ರಾಷ್ಟ್ರಧ್ವಜ ತಯಾರಾಗುವುದು ಎಲ್ಲಿ ಗೊತ್ತೇ?

ಕರ್ನಾಟಕದ ಹುಬ್ಬಳ್ಳಿಯ ಸಮೀಪದ ಬೆಂಗೇರಿ ಗ್ರಾಮದಲ್ಲಿ ಭಾರತದ ಏಕ ಮಾತ್ರ ಅಧಿಕೃತ ರಾಷ್ಟ್ರೀಯ ಧ್ವಜ ಉತ್ಪಾದನಾ ಘಟಕವಿದೆ. 

ಕರ್ನಾಟಕ ರಾಜ್ಯದ ಹುಬ್ಬಳ್ಳಿಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಹಳ್ಳಿ ಬೆಂಗೇರಿ. ಹುಬ್ಬಳ್ಳಿಯ ಹೆಚ್ಚಿನ ಜನರಿಗೂ ಈ ಊರಿನ ಪರಿಚಯ ಅಷ್ಟಾಗಿ ಇಲ್ಲ. ಆದರೆ ಈ ಊರು ನವಭಾರತದ ಇತಿಹಾಸ ಬರೆದಿರುವ ಹಾಗೂ ಬರೆಯುತ್ತಿರುವ ಮಹತ್ವವಾದ ಸ್ಥಳ.

fla

ಫೋಟೋ ಕೃಪೆ : LBB

ಬೆಂಗೇರಿಯ ಆಸಕ್ತಿದಾಯಕ ವಿಷಯವೆಂದರೆ ‘ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ’ (ಕೆಕೆಜಿಎಸ್ಎಸ್) ಇದು ಭಾರತದ ಏಕಮಾತ್ರ ಅಧಿಕೃತ ರಾಷ್ಟ್ರೀಯ ಧ್ವಜ ಉತ್ಪಾದನಾ ಘಟಕ. ಹೌದು, ಸತ್ಯ! ‘ಕೆಕೆಜಿಎಸ್ಎಸ್’ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಭಾರತ ಆಯೋಗದಿಂದ ಇಡೀ ಭಾರತದ ಏಕೈಕ ಧ್ವಜ ತಯಾರಕ ಮತ್ತು ಪೂರೈಕೆದಾರ ಘಟಕ ಎಂದು ಪ್ರಮಾಣೀಕರಿಸಿದೆ.

ನವೆಂಬರ್ ೧, ೧೯೫೭ ರಲ್ಲಿ ‘ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ’ ಸ್ಥಾಪಿಸಲಾಯಿತು. ಮತ್ತು ೨೦೦೪ ರಲ್ಲಿ ರಾಷ್ಟ್ರೀಯ ಧ್ವಜ ಉತ್ಪಾದನಾ ಘಟಕವೆಂದು ಮರು ಸ್ಥಾಪಿಸಲಾಯಿತು. ೨೦೦೬ರಲ್ಲಿ ‘ಕೆಕೆಜಿಎಸ್ಎಸ್’ ಅದರ ಶ್ರೇಷ್ಠತೆಯ ಪ್ರಶಸ್ತಿ ಜೊತೆಗೆ ಭಾರತೀಯ ಸ್ಟ್ಯಾಂಡರ್ಸ್ ಬ್ಯೂರೋ (bureau of indian standards {BIS}) ನಿಂದ ಅಧಿಕೃತ ಮಾನ್ಯತೆಯೂ ದೊರಕಿತು.

flag3

ಫೋಟೋ ಕೃಪೆ : twitter

ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದಿಂದ ಮಾನ್ಯತೆ ದೊರೆಯುವುದು ಅಷ್ಟು ಸುಲಭದ ವಿಷಯವಲ್ಲ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.

ಭಾರತದ ಧ್ವಜವನ್ನು  ೯ ಅಳತೆಯಲ್ಲಿ ತಯಾರಿಸಲಾಗುತ್ತದೆ. ಭಾರತದ ಧ್ವಜ ಸಂಹಿತೆಯ ಪ್ರಕಾರ ಅತ್ಯಂತ ಚಿಕ್ಕ ಅಳತೆ ಎಂದರೆ ಅದು ೬ * ೪ ಇಂಚುಗಳು (೧೫೦ * ೧೦೦ಮಿ.ಮೀ) ಮತ್ತು ದೊಡ್ಡದೆಂದರೆ ೨೧ * ೧೪ಅಡಿ (೬೩೦೦ * ೪೨೦೦ ಮಿ.ಮೀ).

flag5

ಫೋಟೋ ಕೃಪೆ : You Tube

ಭಾರತದ ಧ್ವಜದಲ್ಲಿ ಅಂದರೆ ಬಣ್ಣದಲ್ಲಿ, ಅಳತೆಯಲ್ಲಿ, ದಾರದ ಎಳೆಯಲ್ಲಿ, ನೂರಿನಲ್ಲಿ ಅಥವಾ ಧ್ವಜಕ್ಕೆ ಸಂಬಂಧಿಸಿದಂತೆ ಇನ್ಯಾವುದೇ ರೀತಿಯ ಲೋಪದೋಷಗಳು ಕಂಡು ಬಂದರೆ ಅದನ್ನು ಭಾರತದ ಧ್ವಜ ಸಂಹಿತೆ ೨೦೦೨ ರ ನಿಬಂಧನೆಗಳ ಪ್ರಕಾರ  ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು. ಮತ್ತು ದಂಡ ಅಥವಾ ಜೈಲು ಶಿಕ್ಷೆ ಇಲ್ಲವೇ ದಂಡ ಮತ್ತು ಜೈಲು ಶಿಕ್ಷೆಗೆ ಅರ್ಹರಾಗಿರುತ್ತಾರೆ.

ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಈ ಧ್ವಜಗಳನ್ನು ಉತ್ಪಾದಿಸಿ ಸಿದ್ಧಪಡಿಸುವುದು ಬೆರಳೆಣಿಕೆಯ ಮಹಿಳಾ ಕಾರ್ಮಿಕರು ಮಾತ್ರ.  ಆದರೆ ಇಲ್ಲಿ ಅವರಿಗೆ ಬೇಕಾದಷ್ಟು ಹಣದ ಗಳಿಕೆಯನ್ನು ಮಾಡಲಾಗದ ನೋವಿದ್ದರೂ,  ಅವರು ತಯಾರಿಸಿದ ಸಿದ್ಧಪಡಿಸಿದ ಧ್ವಜಕ್ಕೆ ಗಣ್ಯರಿಂದ, ಸೈನಿಕರಿಂದ ಹಾಗೂ ಕೋಟ್ಯಂತರ ಜನಗಳಿಂದ ಗೌರವ ಸಿಗುತ್ತದೆ ಎಂದು ಹೆಮ್ಮೆ ಪಡುತ್ತಾರೆ. ದೇಶಕ್ಕಾಗಿ ತಾವು ಮಾಡುತ್ತಿರುವ ಅಳಿಲು ಸೇವೆ ಎಂದು ಅವರು ಭಾವಿಸುತ್ತಾರೆ.

ಈ  ಹೆಂಗಳೆಯರ ಸೇವೆಗೆ ನಮ್ಮ ಆಕೃತಿ ಕನ್ನಡ ಬಳಗದಿಂದ ಒಂದು ಸಲಾಂ.

(ವಿಷಯ ಸಂಗ್ರಹ :  http://www.tripoto.com)


  • ಕಾವ್ಯ ದೇವರಾಜ್

amma

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW