‘ವಿಪರ್ಯಾಸದ ನಾನಾ ಮುಖಗಳು’ ಕವನ

 

ಎರಡು ದೋಣಿಯಲಿ ಕಾಲಿಟ್ಟ ಪ್ರತಿಯೊಬ್ಬರದೂ ಇದೇ ಜಾಡು….ಕವಿ, ಲೇಖಕರಾದ ವೈ ಎಂ.ಯಾಕೊಳ್ಳಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಈ ಗದ್ದಲದ ಬದುಕು
ನಮ್ಮನದೆಷ್ಟು ಬಿಜಿಯಾಗಿಸಿದೆಯೆಂದರೆ
ಒಬ್ಬರನ್ನೊಬ್ಬರು
ನೋಡುವದು
ಮಾತಾಡಿಸುವದು ಇರಲಿ,
ಒಬ್ಬರ ಬಗ್ಗೆ ಒಬ್ಬರು
ಯೋಚಿಸದಷ್ಟೂ..

ನಾವೂ ಅದೆಂತಹ .
ಪಕ್ಕಾ ‌ವ್ಯಾಪಾರಸ್ಥರೆಂದರೆ
ಇಬ್ಬರೂ ಒಬ್ಬರೆಡೆ ಇನ್ನೊಬ್ಬರು
ಯೋಚಿಸುವಾಗಲೆ
ದಾಳ ಎಸೆಯಲು
ತಯಾರಿರುವದು ತಿಳಿದೆ
ಕಾಯಿ ನಡೆಸುವ
ಜಾಣ್ಮೆಯವರು..

ಹೌದು ನಮಗೀಗ
ಹೀಗೆ ಲೆಕ್ಕದಲ್ಲಿ
ಹೆಜ್ಹೆಯಿಡುವದನ್ನು
ಈ ದುಷ್ಟ ತಂತ್ರಗಾರಿಕೆ
ಕಲಿಸಿದೆ
ಮರ್ಯಾದೆಯ ಮಹಲಿನಲಿ
ಒಬ್ವರಿಗೊಬ್ವರು ನವೆಯುತ್ತ
ನವೆದುದು ಯಾರಿಗೂ
ಗೊತ್ತಿರದಂತೆ
ಮುಖದ
ಮೇಲೆ ನಗೆಯ ಲೇಪನ
ಮಾಡಿರುತ್ತೇವೆ

ಹೀಗೇ ಒಂದು ದಿನ‌ ನಾವು
ಕಾಣೆಯಾಗುತ್ತೇವೆ
ಅಂದು ಒಬ್ಬರ ಅಗಲಿಕೆಗೆ
ಇನ್ನೊಬ್ಬರು ಸಾರ್ವಜನಿಕವಾಗಿ
ಕಣ್ಣಿರು ಹಾಕದಷ್ಟು
ಸಭ್ಯತೆಯಲಿ ನೋವನ್ನು
ಕಾಪಿಡುತ್ತೇವೆ
ಮರುಗುವ ಮನಕೆ
ಸಾಂತ್ವನ ಹೇಳುತ್ತೇವೆ

ಕವಿತೆಯ ಸಂಗ
ಮಾಡೊದ ತಪ್ಪಿಗೆ
ಹೀಗೆ ಬರೆದು
ನೋವನೊರೆದು
ಕಣ್ಣೀರ ನುಂಗಿದವರ
ಪಾಳಿಗೆ
ಹೊಸ ಹೆಸರು
ಬರೆದು ಮೌನದಲಿರುತ್ತೆವೆ

ಅಲ್ಲ ಖಂಡಿತಾ ಅಲ್ಲ
ಇದು ನಮ್ಮದಷ್ಟೇ ಹಾಡು
ಎರಡು ದೋಣಿಯಲಿ
ಕಾಲಿಟ್ಟು ಪ್ರತಿಯೊಬ್ಬರದೂ
ಇದೇ ಜಾಡು


  • ವೈ ಎಂ.ಯಾಕೊಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading