವಾಯಿತು
ಪಠ್ಯ ಪುಸ್ತಕಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯು
ಬೆಳೆಸಲು ಕಲಿಸಲು ಉಳಿಸಲು ನಮ್ಮೆಲ್ಲರ ಶ್ರಮವು ನಿರತವು||

ಕನ್ನಡದ ಕಂದಮ್ಮಗಳಿರ ನೋಡಿರಿ ಕನ್ನಡ ನಾಡನ್ನು
ಕನ್ನಡದ ಕಂಪನ್ನ ಸಾರಿರಿ ಮರೆಯದೆ ಮನಸ್ಸನ್ನು
ಹಲವು ರಾಜಮನೆತನವಾಳಿದ ಕನ್ನಡ ನಾಡನು
ಉತ್ತರದಿಂದ ದಕ್ಷಿಣದವರೆಗೂ ಕಂಗೊಳಿಸುವ ಬೀಡನು||

ಚಾಲುಕ್ಯರಾಳಿದ ಬಾದಾಮಿಯ ಕೆತ್ತನೆಯ ಸೊಬಗು
ಐಹೊಳೆ ಪಟ್ಟದಕಲ್ಲಿನ ಕೆತ್ತನೆಯ ಬೆಡಗು
ರಾಯಚೂರು, ಕಿತ್ತೂರಿನ, ದುರ್ಗದ ಕೋಟೆಯ ಮೆರಗು
ನಭದ ನಕ್ಷತ್ರದಂತೆ ಮಿನುಗುವ ಮೈಸೂರು ಅರಮನೆ ಸೊಬಗು||

ಕನ್ನಡದ ಪಂಪ ರನ್ನ ವ್ಯಾಸರನ್ನು ಮರೆಯದೆ
ಜ್ಞಾನಪೀಠವನ್ನು ತಂದುಕೊಟ್ಟ ಕನ್ನಡದ ಕವಿಗಳಿಗೆ ನಮಿಸುತ
ಹಳೆಗನ್ನಡ,ಹೊಸಕನ್ನಡವೆನ್ನದೇ ಇರುವ ಕನ್ನಡವ ಉಳಿಸುತ
ಒಟ್ಟಾಗಿ ಎಲ್ಲರೂ ಆಚರಣೆ ಕನ್ನಡದ ಸಂಭ್ರಮ ಪಡುತ||

ಜಾತಿಮತದ ಲೆಕ್ಕವ ಮಾಡದೆ ಮುಂದಾಗಿ
ಶಾಂತಿ ಸಂಯಮಕೆ ಮನಸೆಲ್ಲ ಜೊತೆಯಾಗಿ
ಮನದಲ್ಲಿ ಮೂಡಲಿ ಸಂತೋಷದ ಕಹಳೆಯು
ಭುವನೇಶ್ವರಿ ತಾಯಿಗೆ ಸಿಗಲಿ ಶಾಂತಿ ನೆಮ್ಮದಿಯು||

ತೊದಲು ನುಡಿಯಲ್ಲೇ ಸಿಗುವುದು ಆನಂದ
ವರ್ಣನೆ ಮಾಡಲು ಬೇಕಲ್ಲವೇ ವರ್ಣಮಾಲೆಯ ಬಂಧ
ಕಲಿಯಿರಿ, ಕಲಿಸಿರಿ ಮಾತಾಡಿ ನಿತ್ಯ ಕನ್ನಡವನ್ನು
ಮಾತೃ ಭಾಷೆಯ ಆಡಳಿತದಲಿ ಇರಲಿ ರಾಜ್ಯದ ತುಂಬೆಲ್ಲ||

ಹರಿಯುವ ನದಿಗಳಿಗೆ,ಚಿಗುರುವ ವನಗಳಿಗೆ ಚೈತನ್ಯ ಬೇಕಾಗಿದೆ
ಹಾರಾಡುವ ಹಕ್ಕಿಗಳಿಗೆ, ತಟಸ್ತವಾದ ಕಲ್ಲುಗುಡ್ಡಗಳಿಗೆ ಸವಿನುಡಿವಂತಾಗಿದೆ
ಬಣ್ಣದ ಚಿಟ್ಟೆಗಳಿಗು,ಮೂಕ ಪ್ರಾಣಿಗಳಿಗೂ ರಂಗು ಕಾಣುವಂತಾಗಿದೆ
ಕರುನಾಡ ಕನ್ನಡದತಾಯಿ ಪಡುವ ರಾಜ್ಯೋತ್ಸವದ ಗಳಿಗೆಯ ಶುಭದಿನಕ್ಕಾಗಿ||


  • ಸವಿತಾ ಮುದ್ಗಲ್, ಗಂಗಾವತಿ

Leave a Reply

Home
Search
Menu
Recent
About
×